SHIVAMOGGA LIVE NEWS | 28 AUGUST 2023
SHIMOGA : ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ಇವತ್ತಿನಿಂದ ಬಿಸಿ ಮುಟ್ಟಲಿದೆ. ಟ್ರಾಫಿಕ್ ರೂಲ್ಸ್ ಪಾಲಿಸದೆ ಮನಸೋಯಿಚ್ಛೆ ವಾಹನ ಚಲಾಯಿಸಿದರೆ ಇವತ್ತಿನಿಂದ ಆಟೊಮ್ಯಾಟಿಕ್ ದಂಡ (Automatic Fine) ಬೀಳಲಿದೆ. ಮನೆ ಬಾಗಿಲಿಗೆ ದಂಡದ ನೊಟೀಸ್ ತಲುಪಲಿದೆ.
ಶಿವಮೊಗ್ಗ ನಗರದಲ್ಲಿ ಇಂದಿನಿಂದ ಸ್ಮಾರ್ಟ್ ಸಿಟಿ (Smart City Project) ಯೋಜನೆ ಅಡಿ ಸಿದ್ಧಪಡಿಸಿರುವ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಟಿಎಂಎಸ್) ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.
ಈ ವ್ಯವಸ್ಥೆ ಹೇಗೆ ಕೆಲಸ ಮಾಡಲಿದೆ ಎಂದು ಪೂರ್ತಿ ಓದಲು ಈ ನೀಲಿ ಕಲರ್ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ : ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ನೊಟೀಸ್, ಯೋಜನೆ ಜಾರಿಗೆ ದಿನಾಂಕ ಫಿಕ್ಸ್
ಯಾವುದಕ್ಕೆಲ್ಲ ದಂಡ ಫಿಕ್ಸ್?
ದಂಡ 1 : ಸಿಗ್ನಲ್‌ಗಳಲ್ಲಿ ರೆಡ್ ಲೈಟ್ ಇದ್ದರು ವಾಹನಗಳನ್ನು ನುಗ್ಗಿಸುವುದು, ಜೀಬ್ರಾ ಕ್ರಾಸ್ ದಾಟಿ ಮುಂದೆ ನಿಲ್ಲುವುದು.
ದಂಡ 2 : ಸಿಗ್ನಲ್ ಲೈಟ್‌ನಲ್ಲಿ ಫ್ರೀ ಲೆಫ್ಟ್ ತೋರಿಸದೆ ಇದ್ದಾಗಲೂ ವಾಹನಗಳನ್ನು ಅನಾಯಾಸವಾಗಿ ಎಡಗಡೆಗೆ ತಿರುಗಿಸಿ ಚಲಿಸುವುದು.
ದಂಡ 3 : ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾವಣೆ ಮಾಡುವುದು. ಹಾಫ್ ಹೆಲ್ಮೆಟ್ ಧರಿಸಿ ಬೈಕುಗಳಲ್ಲಿ ಓಡಾಡುವುದು.
ದಂಡ 4 : ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತಲೂ ಹೆಚ್ಚು ಮಂದಿ ಪ್ರಯಾಣ ಮಾಡುವುದು. ಅತಿ ವೇಗ ಮತ್ತು ಅಡ್ಡಾದಿಡ್ಡ ವಾಹನ ಓಡಿಸುವುದು.
ದಂಡ 5 : ವಾಹನಗಳ ಚಲಾವಣೆ ವೇಳೆ ಮೊಬೈಲ್ ಫೋನ್ ಬಳಕೆ ಮಾಡುವುದು.
ದಂಡ 6 : ಸೀಟ್ ಬೆಲ್ಟ್ ಧರಿಸದೆ ಕಾರು ಚಲಾವಣೆ ಮಾಡುವುದು.
ದಂಡ 7 : ಒನ್ ವೇ ರಸ್ತೆಯಲ್ಲಿ ಮತ್ತೊಂದು ದಿಕ್ಕಿನಿಂದ ವಾಹನದಲ್ಲಿ ಸಂಚರಿಸುವುದು.
ಹೀಗೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸ್ಮಾರ್ಟ್ ಸಿಟಿ ಕ್ಯಾಮರಾಗಳಲ್ಲಿ ಸೆರೆಯಾಗಲಿದೆ. ಇದು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ಗೆ ತೆಲುಪಲಿದೆ. ಅಲ್ಲಿ ಪರಿಶೀಲನೆ ನಡೆಸಿ ವಾಹನ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ನೊಟೀಸ್ ಬರಲಿದೆ. ಇಲ್ಲವಾದಲ್ಲಿ ಮನೆಗೆ ನೊಟೀಸ್ (Automatic Fine) ತಲುಪಲಿದೆ.
ಎಷ್ಟು ಸೂಕ್ಷ್ಮವಾಗಿವೆ ಗೊತ್ತಾ ಕ್ಯಾಮರಾಗಳು?
ಶಿವಮೊಗ್ಗದ ವಿವಿಧ ರಸ್ತೆಗಳಲ್ಲಿ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಾಹನಗಳು ಎಷ್ಟೇ ವೇಗದಲ್ಲಿದ್ದರು ಅವುಗಳ ನಂಬರ್ ಪ್ಲೇಟ್ ಸುಲಭಕ್ಕೆ ಗೊತ್ತಾಗಲಿದೆ. ಇನ್ನು, ಕಾರಿನ ಒಳಗಿರುವವರು ಸೀಟ್ ಬೆಲ್ಟ್ ಧರಿಸದೆ ಇರುವುದು ಕೂಡ ಸ್ಪಷ್ಟವಾಗಿ ಗೊತ್ತಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಲು ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಮಾಡಿದ್ದಾರೆ. ಇಲ್ಲಿದೆ ವಿಡಿಯೋ.
View this post on Instagram
ಟ್ರಾಫಿಕ್ ಪೊಲೀಸರನ್ನು ಕಂಡಾಗಲಷ್ಟೆ ಹೆಲ್ಮೆಟ್ ಧರಿಸುವುದು, ಪೊಲೀಸರು ಇದ್ದಾಗ ಮಾತ್ರ ಸಿಗ್ನಲ್‌ನಲ್ಲಿ ನಿಲ್ಲುತ್ತಿದ್ದವರಿಗೇನು ಕಡಿಮೆ ಇಲ್ಲ. ಸಂಚಾರ ನಿಯಮ ಪಾಲಿಸದೆ ಈ ವರೆಗೂ ಮನಸೋಯಿಚ್ಛೆ ವಾಹನ ಚಲಾಯಿಸುತ್ತಿದ್ದವರಿಗೆ ಇನ್ಮುಂದೆ ಬಿಸಿ ತಟ್ಟಲಿದೆ. 24 ಗಂಟೆಯು ಕ್ಯಾಮರಾಗಳು ಚಾಲನೆಯಲ್ಲಿರಲಿವೆ. ಇವತ್ತಿನಿಂದಲೆ ನೊಟೀಸ್ ಜಾರಿ ಆರಂಭವಾಗಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200