ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DASARA NEWS, 4 OCTOBER 2024 : ನೂರು ವರ್ಷದ ಕ್ಯಾಮರಾಗಳು. ಕಣ್ಮನ ಸೆಳೆಯುವ ಛಾಯಚಿತ್ರಗಳು. ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುವ ವ್ಯಂಗ್ಯಚಿತ್ರಗಳು. ಈ ಬಾರಿ ದಸರಾದಲ್ಲಿ ಕ್ಯಾಮರಾಗಳು, ಛಾಯಚಿತ್ರಗಳು, ವ್ಯಂಗ್ಯ ಚಿತ್ರಗಳ ಪ್ರದರ್ಶನ (Exhibition) ಆಯೋಜಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಡಾ. ಅಂಬೇಡ್ಕರ್ ಭವನದ ಆವರಣದಲ್ಲಿ ಕ್ಯಾಮರಾ, ಫೋಟೊ ಮತ್ತು ಕಾರ್ಟೂನ್ ಪ್ರದರ್ಶನ ಆಯೋಜಿಸಲಾಗಿದೆ.
» ಹಳೆಯ ಕ್ಯಾಮರಾಗಳ ಪ್ರದರ್ಶನ
ಶಿವಮೊಗ್ಗದ ಹಿರಿಯ ಛಾಯಾಗ್ರಾಹಕ ಪ್ರದೀಪ್ ಅವರು ನೂರಕ್ಕೂ ಹೆಚ್ಚು ಕ್ಯಾಮರಾಗಳನ್ನು ಪ್ರದರ್ಶಿಸಿದ್ದಾರೆ.
ನೂರು ವರ್ಷ ಹಳೆಯ ಬೆಲ್ಲೋಸ್ ಕ್ಯಾಮರಾ, 80 ವರ್ಷದ ಕೊಡಾಕ್ ಬೇಬಿ ಬ್ರೌನಿ, ವೈಲ್ಯಾಂಡರ್ ಕ್ಯಾಮರಾ ಸೇರಿದಂತೆ ಹಲವು ಬಗೆಯ ಫಿಲಂ ಕ್ಯಾಮರಾಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲದೆ ಫೋಟೊ ರೀಲ್‌ಗಳು, ಕ್ಯಾಮರಾ ಉಪಕರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಪ್ರದರ್ಶನ ವೀಕ್ಷಿಸಲು ಬರುವವರಿಗೆ ಪ್ರದೀಪ್ ಅವರು ಕ್ಯಾಮರಾಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ.
» ಕಣ್ಸೆಳೆಯುವ ಫೋಟೊಗಳ ಪ್ರದರ್ಶನ
ಪತ್ರಿಕಾ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್ ಮತ್ತು ಶಿವಮೊಗ್ಗ ನಾಗರಾಜ್ ಅವರು ಕ್ಲಿಕ್ಕಿಸಿದ ಪೋಟೊಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಪ್ರಾಣಿ, ಪಕ್ಷಿಗಳು, ರಾಜಕೀಯ, ಸಾಮಾಜಿಕ ಫೋಟೊಗಳನ್ನು ಪ್ರದರ್ಶನ ಮಾಡಲಾಗಿದೆ.
ಪ್ರದರ್ಶನಕ್ಕೆ ಇರಿಸಲಾಗಿರುವ ಪೋಟೊಗಳನ್ನು ಕಂಡು ಜನರು ಖುಷಿ ಪಡುತ್ತಿದ್ದಾರೆ. ಫೋಟೊಗಳ ಜೊತೆಗೆ ಶಿವಮೊಗ್ಗದಲ್ಲಿ ಪ್ರಕಟವಾಗುವ ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳನ್ನು ಪ್ರದರ್ಶಿಸಲಾಗಿದೆ.
» ನಗು ಉಕ್ಕಿಸುವ ವ್ಯಂಗ್ಯ ಚಿತ್ರಗಳು
ಜಿಲ್ಲೆಯ ವಿವಿಧ ವ್ಯಂಗ್ಯಚಿತ್ರಕಾರರ ರಚಿಸಿದ ವ್ಯಂಗ್ಯ ಚಿತ್ರಗಳನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿದೆ. ಡಾ. ಸತೀಶ್ ಶೃಂಗೇರಿ, ನಟರಾಜ್ ಅರಳಸುರುಳಿ, ಜೇಮ್ಸ್ ವಾಜ್, ಸುಬ್ರಹ್ಮಣ್ಯ, ರಾಮಚಂದ್ರ ನಾಡಿಗ್, ರಾಮಚಂದ್ರ ಕೊಪ್ಪಲು, ಏಕನಾಥ ಬೊಂಗಾಳೆ, ಶ್ರೀಧರ್ ಹುಂಚ, ಎಸ್.ವಿ.ಪದ್ಮನಾಭ ಅವರ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗಿದೆ. ನೋಡುಗರಲ್ಲಿ ನಗು ಉಕ್ಕಿಸುವ, ಹೊಸ ಆಲೋಚನೆ ಹುಟ್ಟಿಸುವ ವ್ಯಂಗ್ಯ ಚಿತ್ರಗಳು ಇಲ್ಲಿವೆ.
ಇದನ್ನೂ ಓದಿ » ಟ್ರೆಕ್ಕಿಂಗ್ ತೆರಳುವವರಿಗೆ ಇನ್ಮುಂದೆ ಟಿಕೆಟ್ ಕಡ್ಡಾಯ, ವೆಬ್‌ಸೈಟ್ ಆರಂಭ