ಶಿವಮೊಗ್ಗದಲ್ಲಿ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ, ಮೀಟರ್ ಬಳಕೆ ಕಡ್ಡಾಯಕ್ಕೆ ಗಡುವು ಫಿಕ್ಸ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 1 NOVEMBER 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA | ನಗರದಲ್ಲಿ ಸಂಚರಿಸುವ ಆಟೋಗಳ ಪ್ರಯಾಣ ದರವನ್ನು ನವೆಂಬರ್ 14 ರಂದು ಪ್ರಕಟಿಸಲಾಗುವುದು. ದರ ನಿಗದಿಪಡಿಸಿದ 15 ದಿನ ಬಳಿಕ ನಗರದಲ್ಲಿ ಎಲ್ಲಾ ಆಟೋಗಳಿಗೆ ಮೀಟರ್ (AUTO FARE) ಕಡ್ಡಾಯವಾಗಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.

Shimoga Nanjappa Hospital

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ಆಟೋ ಪ್ರಯಾಣದ ದರ ಆರಂಭದ ಒಂದೂವರೆ ಕಿ.ಮೀ.ಗೆ 40 ರಿಂದ 50 ರೂ.ವರೆಗೆ ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದೀರಿ. ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ  ಮೊದಲ ಹಂತದಲ್ಲಿ 40 ರೂ.ಗಳಿಗೆ ನಿಗದಿ ಮಾಡಿರುವ ಮಾಹಿತಿ ಇದೆ. ಇತರೆ ಜಿಲ್ಲೆಗಳಲ್ಲಿ ಯಾವ ದರ ನಿಗದಿ ಮಾಡಿದ್ದಾರೆ ಎಂಬ ವರದಿ ತರಿಸಿಕೊಂಡು ಅಂತಿಮ ದರವನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಗರ್ ಭಾಷಾ ಮಾತನಾಡಿ, ಆಟೋ ಪ್ರಯಾಣ (AUTO FARE) ದರವನ್ನು 50 ರೂ.ಗಳಿಗೆ ಮೊದಲ ಹಂತದಲ್ಲಿ ನಿಗದಿ ಮಾಡಬೇಕು. ನಂತರದ ಪ್ರತಿ ಕಿಮೀಗೆ 20 ರೂ. ನಿಗದಿ ಮಾಡಬೇಕು ಎಂದು ಕೋರಿದರು.

(AUTO FARE)

ಮೀಟರ್ ಕಡ್ಡಾಯ

ಪರಿಷ್ಕೃತ ದರ ನಿಗದಿಯಾದ ಮೇಲೆ ನಗರದಲ್ಲಿ ಮೀಟರ್ ಬಳಕೆ ಕಡ್ಡಾಯವಾಗಲಿದೆ. ಡಿ.1ರಿಂದ ಎಲ್ಲಾ ಆಟೋಗಳಲ್ಲಿ ಮೀಟರ್ ಬಳಕೆ ಮಾಡಬೇಕು. ಮೀಟರ್ ಪರಿಷ್ಕರಣೆ ಸಂಬಂಧ ಕ್ಯಾಂಪ್ ನಡೆಸಲು ಯೋಜಿಸಿವುದಾಗಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದರು.

ಕ್ಲಿಕ್ ಮಾಡಿ ಇದನ್ನೂ ಓದಿ ದುಬಾರಿಯಾಗಲಿದೆ ನಂದಿನಿ ಹಾಲು, ಸದ್ಯದಲ್ಲೇ ದರ ಹೆಚ್ಚಳ

ಸಂಘದ ಕಿರಣ್ ಮಾತನಾಡಿ, ನಗರ ವ್ಯಾಪ್ತಿಯನ್ನು 10 ಕಿಮೀ ಎಂದು ಹಿಂದೆ ನಿಗದಿ ಮಾಡಿದ್ದಾರೆ. ಈಗ ನಗರ ಪ್ರದೇಶ ಸಾಕಷ್ಟು ವಿಸ್ತರಣೆ ಆಗಿದೆ. ಹಾಗಾಗಿ ವ್ಯಾಪ್ತಿಯನ್ನು 20 ಕಿಮೀವರೆಗೆ ವಿಸ್ತರಣೆ ಮಾಡಬೇಕು ಎಂದು ಕೋರಿದರು.

ನಗರ ವ್ಯಾಪ್ತಿಯನ್ನು 10 ಕಿಮೀನಿಂದ 20 ಕಿಮೀವರೆಗೆ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಸಾರಿಗೆ ಅಧಿಕಾರಿ ಗಂಗಾಧರ, ಟ್ರಾಫಿಕ್ ಇನ್ಸ್‌ಪೆಕ್ಟರ್ ಸಂತೋಷ್‌ಕುಮಾರ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

auto drivers meeting at dc office

auto drivers meeting at dc office in Shimoga

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment