ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಅಕ್ಟೋಬರ್ 2019
ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಅಡೆತಡೆ ನಿವಾರಿಸುವ ನೆಪದಲ್ಲಿ ಮಹಾನಗರ ಪಾಲಿಕೆ ಮತ್ತು ಮೆಸ್ಕಾಂ ಸಿಬ್ಬಂದಿಗಳನ್ನು ಒಳಗೊಂಡ ತಂಡ, ಕೇಬಲ್’ಗಳನ್ನು ನಿರ್ದಾಕ್ಷಿಣ್ಯವಾಗಿ ಕಟ್ ಮಾಡಿದ್ದಾರೆ. ಇದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.
ಜಂಬೂ ಸವಾರಿ ಆಗಮಿಸುವ ಐದು ನಿಮಿಷ ಮೊದಲು ಪಾಲಿಕೆ ಮತ್ತು ಮೆಸ್ಕಾಂ ಸಿಬ್ಬಂದಿಗಳನ್ನು ಒಳಗೊಂಡ ತಂಡ ಕೇಬಲ್’ಗಳನ್ನು ಕಟ್ ಮಾಡುತ್ತ ಸಾಗಿತು. ಟೆಲಿಫೋನ್, ಡಿಶ್ ಮತ್ತು ಇಂಟರ್’ನೆಟ್’ನ ಒಎಫ್’ಸಿ ಕೇಬಲ್’ಗಳಿನ್ನು ತುಂಡು ಮಾಡಲಾಗಿದೆ. ಇದರಿಂದ ಹಲವೆಡೆ ಕೇಬಲ್ ಟಿವಿಗಳು ಬಂದ್ ಆಗಿವೆ. ಇಂಟರ್’ನೆಟ್ ಕೂಡ ಸ್ಥಬ್ಧವಾಗಿದೆ.
ಜಂಬೂ ಸವಾರಿಗಾಗಿ ಒಂದು ವಾರದಿಂದ ತಾಲೀಮು ನಡೆಸಲಾಗುತ್ತಿದೆ. ಈ ವೇಳೆ ಕೇಬಲ್’ಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಿದ್ದರೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ ಯಾವುದೆ ಮುನ್ಸೂಚನೆ ನೀಡದೆ, ಪಾಲಿಕೆ ಮತ್ತು ಮೆಸ್ಕಾಂ ಸಿಬ್ಬಂದಿಗಳು ದಿಢೀರ್ ಕೇಬಲ್ ಕಟ್ ಮಾಡಿದ್ದರಿಂದ ಕೇಬಲ್ ಮತ್ತು ಇಂಟರ್’ನೆಟ್ ಆಪರೇಟರ್’ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಕೇಬಲ್ ಮತ್ತು ಇಂಟರ್’ನೆಟ್ ಸೇವೆಯಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ.
ಇನ್ನು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಲಿಕೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ಕೇಬಲ್’ಗಳನ್ನು ಕಟ್ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಬುಧವಾರವೆ ಕೇಬಲ್’ಗಳ ಮರುಜೋಡಣೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422