ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 13 AUGUST 2024 : ಸ್ವಾತಂತ್ರ್ಯದ (Independence) ನಡಿಗೆ ಪರಿಸರದ ಕಡೆಗೆ ಕಲ್ಪನೆಯಡಿ 78ನೇ ಸ್ವಾತಂತ್ರ್ಯ ಉತ್ಸವವನ್ನು ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಚರಕೋತ್ಸವವನ್ನು ಆ.14 ಮತ್ತು 15ರಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಳಿವು ಸಂಸ್ಥೆಯ ಮುಖ್ಯಸ್ಥೆ ಸೀಮಾ ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್‌ನ ಕರ್ನಾಟಕದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಪ್ರಾಧ್ಯಾಪಕ ಡಾ. ಎಸ್. ಶ್ರೀಕುಮಾರ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ. ಎಚ್. ಕೆ.ಎಸ್.ಸ್ವಾಮಿ ಮತ್ತು ಪರಿಸರ ಅಧ್ಯಯನ ಕೇಂದ್ರದ ಸಂಸ್ಥಾಪಕ ಜಿ.ಎಲ್.ಜನಾರ್ದನ್ ಭಾಗವಹಿಸುವರು ಎಂದು ತಿಳಿಸಿದರು.
ಉಳಿವು ಫೌಂಡೇಶನ್, ಗೋಸಿರಿ ಸೇವಾ ಟ್ರಸ್ಟ್, ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರ, ಶಿವಮೊಗ್ಗ ರೇಡಿಯೋ ಹಾಗೂ ಶಿವಮೊಗ್ಗ ಸಾವಯವ ಕೃಷಿಕರ ಬಳಗದ ಸಹಕಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 14ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮಧ್ಯಾಹ್ನ 12ರಿಂದ 3.30ವರೆಗೆ ಚರಕ ತರಬೇತಿ, ಸಂಜೆ 4ರಿಂದ 6ವರೆಗೆ ಚರಕ ಪೇ ಚರ್ಚೆ-1, ಚರಕ ಮತ್ತು ಪರಿಸರದ ಬಗ್ಗೆ ಚಿಂತನ ಮಂಥನ ನಡೆಯಲಿದೆ ಎಂದರು.
ಇದನ್ನೂ ಓದಿ ⇒ ಸಕ್ರೆಬೈಲಿನ ಸಲಗಕ್ಕೆ ಆನೆ ದಿನದಂದು ನಾಮಕರಣ, ಏನಂತ ಹೆಸರಿಡಲಾಯ್ತು?
ಆ.15ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, 10ರಿಂದ 3.30ರವರೆಗೆ ಚರಕ ತರಬೇತಿ, ಸಂಜೆ 4ರಿಂದ 6ವರೆಗೆ ಚರಕ ಪೇ ಚರ್ಚೆ-2, ಚರಕ ಮತ್ತು ಆರ್ಥಿಕತೆ, ಉದ್ಯೋಗ ಬಗ್ಗೆ ಚಿಂತನ ಮಂಥನ ನಡೆಯಲಿದೆ. ಚರಕದಿಂದ ನೂಲು ತೆಗೆಯುವ ಪ್ರಾತ್ಯಕ್ಷಿಕೆ ಮತ್ತು 30 ನಿಮಿಷಗಳ ತರಬೇತಿ ಪಡೆಯಲು ಒಬ್ಬರಿಗೆ 50 ರೂ. ಇರಲಿದೆ. ದೇಶಿ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಕೈಮಗ್ಗದ ಬಟ್ಟೆಗಳ ಮಾರಾಟ, ಸಾವಯವ ತಿನಿಸುಗಳ ಮಾರಾಟ ನಡೆಯಲಿದೆ ಎಂದರು.
ಪ್ರಮುಖರಾದ ರಾಘವ, ಮಲ್ಲಿಕಾರ್ಜುನ, ಮಂಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ ⇒ ಸಾಲ ವಸೂಲಿಗೆ ಮಹಿಳೆಯರ ಮನೆಗೆ ಹೋಗಿ ಕೂರುವ ಸಿಬ್ಬಂದಿ, ಖಡಕ್ ಸೂಚನೆ ನೀಡುವಂತೆ ಏಕಾಂಗಿ ಹೋರಾಟ