ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಜೂನ್ 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಮಳೆ, ಚಳಿಯಿಂದಾಗಿ ನಡುಗುತ್ತ ರಸ್ತೆ ಬದಿಯಲ್ಲಿ ಆಶ್ರಯ ಪಡೆದು ಮಲಗಿರುವ ನಿರ್ವಸತಿಗರಿಗೆ ಯುವಕರ ತಂಡವೊಂದು ಬೆಚ್ಚನೆಯ ಬೆಡ್ ಶೀಟ್ ವಿತರಿಸಿದೆ. ಸದ್ದಿಲ್ಲದೆ ಈ ಸೇವೆ ಸಲ್ಲಿಸಿರುವ ಯುವಕರ ಕೆಲಸ ಜನರ ಮೆಚ್ಚುಗೆ ಗಳಿಸಿದೆ.
ಮಳೆ, ಚಳಿಯಿಂದ ಬೆಚ್ಚಗಿರಿ
ಶಿವಮೊಗ್ಗದ ಯುವಕರ ತಂಡವೊಂದು ನಗರದ ವಿವಿಧೆಡೆ ಇರುವ ನಿರ್ಗತಿಕರಿಗೆ ಬೆಡ್ ಶೀಟ್ ವಿತರಿಸಿದೆ. ಖಾಸಗಿ ಬಸ್ ನಿಲ್ದಾಣ, ಫುಟ್ ಪಾತ್, ವಿವಿಧ ಬಸ್ ಸ್ಟಾಪ್‌ಗಳಲ್ಲಿ ಆಶ್ರಯ ಪಡೆದಿರುವ ನಿರ್ಗತಿಕರಿಗೆ ಬೆಚ್ಚನೆ ಬೆಡ್ ಶೀಟ್ ನೀಡಿದ್ದಾರೆ.
ಬೆಡ್ ಶೀಟ್ ಹೊದೆಸಿ, ಕೈ ಮುಗಿದರು
ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ, ಚಳಿಯೂ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ಮಲಗಿರುವವರು ಚಳಿ ತಡೆಯಲಾಗದೆ ಗೋಣಿ ಚೀಲ, ಹರಕಲು ಬಟ್ಟೆಗಳನ್ನು ಹೊದ್ದು ಮಲಗುತ್ತಿದ್ದಾರೆ. ಇವರನ್ನು ಪತ್ತೆ ಹಚ್ಚಿ, ಬೆಡ್ ಶೀಟ್ ವಿತರಿಸಿದ ಯುವಕರ ತಂಡ, ಬೆಚ್ಚಗೆ ನಿದ್ರೆ ಮಾಡುವಂತೆ ತಿಳಿಸಿದರು. ಅಲ್ಲದೆ ಆರೋಗ್ಯದೆಡೆಗೆ ಗಮನ ಹರಿಸುವಂತೆ ಸಲಹೆ ನೀಡಿ, ಕೈ ಮುಗಿದು ಬಂದಿದ್ದಾರೆ.

ರಾಹುಲ್ ಗಾಂಧಿ ಹುಟ್ಟುಹಬ್ಬದ ಕೊಡುಗೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾತ್ರಿ ಸದ್ದಿಲ್ಲದೆ ಹೋಗಿ ಬೆಡ್ ಶೀಟ್ ವಿತರಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಟಿ.ವಿ.ರಂಜಿತ್, ಶಿವಮೊಗ್ಗ ನಗರಾಧ್ಯಕ್ಷ ಹೆಚ್.ಪಿ. ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶರವಣ, ನಗರ ಉಪಾಧ್ಯಕ್ಷ ಕುಮರೇಶ್ , ನಗರ ಪದಾಧಿಕಾರಿಗಳಾದ ಶಂಕರ್, ಕ್ಲೆಮೆಂಟ್, ಅರುಣ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






