ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS |6 JANUARY 2023
SHIMOGA : ಕಾರು ಕಳ್ಳತನ (car theft) ಪ್ರಕರಣವೊಂದನ್ನು ಭೇದಿಸಿರುವ ತುಂಗಾ ನಗರ ಠಾಣೆ ಪೊಲೀಸರು ದೂರು ನೀಡಿದ ಮಾಲೀಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಯು ಕಾರಿನ ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸುರೆನ್ಸ್ ಹಣಕ್ಕಾಗಿ ತನ್ನ ಕಾರಿನ ನಂಬರ್ ಬದಲಾಯಿಸಿ, ಸ್ನೇಹಿತನಿಗೆ ಕೊಟ್ಟು ಕಳುಹಿಸಿ ಕಳ್ಳತನದ ದೂರು ನೀಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಶಿವಮೊಗ್ಗ ವಿದ್ಯಾನಗರದ ಚಂದ್ರು ಕುಮಾರ (28), ದಾವಣೆಗೆರೆ ಸರಸ್ವತಿ ನಗರದ ಪ್ರಶಾಂತ್ (29) ಬಂಧಿತರು.
ಕಾರು ಕಳ್ಳತನವಾಗಿದೆ ಅಂತಾ ದೂರು
ಚಂದ್ರು ಕುಮಾರ್ ತನ್ನ ಟೊಯೊಟಾ ಯಾರಿಸ್ ಕಾರು ಕಳ್ಳತನವಾಗಿದೆ (car theft) ಎಂದು ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದ. ಸೂಳೆಬೈಲು ಸಮೀಪದ ಕುಂಚಿಟಿಗರ ಬೀದಿಯಲ್ಲಿರುವ ಹಳೆ ಮನೆ ಬಳಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗ್ಗೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದ. ಈ ಸಂಬಂಧ 2022ರ ಮೇ 14ರಂದು ಪ್ರಕರಣ ದಾಖಲಾಗಿತ್ತು.
ಲೋನ್ ಗಾಗಿ ನಂಬರ್ ಪ್ಲೇಟ್ ಬದಲು
ಲೋನ್ ಹಣ ಕಟ್ಟದೆ ಫೈನಾನ್ಸ್ ಸಂಸ್ಥೆಗೆ ವಂಚಿಸಲು ಮತ್ತು ಇನ್ಸುರೆನ್ಸ್ ಹಣಕ್ಕಾಗಿ, ಚಂದ್ರು ಕುಮಾರ್ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂಬಾತನೊಂದಿಗೆ ಸಂಚು ರೂಪಿಸಿದ್ದ. ಇದೆ ಕಾರಣಕ್ಕೆ ಚಂದ್ರು ಕುಮಾರ್ ತನ್ನ ಟೊಯೊಟಾ ಯಾರಿಸ್ ಕಾರನ್ನು ಪ್ರಶಾಂತ್ ಗೆ ಕೊಟ್ಟು ದಾವಣಗೆರೆಗೆ ಕಳುಹಿಸಿದ್ದ. ಈ ವೇಳೆ ಕಾರಿನ ನಂಬರ್ ಪ್ಲೇಟನ್ನು ಬದಲಾವಣೆ ಮಾಡಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ, ಕ್ಯಾಲಿಬರೇಷನ್ ಗಾಗಿ 15 ದಿನ ಹೆಚ್ಚುವರಿ ಟೈಮ್, ಏನಿದು ಕ್ಯಾಲಿಬರೇಷನ್?
ತನಿಖೆ ನಡೆಸಿದ ಪೊಲೀಸರು ಕಾರು ಮಾಲೀಕ ಚಂದ್ರು ಕುಮಾರ್ ಮತ್ತು ಪ್ರಶಾಂತ್ ನನ್ನು ಬಂಧಿಸಿದ್ದಾರೆ. 10 ಲಕ್ಷ ರೂ. ಮೌಲ್ಯದ ಕಾರು, ನಕಲಿ ನಂಬರ್ ಪ್ಲೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಇನ್ಮುಂದೆ ಯದ್ವತದ್ವ ಗಾಡಿ ಓಡಿಸಿದರೆ ಕೆಂಗಣ್ಣು ಬೀರಲಿವೆ ಸಿಸಿಟಿವಿ
ತುಂಗಾ ನಗರ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸ್ಐ ದೂದ್ಯನಾಯ್ಕ, ಎ.ಎಸ್.ಐ ಮನೋಹರ್, ಸಿಬ್ಬಂದಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ಅರಿಹಂತ ಶಿರಹಟ್ಟಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422