‘ಶಿವಮೊಗ್ಗದಿಂದ ಬೆಂಗಳೂರಿಗೆ ಎರಡೂವರೆ ಗಂಟೆ ಸಾಕು’, ಇಲ್ಲಿದೆ ಸಚಿವ ನಿತಿನ್‌ ಗಡ್ಕರಿ ಭಾಷಣದ 4 ಪ್ರಮುಖಾಂಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

SHIVAMOGGA LIVE NEWS | 23 FEBRUARY 2024

SHIMOGA : ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದೆ ವೇಳೆ ಮಾತನಾಡಿದ ನಿತಿನ್‌ ಗಡ್ಕರಿ, ಜಿಲ್ಲೆಯ ಅಭಿವೃದ್ಧಿಗೆ ಕುರಿತು ಕೆಲವು ಪ್ರಮುಖ ಸಂಗತಿ ಪ್ರಸ್ತಾಪಿಸಿದರು.

ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದ 6,168.41 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು. 2,138.30 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಗಡ್ಕರಿ ಹೇಳಿದ 4 ಪ್ರಮುಖಾಂಶ

POINT-1-jpg.webpಅಮೆರಿಕ ಶ್ರೀಮಂತವಾಗಿರಲು ರಸ್ತೆಗಳು ಚೆನ್ನಾಗಿರುವುದೇ ಕಾರಣ ಎಂದು ಅಲ್ಲಿನ ಅಧ್ಯಕ್ಷ ಜಾನ್‌ ಎಫ್.ಕೆನಡಿ ಹೇಳಿದ್ದರು. ಅದೇ ಮಾತು ದೇಶದ ಸಂಪರ್ಕ ಜಾಲದಲ್ಲಿ ಕ್ರಾಂತಿ ಮಾಡಲು ನನಗೆ ಸ್ಫೂರ್ತಿ. ಹೊಸ ರಸ್ತೆಗಳ ನಿರ್ಮಾಣ, ಹೆದ್ದಾರಿಗಳ ವಿಸ್ತರಣೆಯಿಂದಾಗಿ ಶಿವಮೊಗ್ಗದಲ್ಲಿ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ಆಗಲಿದೆ.

POINT-2-jpg.webpಸಂಸದ ಬಿ.ವೈ.ರಾಘವೇಂದ್ರ ಜಿಲ್ಲೆಗೆ ಅವಶ್ಯವಿರುವ ಕೆಲಸಗಳ ಕುರಿತು ನಿರಂತರವಾಗಿ ನನ್ನ ಗಮನ ಸೆಳೆಯುತ್ತಿದ್ದಾರೆ. 3 ಕಡೆ ಹೈಮಾಸ್ಟ್ ದೀಪಗಳನ್ನು ಕೇಳಿದ್ದು, ಶಿವಮೊಗ್ಗದ ಬೊಮ್ಮನಕಟ್ಟೆ ಹಾಗೂ ಅರಸಾಳು ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗುವುದು. ಶಿವಮೊಗ್ಗ ಹೊರ ವರ್ತುಲ ರಸ್ತೆ ನಿರ್ಮಾಣವಾಗುತ್ತಿದೆ. ಉತ್ತರ ಭಾಗದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೊಂದು ಹಂತದ ಕಾಮಗಾರಿ ಮಂಜೂರು ಮಾಡಲಾಗುವುದು.

Minister Nitin Gadkari in Shimoga

POINT-3-jpg.webpತುಮಕೂರು – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ 206ನ್ನು ಚತುಷ್ಪಥವಾಗಿ 6,500 ಕೋಟಿ ರೂ. ವಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. 2025ರ ಜನವರಿಗೆ ಇದು ಪೂರ್ಣವಾಗಲಿದೆ. ಈ ರಸ್ತೆ ಪೂರ್ಣಗೊಳ್ಳುವುದರಿಂದ ಶಿವಮೊಗ್ಗದಲ್ಲಿ ಕೈಗಾರಿಕ ಮತ್ತು ಆರ್ಥಿಕ ಅಭಿವೃದ್ಧಿ ಆಗಲಿದೆ. ಬೆಂಗಳೂರಿಗೆ ಐದು ತಾಸಿನ ಪ್ರಯಾಣ ಎರಡೂವರೆ ತಾಸಿಗೆ ಮುಗಿಯಲಿದೆ.

Minister Nitin Gadkari in Shimoga

POINT 4 jpgಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಬಗ್ಗೆ ಬಿ.ವೈ.ರಾಘವೇಂದ್ರ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಾಗುತ್ತದೆ.  ಕೊಡಚಾದ್ರಿ – ಕೊಲ್ಲೂರು ಕೇಬಲ್‌ ಕಾರ್‌ ಯೋಜನೆಗೆ ಅನುಮತಿ ನೀಡಲಾಗುತ್ತದೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಗುರುರಾಜ ಶೆಟ್ಟಿ ಗಂಟಿಹೊಳೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಹಾಜರಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 23, 2024

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

₹50 ಪೆಟ್ರೋಲ್‌ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್‌ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್‌

₹50 ಪೆಟ್ರೋಲ್‌ ಹಾಕಿಸಿಕೊಂಡು ಹಣ ಕೇಳಿದ್ದಕ್ಕೆ ಬಂಕ್‌ ಮಾಲೀಕ, ಸಿಬ್ಬಂದಿ ಮೇಲೆ ಅಟ್ಯಾಕ್‌

ವರದಹಳ್ಳಿಯಲ್ಲಿ ಶ್ರೀಧರ ಸ್ವಾಮೀಜಿ ಆರಾಧನಾ ಮಹೋತ್ಸವ, ಏನೇನು ಕಾರ್ಯಕ್ರಮ ಇರಲಿದೆ?

ವರದಹಳ್ಳಿಯಲ್ಲಿ ಶ್ರೀಧರ ಸ್ವಾಮೀಜಿ ಆರಾಧನಾ ಮಹೋತ್ಸವ, ಏನೇನು ಕಾರ್ಯಕ್ರಮ ಇರಲಿದೆ?

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಇವತ್ತು ದೀನಬಂಧು ಟ್ರಸ್ಟ್‌ 25ನೇ ವರ್ಷದ ಬೆಳ್ಳಿ ಹಬ್ಬ, ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸ್ತಾರೆ?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

ಭದ್ರಾವತಿಯ ಗೌಡರಹಳ್ಳಿ ಬಳಿ ಅಪಘಾತ, ಟ್ರಾಕ್ಟರ್‌ ಚಾಲಕನ ವಿರುದ್ಧ ಪ್ರಕರಣ, ಆಗಿದ್ದೇನು?

ಸೊರಬಕ್ಕೆ ನೂತನ ಜಲವಾಹನ, ಪೊಲೀಸ್‌ ಜೀಪ್‌ಗಳು

ಸೊರಬಕ್ಕೆ ನೂತನ ಜಲವಾಹನ, ಪೊಲೀಸ್‌ ಜೀಪ್‌ಗಳು

‘ಔಷಧವಿಲ್ಲದೆ ರೋಗ ಗುಣ’, ಶಿವಮೊಗ್ಗ ಆದಿಚುಂಚನಗಿರಿ ಮಠದ ಸ್ವಾಮೀಜಿ ಸಲಹೆ, ಹೇಗದು?

‘ಔಷಧವಿಲ್ಲದೆ ರೋಗ ಗುಣ’, ಶಿವಮೊಗ್ಗ ಆದಿಚುಂಚನಗಿರಿ ಮಠದ ಸ್ವಾಮೀಜಿ ಸಲಹೆ, ಹೇಗದು?

ವೀರಶೈವ ತಂಡಕ್ಕೆ ‍ಶ್ರೀಕಾಂತಣ್ಣ ಕ್ರಿಕೆಟ್ ಕಪ್‌, ರನ್ನರ್‌ ಅಪ್‌ ಯಾರು?

ವೀರಶೈವ ತಂಡಕ್ಕೆ ‍ಶ್ರೀಕಾಂತಣ್ಣ ಕ್ರಿಕೆಟ್ ಕಪ್‌, ರನ್ನರ್‌ ಅಪ್‌ ಯಾರು?

Leave a Comment