ಶಿವಮೊಗ್ಗದ ರೋಡ್‌ ರೋಮಿಯೋಗಳಿಗೆ ಕಾದಿದೆ ಗ್ರಹಚಾರ, ಇವತ್ತಿಂದ ಚೆನ್ನಮ್ಮ ಪಡೆ ಆರಂಭ, ಏನಿದು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 27 MAY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ರೋಡ್‌ ರೋಮಿಯೋಗಳಿಗೆ (Road Romeos) ಬಿಸಿ ಮುಟ್ಟಿಸಲು ಪೊಲೀಸ್‌ ಇಲಾಖೆ ಈ ಹಿಂದೆ ಓಬವ್ವ ಪಡೆದ ಆರಂಭಿಸಿತ್ತು. ಈಗ ಆ ಪಡೆಗೆ ಮರು ಜೀವ ನೀಡಲಾಗಿದೆ. ಚೆನ್ನಮ್ಮ ಪಡೆ ಎಂಬ ಹೊಸ ಹೆಸರಿನೊಂದಿಗೆ ಇವತ್ತಿನಿಂದ ಗಸ್ತು ಆರಂಭಿಸಲಿದೆ.

ಹೊಸ ಕಾರು, ವಿನೂತನ ಲೋಗೊ

ಓಬವ್ವ ಪಡೆ ಮಾದರಿಯಲ್ಲೇ ಚೆನ್ನಮ್ಮ ಪಡೆಗು ಪ್ರತ್ಯೇಕ ವಾಹನ ನಿಗದಿಪಡಿಸಲಾಗಿದೆ. ಏರ್ಟಿಗಾ ವಾಹನವನ್ನು ಪಡೆಗೆ ಮೀಸಲಿರಿಸಲಾಗಿದೆ. ಓಬವ್ವ ಪಡೆಗೆ ಪ್ರತ್ಯೇಕ ಲಾಂಛನ ಇರಲಿಲ್ಲ. ಆದರೆ ಚೆನ್ನಮ್ಮ ಪಡೆಗೆ ಲೋಗೊ ಸಿದ್ಧಪಡಿಸಲಾಗಿದೆ. ಏರ್ಟಿಗಾ ವಾಹನದ ಮೂರು ಕಡೆ ಚೆನ್ನಮ್ಮ ಪಡೆ ಎಂದು ಲೋಗೊ ಅಂಟಿಸಲಾಗಿದೆ.

ಎಷ್ಟು ಸಿಬ್ಬಂದಿ? ಏನೆಲ್ಲ ಕೆಲಸ ಮಾಡುತ್ತೆ?

ಚೆನ್ನಮ್ಮ ಪಡೆಯ ವಾಹನ ಶಾಲೆ, ಕಾಲೇಜುಗಳು, ಮಹಿಳೆಯರು ಹೆಚ್ಚು ಓಡಾಡುವ ಕಡೆ ನಿರಂತರ ಗಸ್ತು ತಿರುಗಲಿದೆ. ರೋಡ್‌ ರೋಮಿಯೋಗಳು, ವೀಲಿಂಗ್‌ ಮಾಡುವವರು, ಕಿಡಿಗೇಡಿಗಳು ಕಂಡರೆ ತಕ್ಷಣ ವಶಕ್ಕೆ ಪಡೆಯಲಾಗುತ್ತದೆ. ಈ ಪಡೆಯ ಸಿಬ್ಬಂದಿ ಬಸ್‌ ನಿಲ್ದಾಣಗಳು, ಮಾರುಕಟ್ಟೆಗಳ ಬಳಿಯು ಕಾರ್ಯಾಚರಣೆ ನಡೆಸಲಿದ್ದಾರೆ. ಕಿಡಿಗೇಡಿಗಳು ಕಂಡರೆ ತಕ್ಷಣಕ್ಕೆ ವಶಕ್ಕೆ ಪಡೆಯಲಿದ್ದಾರೆ.

ಇದನ್ನೂ ಓದಿ – ಪ್ರಚಾರ ಬಿರುಸುಗೊಳಿಸಿದ ಬಿಜೆಪಿ, ಡಾ. ಧನಂಜಯ ಸರ್ಜಿ ಪರ ಅಖಾಡಕ್ಕಿಳಿದ ಪತ್ನಿ, ಎಲ್ಲೆಲ್ಲಿ ಹೇಗಿದೆ ಕ್ಯಾಂಪೇನ್?

ಚೆನ್ನಮ್ಮ ಪಡೆಗೆ 12 ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ ಪಿಎಸ್‌ಐ, ಎಎಸ್‌ಐ, ಮಹಿಳಾ ಸಿಬ್ಬಂದಿ ಇರಲಿದ್ದಾರೆ. ಎರಡು ಪಾಳಿಯಲ್ಲಿ ಇವರು ಕೆಲಸ ನಿರ್ವಹಿಸಲಿದ್ದಾರೆ. ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ತರಬೇತಿಯನ್ನು ಈ ಪಡೆಯ ಸಿಬ್ಬಂದಿ ನೀಡಲಿದೆ.

chennamma

ಓಬವ್ವ ಬದಲು ಚೆನ್ನಮ್ಮ ಹೆಸರೇಕೆ?

ಓಬವ್ವ ಪಡೆಗೆ ಚೆನ್ನಮ್ಮ ಪಡೆ ಎಂದು ಮರು ನಾಮಕಾರಣ ಮಾಡಲಾಗಿದೆ. ‘ಕೆಳದಿ ಅರಸರ ನಾಡು. ಸ್ಥಳೀಯತೆ ಗಮನದಲ್ಲಿ ಇಟ್ಟುಕೊಂಡು ಚೆನ್ನಮ್ಮ ಪಡೆ ಎಂದು ಹೆಸರು ಇಡಲಾಗಿದೆ. ಕಮಲಾ ನೆಹರೂ ಕಾಲೇಜು ಮುಂಭಾಗ ಚೆನ್ನಮ್ಮ ಪಡೆಗೆ ಚಾಲನೆ ನೀಡಲಾಗುತ್ತದೆʼ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಸಂಪರ್ಕ ಮಾಡುವುದು ಹೇಗೆ?

ಯುವತಿಯರು, ಮಹಿಳೆಯರು ತಮಗೆ ಯಾರಾದರೂ ಕಿರುಕುಳ ನೀಡುತ್ತಿದ್ದರೆ ತುರ್ತಾಗಿ ಚೆನ್ನಮ್ಮ ಪಡೆಯನ್ನು ಸಂಪರ್ಕಿಸಬಹುದಾಗಿದೆ. ಸಹಾಯವಾಣಿ ನಂಬರ್‌ 112, ಮಹಿಳಾ ಪೊಲೀಸ್‌ ಠಾಣೆ 9480803349, ಕಂಟ್ರೋಲ್ ರೂಮ್ 08182 261413, ಕಂಟ್ರೋಲ್ ರೂಮ್ ಎಸ್‌ಐ 9480800947 ಈ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಬಹುದಾಗಿದೆ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇರಿಸಲಾಗುತ್ತದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment