ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟೆಂಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ರಾತ್ರೋರಾತ್ರಿ ಕಳ್ಳರ ಹಾಗೆ ಹಿಂದೂ ದೇಗುಲಗಳನ್ನು ಕೆಡವಿದಾಗ ಹಿಂದುತ್ವದ ಕವಚ ತೊಟ್ಟ ಹಿಂದುತ್ವವಾದಿಗಳು ಮತ್ತು ಸರ್ಕಾರ ಎಲ್ಲಿ ಹೋಗಿತ್ತು ಅಂತಾ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಒಂದು ವೇಳೆ ಈ ಸಂದರ್ಭ ಕಾಂಗ್ರೆಸ್ ಸರ್ಕಾರಿವಿದ್ದಿದ್ದರೆ ಅಥವಾ ಮುಸ್ಲಿಂ ಅಧಿಯೊಬ್ಬ ದೇಗುಲ ತೆರವು ಮಾಡಿಸಿದ್ದರೆ ಈ ಹಿಂದುತ್ವವಾದಿಗಳು ರಾಜ್ಯಕ್ಕೆ ಬೆಂಕಿ ಹಚ್ಚಿಬಿಡುತ್ತಿದ್ದರು ಎಂದು ಆರೋಪಿಸಿದರು.
ಕಳ್ಳರ ಹಾಗೆ ದೇಗುಲ ಒಡೆಸಿದ್ದೇಕೆ?
ರಾತ್ರೋರಾತ್ರಿ ಕಳ್ಳರ ಹಾಗೆ ದೇವಸ್ಥಾನವನ್ನು ಒಡೆಸಿದ್ದಾರೆ. ಅಲ್ಲಿ ಬಿಜೆಪಿ ಸಂಸದರಿದ್ದಾರೆ. ಸರ್ಕಾರವು ಇವರದ್ದೆ. ಆದರೆ ಅಧಿಕಾರಿಗಳು ದೇಗುಲ ಒಡೆಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಇದು ಯಾವ ರೀತಿಯ ಸರ್ಕಾರ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.

ಎಲ್ಲಿ ಹೋದರು ಶೋಭಾ ಮೇಡಂ?
ಈ ಹಿಂದೆ ಎಲ್ಲಾ ವಿಚಾರಕ್ಕೂ ಕೂಗಾಡುತ್ತಿದ್ದ ಶೋಭಾ ಮೇಡಂ ಈಗ ಎಲ್ಲಿ ಹೋಗಿದ್ದಾರೆ. ಅವರ ಬಾಯಿ ಈಗ ಬಂದ್ ಆಗಿದೆಯಾ. ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಆದಾಗಲೂ ಬಾಯಿ ಬಿಡಲಿಲ್ಲ. ದೇಗುಲ ಕೆಡವಿದ ವಿಚಾರದಲ್ಲೂ ಅವರು ಮಾತಾಡಲಿಲ್ಲವೇಕೆ. ಚುನಾವಣೆ ಬಂದಾಗ ಮಾತ್ರ ಬಾಂಬ್ ಹಾಕುತ್ತಿದ್ದರು ಎಂದು ಟೀಕಿಸಿದರು.
ಹಾಗಾದರೆ ಇದೇನಾ ಹಿಂದುತ್ವ?
ದೇಗುಲ ಕೆಡವಿದಾಗ ಅಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಕಣ್ಣೀರು ಹಾಕುತ್ತಿದ್ದರು. ಹಿಂದುತ್ವ ಅಂದರೆ ಇದೇನಾ ಎಂದು ಪ್ರಶ್ನಿಸಿದರು. ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಕೆಡವುವಾಗ ಪಕ್ಕದಲ್ಲೇ ಪುನರ್ ಸ್ಥಾಪನೆಗೆ ವ್ಯವಸ್ಥೆ ಮಾಡಬೇಕು ಎಂದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






