ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |5 JANUARY 2023
SHIMOGA : ನಗರದಲ್ಲಿ ಈಗಾಗಲೆ ಆಟೋಗಳಿಗೆ ಮೀಟರ್ (auto meter) ಕಡ್ಡಾಯಗೊಳಿಸಲಾಗಿದೆ. ಕ್ಯಾಲಿಬರೇಷನ್ ಆಗುವುದು ಬಾಕಿ ಇರುವುದರಿಂದ 15 ದಿನ ಹೆಚ್ಚುವರಿ ಕಾಲವಕಾಶ ನೀಡಿಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈಗಾಗಲೆ ಶೇ.60ರಷ್ಟು ಆಟೋಗಳಿಗೆ ಮೀಟರ್ (auto meter) ಅಳವಡಿಕೆಯಾಗಿದೆ ಎಂದರು.
ಹೆಚ್ಚುವರಿ ಕಾಲವಕಾಶ
ಹೊಸ ಆಟೋಗಳಿಗೆ ಮೀಟರ್ ಗಳನ್ನು ಅಳವಡಿಸಲಾಗಿದೆ. ಅವುಗಳು ಸಮರ್ಪಕವಾಗಿವೆ. ಆದರೆ ಹಳೆಯ ಆಟೋಗಳ ಮೀಟರ್ ಗಳನ್ನು ಹೊಸ ದರಕ್ಕೆ ಕ್ಯಾಲಿಬರೇಷನ್ ಮಾಡಬೇಕಿದೆ. ಆ ಕೆಲಸ ಪ್ರಗತಿಯಲ್ಲಿದೆ. ಶಿವಮೊಗ್ಗದಲ್ಲಿ ಕ್ಯಾಲಿಬರೇಷನ್ ಕಾರ್ಯ ನಡೆಯುತ್ತಿದೆ. ಇದೆ ಕಾರಣಕ್ಕೆ 15 ದಿನ ಹೆಚ್ಚುವರಿ ಕಾಲವಕಾಶ ನೀಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಡಿಸಿ, ಎಸ್ಪಿಗೆ ಮೀಟರ್ ಹಾಕದೆ, ಯದ್ವ ತದ್ವ ದುಡ್ಡು ಕೇಳಿದ ಆಟೋ ಚಾಲಕ, ಮುಂದೇನಾಯ್ತು?
ಇವೆಲ್ಲ ಮುಗಿದ ಬಳಿಕ ಆಟೋ ಮೀಟರ್ ಕಡ್ಡಾಯವಾಗಿ ಬಳಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಏನಿದು ಕ್ಯಾಲಿಬರೇಷನ್?
ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋ ಪ್ರಯಾಣ ದರ ಹೆಚ್ಚಳ, ಏರಿಕೆಯಾಗಿದ್ದೆಷ್ಟು? ಈವರೆಗೂ ಇದ್ದಿದ್ದೆಷ್ಟು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422