SHIVAMOGGA LIVE NEWS
SHIMOGA | ಹೇಳಿಕೊಳ್ಳಲು ಇದು ಶಿವಮೊಗ್ಗ ನಗರದ ಪ್ರಮುಖ ಸರ್ಕಲ್ (CIRCLE). ಆದರೆ ಗುಂಡಿಗೆ ಗಟ್ಟಿ ಇದ್ದವರಷ್ಟೆ ಇಲ್ಲಿ ವಾಹನ ತರಬೇಕಿದೆ.
ಇದು ಎಂ.ಆರ್.ಎಸ್ ಸರ್ಕಲ್ ಭಯಾನಕ ಸ್ಥಿತಿ. ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿರುವ ಎಲ್ಲಾ ಮಾದರಿಯ ಗುಂಡಿಗಳು ಇದೊಂದೆ ಸರ್ಕಲ್’ನಲ್ಲಿ (CIRCLE) ಕಾಣಬಹುದಾಗಿದೆ. ಇದೆ ಕಾರಣಕ್ಕೆ ಈ ಸರ್ಕಲ್’ನಲ್ಲಿ ವಾಹನ ಸವಾರರು ಮೈಯಲ್ಲ ಕಣ್ಣಾಗಿಸಿಕೊಂಡು ಚಾಲನೆ ಮಾಡಬೇಕಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆಳ, ಅಗಲವಾದ ಗುಂಡಿಗಳು
ಎಂ.ಆರ್.ಎಸ್ ಸರ್ಕಲ್’ನಲ್ಲಿ ಭಾರಿ ಗಾತ್ರದ ಗುಂಡಿಗಳಿವೆ. ಒಂದಕ್ಕಿಂತಲೂ ಒಂದು ಆಳ, ಅಗಲವಾಗಿವೆ. ಅಕ್ಕಪಕ್ಕದಲ್ಲೇ ಬೃಹತ್ ಗುಂಡಿಗಳಿರುವುದು ವಾಹನ ಸವಾರರ ಪಾಲಿಗೆ ಅಕ್ಷರಶಃ ನಡುಕ ಹುಟ್ಟಿಸುತ್ತಿದೆ.
PART 1 | ಶಿವಮೊಗ್ಗ – ಭದ್ರಾವತಿ ನಡುವೆ ಇರುವುದು ಹೈವೆ ರಸ್ತೆನೋ, ಯಮಲೋಕದ ದಾರಿನೋ?
ಮಳೆಗಾಲ ಶುರುವಾಗುತ್ತಿದ್ದಂತೆ ಇಲ್ಲಿ ಸಣ್ಣ ಗುಂಡಿಯಾಗಿತ್ತು. ಕೆಲವೇ ದಿನದಲ್ಲಿ ಗುಂಡಿಗಳು ಭಯಾನಕ ಸ್ವರೂಪದಲ್ಲಿ ಬಾಯ್ತೆರೆದು ಕುಳಿತುಕೊಂಡಿವೆ. ಜೋರು ಮಳೆಯಲ್ಲೂ ಇಲ್ಲಿರುವ ಗುಂಡಿಗಳಿಗೆ ಸಿಮೆಂಟ್ ತುಂಬಿ, ಬ್ಯಾರಿಕೇಡ್ ಹಾಕಲಾಗಿತ್ತು. ಆದರೆ ಅದಾಗಿ ವಾರ ಕಳೆಯುವುದರಲ್ಲಿ ಗುಂಡಿಗಳು ಮತ್ತಷ್ಟು ತೀವ್ರ ಸ್ವರೂಪದಲ್ಲಿ ಪ್ರತ್ಯಕ್ಷವಾಗಿವೆ.
ಕಣ್ಮುಚ್ಚಿ ಬಿಡುವಷ್ಟರಲ್ಲಿ ಪ್ರಪಾತ ದರ್ಶನ
ಎಂ.ಆರ್.ಎಸ್ ಸರ್ಕಲ್’ನಲ್ಲಿ ವಾಹನ ಸವಾರರು ಮೈಯ್ಯಲ್ಲ ಕಣ್ಣಾಗಿಸಿಕೊಂಡು ಚಾಲನೆ ಮಾಡಬೇಕು. ಸ್ವಲ್ಪ ಯಾಮಾರಿದರೆ ಒಂದೋ ಗುಂಡಿಗೆ ಬೀಳಬೇಕು, ಇಲ್ಲವಾದಲ್ಲಿ ಹಿಂಬದಿ ವಾಹನದ ಚಕ್ರಕ್ಕೆ ಸಿಲುಕಬೇಕಾಗುತ್ತದೆ. ರಾತ್ರಿ ವೇಳೆಯಂತು ಗುಂಡಿಗಳ ಗಾತ್ರ ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಆಯಾತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಕಾರು, ಆಟೊಗಳ ಕೆಳಭಾಗ ತಾಗಿ ಹಾನಿ ಉಂಟಾಗಿದೆ.
PART 2 | ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಅಪಘಾತ ಆದರಷ್ಟೆ ಗುಂಡಿ ಬಂದ್, ಇಲ್ಲಿದೆ ನೋಡಿ ಉದಾಹರಣೆ
ಸಿಡಿಯುತ್ತವೆ ಜಲ್ಲಿ ಕಲ್ಲುಗಳು
ಗುಂಡಿ ಮಚ್ಚಲು ಕಲ್ಲು, ಮಣ್ಣು, ಸಿಮೆಂಟ್ ಸುರಿಯಲಾಗಿತ್ತು. ಆದರೆ ಕೆಲವೇ ದಿನದಲ್ಲಿ ಇದು ಕಿತ್ತು ಬಂದಿದೆ. ರಸ್ತೆಯ ತುಂಬೆಲ್ಲ ಜೆಲ್ಲಿ ಕಲ್ಲು ಹರಡಿಕೊಂಡಿದೆ. ವಾಹನಗಳ ಚಕ್ರದ ತುದಿಗೆ ಸಿಲುಕಿ ಈ ಜೆಲ್ಲಿ ಕಲ್ಲುಗಳನ್ನು ಸಿಡಿಯುತ್ತಿವೆ. ರಸ್ತೆ ಪಕ್ಕ ಬಸ್ಸಿಗೆ ಕಾಯುತ್ತಿರುವವರು, ನಡೆದು ಹೋಗುವವರು, ಪಕ್ಕದ ವಾಹನದ ಸವಾರರಿಗೆ ತಾಗಿ ಗಾಯವಾಗುತ್ತಿದೆ.
ಇದೆ ಸರ್ಕಲ್’ನಲ್ಲಿ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ನಿತ್ಯ ಸಂಚರಿಸುತ್ತಾರೆ. ಆದರೆ ಈತನ ಗುಂಡಿ ಮುಚ್ಚಿಸಿ, ಜನರ ಪ್ರಾಣ ಉಳಿಸುವತ್ತ ಯಾರೂ ಗಮನ ಹರಿಸದಿರುವುದು ವಿಪರ್ಯಾಸ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ – ಭದ್ರಾವತಿ ಹೈವೆಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.