SHIVAMOGGA LIVE NEWS | 8 JANUARY 2025
ಶಿವಮೊಗ್ಗ : ಸಣ್ಣ ಕರುಳಿನಲ್ಲಿ ಉಂಟಾದ ಅತಿ ಅಪರೂಪದ ರಕ್ತಸ್ರಾವವನ್ನು ಆಧುನಿಕ ತಂತ್ರಜ್ಞಾನ ಕ್ಯಾಪ್ಸುಲ್ ಎಂಡೋಸ್ಕೋಪಿ (capsule endoscopy) ಕಾರ್ಯವಿಧಾನದಿಂದ ಪತ್ತೆ ಹಚ್ಚಿದ ನಂಜಪ್ಪ ಆಸ್ಪತ್ರೆಯ ದಾವಣಗೆರೆಯ ಪರಿಣಿತ ವೈದ್ಯರ ತಂಡ ಯಶಸ್ವಿಯಾಗಿ ತುರ್ತು ಚಿಕಿತ್ಸೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
62 ವರ್ಷದ ವ್ಯಕ್ತಿ ಶಕ್ತಿಹೀನತೆಯಿಂದ ಬಳಲುತ್ತಿದ್ದರು. ನಾಲ್ಕೈದು ದಿನದಿಂದ ಕಪ್ಪು ಬಣ್ಣದ ಮಲ ವಿಸರ್ಜನೆ ಆಗುತ್ತಿತ್ತು. ವ್ಯಕ್ತಿ ಆಸ್ಪತ್ರೆಗೆ ಆಗಮಿಸಿದಾಗ, ಹೀಮೋಗ್ಲೋಬಿನ್ ಮಟ್ಟ ಬಹಳ ಕಡಿಮೆಯಾಗಿತ್ತು. ಪ್ರಾರಂಭದಲ್ಲಿ ರಕ್ತಸ್ರಾವದ ಮೂಲ ಕಂಡುಹಿಡಿಯಲು ಕಷ್ಟವಾಗಿತ್ತು. ಹಾಗಾಗಿ ಕ್ಯಾಪ್ಸುಲ್ ಎಂಡೋಸ್ಕೋಪಿ ವಿಧಾನವನ್ನು ಬಳಸಲಾಯಿತು.
ಈ ವಿಧಾನವು ಅತ್ಯಂತ ಪರಿಣಾಮಕಾರಿಯಾಗಿದೆ. ನಿಖರವಾಗಿ ಚಿಕಿತ್ಸೆ ನೀಡಲು ಬಹಳ ಸಹಕಾರಿಯಾಗಿದೆ. ಗ್ಯಾಸ್ಟ್ರೋ ಎಂಟಿರೊಲೋಜಿಸ್ಟ್ ವೈದ್ಯ ಡಾ. ಶಿವರಾಜ್ ಅಫ್ಜಲ್‌ಪುರ್‌ಕರ್ ಈ ವಿಧಾನವೇ ಸೂಕ್ತ ಎಂದು ನಿರ್ಣಯಿಸಿ ರಕ್ತಸ್ರಾವದ ಮೂಲವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದರು. ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಿದರು.
» ಚಿಕಿತ್ಸೆಯ ಫಲಿತಾಂಶವೇನು? ಕ್ಯಾಪ್ಸೂಲ್ ಎಂಡೋಸ್ಕೋಪಿ ಇತ್ತೀಚಿನ ತಂತ್ರಜ್ಞಾನ. ಜೀರ್ಣಾಂಗ ವ್ಯೂಹದ, ವಿಶೇಷವಾಗಿ ಸಣ್ಣ ಕರುಳಿನಲ್ಲಿ ಉಂಟಾದ ತೊಂದರೆಗಳನ್ನು ಕಂಡುಹಿಡಿಯಲು ಸಹಾಯಕ. ರೋಗಿಗೆ ವೈರ್‌ಲೆಸ್ ಕ್ಯಾಮೆರಾವನ್ನು ಹೊಂದಿರುವ ಮಾತ್ರೆ ಗಾತ್ರದ ಕ್ಯಾಪ್ಸುಲ್ ಅನ್ನು ನುಂಗಿಸಿದಾಗ, ಅದು ಕರುಳಿಗೆ ಹೋಗುತ್ತದೆ. ನಂತರ ಆ ಕ್ಯಾಪ್ಸುಲ್ ಕರುಳಿನ ಭಾಗದಲ್ಲಿ ಉಂಟಾದ ರಕ್ತಸ್ರಾವ ಹಾಗೂ ಇನ್ನಿತರೆ ಸಮಸ್ಯೆಗಳ ಚಿತ್ರಗಳನ್ನು ಸೆರೆ ಹಿಡಿದು ರೆಕಾರ್ಡಿಂಗ್ ಸಾಧನಕ್ಕೆ ರವಾನಿಸುತ್ತದೆ. ಇದರಿಂದ ವೈದ್ಯರು ಖಚಿತವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.
ಕ್ಯಾಪ್ಸುಲ್ ಎಂಡೋಸ್ಕೋಪಿಯ ಲಾಭವೇನು?
ನೋವುರಹಿತ, ಸುಲಭ, ಸುರಕ್ಷಿತ, ದೇಹದ ಅತೀ ಸಣ್ಣ ಪ್ರದೇಶಗಳಲ್ಲೂ ಕ್ಯಾಪ್ಸುಲ್ ಕಳುಹಿಸಿ ಸಮಸ್ಯೆಗಳನ್ನು ಕಂಡುಹಿಡಿಯಬಹುದಾಗಿದೆ.
ದಾವಣಗೆರೆ ನಂಜಪ್ಪ ಆಸ್ಪತ್ರೆಯಲ್ಲಿ ನವೀನತೆ ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಧಾನವು ತೋರಿಸುತ್ತದೆ. ಕ್ಯಾಪ್ಸುಲ್ ಎಂಡೋಸ್ಕೋಪಿ ಹಾಗೂ ಇತರೆ ಗ್ಯಾಸ್ಟ್ರೋ ಎಂಟಿರೊಲೋಜಿ ವಿಶಿಷ್ಟ ಸೇವೆ ಕುರಿತು ಹೆಚ್ಚಿನ ಮಾಹಿತಿಗಾಗಿ ನಂಜಪ್ಪ ಆಸ್ಪತ್ರೆ ದಾವಣಗೆರೆಯನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿ ಮಾಹಿತಿಗೆ ಮೊಬೈಲ್ ನಂಬರ್ 7022260111 ಸಂಪರ್ಕಿಸಬಹುದು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಐದು ತಿಂಗಳ ಹಿಂದೆಯೇ ಪತ್ತೆಯಾಗಿತ್ತು HMP ಸೋಂಕು, ಡಾ.ಸರ್ಜಿ ಹೇಳಿದ್ದೇನು?