ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 MAY 2023
SHIMOGA : ಸಂಬಂಧಿಕರು, ಸ್ನೇಹಿತರಿಗೆ ಮಹಿಳೆಯೊಬ್ಬರ ಅಶ್ಲೀಲ ಪೋಟೊಗಳನ್ನು ವಾಟ್ಸಪ್ (Whatsapp) ಮೂಲಕ ಕಳುಹಿಸಿ ಮಾನಸಿಕ ಹಿಂಸೆ ನೀಡಿದ ಆರೋಪದ ಹಿನ್ನೆಲೆ ವ್ಯಕ್ತಿಯೊಬ್ಬನ ವಿರುದ್ಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಕೇಸ್?
ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಆಕೆಗೆ ಗೊತ್ತಿಲ್ಲದಂತೆ ಅಶ್ಲೀಲ ಫೋಟೊಗಳನ್ನು ತೆಗೆದುಕೊಂಡಿದ್ದ. (ಗೌಪ್ಯತೆ ಕಾರಣಕ್ಕೆ ಮಹಿಳೆ ಮತ್ತು ವ್ಯಕ್ತಿಯ ಹೆಸರು ಪ್ರಕಟಿಸುತ್ತಿಲ್ಲ). ಮಹಿಳೆ ಬೆಂಗಳೂರು ತೊರೆದು ಶಿವಮೊಗ್ಗಕ್ಕೆ ಬಂದು ನೆಲೆಸಿದ್ದು, ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಆ ವ್ಯಕ್ತಿ ಮಹಿಳೆಗೆ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಮಹಿಳೆಯ ಸಹೋದ್ಯೋಗಿಗಳು, ಸಂಬಂಧಿಗಳ ವಾಟ್ಸಪ್ ನಂಬರ್‌ಗೆ ಆ ವ್ಯಕ್ತಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾನೆ. ಇದರಿಂದ ನೊಂದಿರುವ ಮಹಿಳೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದ ಫಟಾಫಟ್ ಸುದ್ದಿಗಳು, ಇವತ್ತು ಎಲ್ಲೆಲ್ಲಿ ಏನೇನಾಯ್ತು? 3 ನಿಮಿಷದಲ್ಲಿ 10 ಸುದ್ದಿಗಳನ್ನು ಓದಿ
ಆರೋಪ ಸಾಬೀತಾದರೆ ವರ್ಷಗಟ್ಟಲೆ ಜೈಲು
ವಾಟ್ಸಪ್ (Whatsapp) ಮೂಲಕ ಮಹಿಳೆಯ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ ವ್ಯಕ್ತಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ 3 ವರ್ಷದವರೆಗೆ ಜೈಲು 2 ಲಕ್ಷ ರೂ.ವರೆಗೆ ದಂಡ. ಐಟಿ ಕಾಯ್ದೆ ಸೆಕ್ಷನ್ 67ಎ ಕೂಡ ದಾಖಲಾಗಿದೆ. ಆರೋಪ ಸಾಬೀತಾದರೆ 5 ವರ್ಷದವರೆಗೆ ಜೈಲು 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಐಪಿಸಿ ಸೆಕ್ಷನ್ 354(ಎ)(ಡಿ)(ಸಿ) ಅಡಿ ಕೂಡ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ ಈ ಸೆಕ್ಷನ್ ಅಡಿಯೂ ಜೈಲು, ದಂಡ ವಿಧಿಸಬಹುದಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422