SHIVAMOGGA LIVE NEWS | 18 MARCH 2023
SHIMOGA : ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ (Azan) ಕೂಗಿದ್ದ ಸ್ಥಳವನ್ನು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಇವತ್ತು ಗೋ ಮೂತ್ರ ಸಿಂಪಡಿಸಿ ಶುದ್ಧೀಕರಣ ಮಾಡಿದರು. ಪೊಲೀಸರ ಪ್ರತಿರೋಧದ ನಡುವೆಯು ಗೋ ಮೂತ್ರ ಸಿಂಪಡನೆ ಮಾಡಲಾಯಿತು. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗೋ ಮೂತ್ರ ಸಿಂಪಡಣೆ
ಪ್ರತಿಭಟನೆ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಮೂತ್ರ ಸಿಂಪಡಣೆ ಮಾಡಲು ಮುಂದಾದರು.
ಹಿಂದೂ ಕಾರ್ಯಕರ್ತರು ಬಾಟಲಿಯಲ್ಲಿ ಗೋ ಮೂತ್ರ ತಂದಿದ್ದರು.
ಆಜಾನ್ (Azan) ಕೂಗಿದ್ದ ಸ್ಥಳದಲ್ಲಿ ಗೋ ಮೂತ್ರ ಸಿಂಪಡಣೆ ಮಾಡಿದರು. ಕೂಡಲೆ ದೌಡಾಯಿಸಿದ ಪೊಲೀಸರು ಗೋ ಮೂತ್ರ ಸಿಂಪಡಣೆ ಮಾಡದಂತೆ ತಡೆಯಲು ಮುಂದಾದರು. ಆದರೂ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ, ಘೋಷಣೆ ಕೂಗಿದರು.
‘ಪವಿತ್ರ ಸ್ಥಳ ಈಗ ಶುದ್ಧೀಕರಣವಾಗಿದೆ’
ಆಜಾನ್ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆ ಖಂಡಿಸಿ ಮುಸ್ಲಿಂ ಸಮುದಾಯದ ಯುವಕರು ಮಾ.17ರಂದು ಪ್ರತಿಭಟನೆ ನಡೆಸಿದರು. ಈ ವೇಳೆ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದ. ಈ ವಿಡಿಯೋ ವೈರಲ್ ಆಗಿದ್ದು, ವಿವಾದ ಹುಟ್ಟುಹಾಕಿತ್ತು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್, ದಾಖಲಾಯ್ತು ಕೇಸ್