ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 27 DECEMBER 2020
ಶಿವಮೊಗ್ಗದ ಯುವಕರ ತಂಡವೊಂದು ಸಿದ್ಧಪಡಿಸಿರುವ ಕನ್ನಡದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಲ್ಬಂ ಸಾಂಗ್ ಲೋಕದಲ್ಲಿ ಹೊಸ ‘ಭರವಸೆ’ ಮೂಡಿಸಿದೆ. ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಹಾಡು ವೈರಲ್ ಆಗಲು ಕಾರಣವೇನು?
ಕನ್ನಡದ ಬಗ್ಗೆ, ಕರುನಾಡಿನ ಕುರಿತು, ಬಾಯಿಯಲ್ಲಿ ನೀರು ತರಿಸುವ ಆಹಾರದ ವಿಚಾರವನ್ನು ಒಳಗೊಂಡು ಹಾಡು ರಚಿಸಲಾಗಿದೆ. ಮಲೆನಾಡು, ಹಳೆ ಮೈಸೂರು ಭಾಗ, ಕರಾವಳಿ, ಉತ್ತರ ಕರ್ನಾಟಕದ ಹೆಗ್ಗುರುತುಗಳ ಕುರಿತು ಹಾಡು ಬೆಳಕು ಚೆಲ್ಲಲಿದೆ. ಕನ್ನಡ, ಕರ್ನಾಟಕ, ಕನ್ನಡಿಗರ ಬಗ್ಗೆ ಅಭಿಮಾನ ಮೂಡಿಸಲಿದೆ. ಇದೆ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಡು ವೈರಲ್ ಆಗಿದೆ.
ಶಿವಮೊಗ್ಗದ ಹುಡುಗರ ಸಾಂಗ್
ವಿಕಸನ ಕ್ರಿಯೇಷನ್ಸ್ ಬ್ಯಾನರ್‍ನ ಅಡಿಯಲ್ಲಿ ಹೊರಬಂದಿರುವ ‘ಭರವಸೆ’ ಹಾಡು, ಆಲ್ಬಂ ಸಾಂಗ್‍ಗಳ ಲೋಕದಲ್ಲಿ ಭರವಸೆ ಮೂಡಿಸಿದೆ. ಶಿವಮೊಗ್ಗದ ಪೃಥ್ವಿ ಗೌಡ, ಪಾರ್ಥ ಚಿರಂತನ್, ವಿನಯ್ ಶಿವಮೊಗ್ಗ ಅವರು ಹಾಡಿದ್ದಾರೆ. ಈ ಮೂವರು ತೆರೆ ಮೇಲೆ ಕಾಣಿಸಿಕೊಂಡಿದ್ದು, ಆಯಾ ಭಾಗಕ್ಕೆ ತಕ್ಕ ಕಾಸ್ಟ್ಯೂಮ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎದೆ ಭಾಷೆಯೇ ಪ್ರೇರಣೆ
ಯುವ ಬ್ರಿಗೇಡ್ ಸಂಘಟನೆ ವತಿಯಿಂದ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಎದೆ ಭಾಷೆ ಕಾರ್ಯಕ್ರಮದಿಂದ ಪ್ರೇರಿತರಾಗಿ ಹಾಡು ರಚಿಸಲಾಗಿದೆ ಎಂದು ಈ ತಂಡ ತಿಳಿಸಿದೆ.
ಹಾಡಿನ ವಿಡಿಯೋ ಇಲ್ಲಿದೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200