ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ನವೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಮಾರ್ಟ್ ಸಿಟಿ ಗುಂಡಿಗಳಿಗೆ ನಿತ್ಯ ವಾಹನಗಳು ಸಿಕ್ಕಿ ಬೀಳುತ್ತಿವೆ. ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ಇವತ್ತು ಕಾರೊಂದು ಗುಂಡಿಯಲ್ಲಿ ಸಿಲುಕಿದೆ. ಹಾಗಾಗಿ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಜೈಲ್ ಸರ್ಕಲ್’ನಿಂದ ಲಕ್ಷ್ಮೀ ಟಾಕೀಸ್’ವರೆಗಿನ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾಗಿದೆ. ರಸ್ತೆ ಉದ್ದಕ್ಕೂ ಗುಂಡಿಗಳನ್ನು ಅಗೆಯಲಾಗಿದೆ. ಜೆಸಿಬಿಗಳು ನಿತ್ಯ ಕೆಲಸ ಮಾಡುತ್ತಿವೆ.
ಇದನ್ನೂ ಓದಿ | ಭಾರಿ ಮಳೆ, ಶಿವಮೊಗ್ಗದ ವಾಹನ ಸವಾರರನ್ನು ಮತ್ತೆ ಕಾಡುತ್ತಿವೆ ಗುಂಡಿಗಳು
ಇಲ್ಲಿನ ಸುಬ್ಬಯ್ಯ ಆಸ್ಪತ್ರೆ ಮುಂಭಾಗ ಗುಂಡಿಗಳನ್ನು ಅಗೆಯಲಾಗಿದೆ. ಯುಜಿಡಿ ಇರುವ ಕಡೆ ಸುತ್ತಲು ಗುಂಡಿ ತೆಗೆದು ಮಣ್ಣು ಮುಚ್ಚಲಾಗಿತ್ತು. ಆದರೆ ನಿನ್ನೆ ಸುರಿದ ಭಾರಿ ಮಳೆ ಮತ್ತು ಸರಿಯಾಗಿ ಮಣ್ಣು ಮುಚ್ಚದಿರುವುದರಿಂದ ಕಾರೊಂದು ಗುಂಡಿಯಲ್ಲಿ ಸಿಲುಕಿದೆ.
ರಸ್ತೆಯಲ್ಲಿ ಟ್ರಾಫಿಕ್ ಜಾಮ್
ಕಾಮಗಾರಿ ಆರಂಭವಾದಾಗಿನಿಂದ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಈಗ ಕಾರು ಸಿಲುಕಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕಾರನ್ನೆ ಗುಂಡಿಯಿಂದ ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ.
ಅಂಗಡಿ ಮಾಲೀಕರ ಗೋಳು ಹೇಳತೀರದು
ಜೈಲ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಅಂಗಡಿ ಮಾಲೀಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕರೋನ ಮತ್ತು ಲಾಕ್ ಡೌನ್ ಕಾರಣದಿಂದಾಗಿ ಈಗಾಗಲೇ ಇಲ್ಲಿನ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದರು. ಈಗ ಕಾಮಗಾರಿಯ ಕಾರಣದಿಂದಾಗಿ ವ್ಯಾಪಾರವಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
‘ಈ ರಸ್ತೆಗೆ ಡಾಂಬಾರ್ ಹಾಕಿದ್ದರೆ ಸಾಕಿತ್ತು. ಈಗ ಗುಂಡಿ ತೆಗೆದು, ಫುಟ್ ಪಾತ್ ಸ್ಲಾಬ್ ತೆಗೆದು ವಾಹನಗಳು ಓಡಾಡುವುದೆ ಕಷ್ಟವಾಗಿದೆ. ಮಳೆ ಬೇರೆ ಸುರಿಯುತ್ತಿದೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಹಾಗಾಗಿ ಅಂಗಡಿಗಳ ಬಳಿಗೆ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾಮಗಾರಿಗಳು ಮುಗಿಯೋವರೆಗೂ ಬದುಕು ನಡೆಸುವುದು ಹೇಗೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಾಪಾರಿಯೊಬ್ಬರು ನೋವು ಹೇಳಿಕೊಂಡರು.
ಸ್ಮಾರ್ಟ್ ಸಿಟಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಶಿವಮೊಗ್ಗದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಜೈಲ್ ರಸ್ತೆಗೂ ನಿಧಾನಗತಿ ಕಾಮಗಾರಿಯ ಬಿಸಿ ತಟ್ಟಿದೆ. ಕಾಮಗಾರಿ ಮುಗಿಯುವವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಹಸದ ಕಾರ್ಯವಾಗಿದೆ.
ಇದನ್ನೂ ಓದಿ | ಶಿವಮೊಗ್ಗದ ತುಂಗಾ ನದಿ ಹೊಸ ಸೇತುವೆ ಮೇಲೆ ಬಾಯ್ತೆರೆದು ಕೂತಿದ್ದಾನೆ ಯಮ
ಇದನ್ನೂ ಓದಿ | ರಸ್ತೆ ಗುಂಡಿ ಪಕ್ಕದಲ್ಲಿ ಚೇರ್ ಹಾಕಿ ಕುಳಿತ ಸಾಮಾಜಿಕ ಹೋರಾಟಗಾರ, ಇನ್ನೆರಡು ದಿನದ ಗಡುವು