ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 FEBRUARY 2023
SHIMOGA : ವಿಮಾನ ನಿಲ್ದಾಣದ ಪರಿಶೀಲನೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಧಿಕಾರಿಗಳ ತಂಡ ಭೇಟಿ ನೀಡಲಿದೆ. ಈ ತಂಡದ ಪರಿಶೀಲನೆ ಬಳಿಕವೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಲೈಸೆನ್ಸ್ (Airport Licence) ಸಿಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು ಪ್ರಮುಖ ವಿಚಾರಗಳನ್ನು ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾಲ್ಕು ಪ್ರಮುಖ ಸಂಗತಿ
ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಧಿಕಾರಿಗಳ ತಂಡ ಫೆ.8 ರಿಂದ 10ನೇ ತಾರೀಖಿನೊಳಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದೆ. ಕೊನೆಯ ಪರಿಶೀಲನೆ ನಡೆಸಲಿದೆ. ಈ ತಂಡವೆ ವಿಮಾನ ನಿಲ್ದಾಣಕ್ಕೆ ಲೈಸೆನ್ಸ್ ನೀಡಲಿದೆ.
ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೆ ನಿರ್ವಹಣೆ ಮಾಡಲಿದೆ. ತಾಂತ್ರಿಕವಾಗಿ ಕೇಂದ್ರದ ಎಎಐ ನಿರ್ವಹಿಸಲಿದೆ. ಈಗಲು ವಿಮಾನ ನಿಲ್ದಾಣದ ಕೆಲಸಗಳು ನಡೆಯುತ್ತಿವೆ.
ಶಿವಮೊಗ್ಗಕ್ಕೆ ವಿಮಾನ ಹಾರಾಟ ಸಂಬಂಧ ಇವತ್ತು ಎರಡು ಏರ್ ಲೈನ್ಸ್ ಜೊತೆಗೆ ಸಭೆ ನಡೆಯುತ್ತಿದೆ. ಇಂಡಿಗೋ ಮತ್ತು ಸ್ಟಾರ್ ಏರ್ ಲೈನ್ಸ್ ಜೊತೆಗೆ ಮಾತುಕತೆ ನಡೆಯುತ್ತಿದೆ.
ರಾಜ್ಯದ ಹಲವು ವಿಮಾನ ನಿಲ್ದಾಣಗಳು ಕಾಂಕ್ರೀಟ್ ಮ್ಯೂಸಿಯಂಗಳಂತಾಗಿವೆ. ನಮ್ಮ ವಿಮಾನ ನಿಲ್ದಾಣ ಹಾಗಾಗಬಾರದು ಎಂಬ ಉದ್ದೇಶದಿಂದ ಶಿವಮೊಗ್ಗದಲ್ಲಿ ಟೂರಿಸಂ ರೋಡ್ ಶೋ ಆಯೋಜಿಸಲಾಗಿದೆ. ಈ ಸಂಬಂಧ ದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಭೇಟಿಯಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ನೀಡಿದ್ದೇನೆ. ರಾಷ್ಟ್ರಮಟ್ಟದ ಗೈಡ್ ಗಳನ್ನು ಕರೆತಂದು ರೋಡ್ ಶೋ ನಡೆಸಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಯುವಕ, ಯುವತಿಯರೆ ಎಚ್ಚರ ವಹಿಸುವಂತೆ ಸಂಸದ ರಾಘವೇಂದ್ರ ಸೂಚನೆ