ಯಾರೆಲ್ಲ ಏನೆಲ್ಲ ಹೇಳಿದರು?
ಡಾ. ರಾಜಕುಮಾರ್ ಅವರಂತಹ ಕಲಾವಿದರು ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಹೆಚ್ಚು ಜನಪ್ರಿಯಗೊಳಿಸಿದರು. ನಾಯಕ ನಟರು ಮನರಂಜನೆ ಜೊತೆಗೆ ಸಂದೇಶವನ್ನು ನೀಡಬೇಕು. ಆದರೆ ಚಿತ್ರರಂಗ ಹಾದಿ ತಪ್ಪಿದ್ದು, ಸರಿ ಹೋಗಬೇಕು.
- ಮಧು ಬಂಗಾರಪ್ಪ, ಸಚಿವ
![]()

ಶಿವಮೊಗ್ಗದಲ್ಲಿ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ದಸರಾ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ₹50 ಲಕ್ಷ ಒದಗಿಸಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. 65ಕ್ಕೂ ಹೆಚ್ಚು ಚಟುವಟಿಕೆ ನಡೆಸಲಾಗುತ್ತಿದೆ.
- ಎಸ್.ಎನ್.ಚನ್ನಬಸಪ್ಪ, ಶಾಸಕ
![]()
ನಮ್ಮ ಸಿನಿಮಾಗಳನ್ನು ಗೆಲ್ಲಿಸಿದ ಪ್ರೇಕ್ಷಕರೆ ನಿಜ ಅಧ್ಯಕ್ಷರು. ನಿರ್ಮಾಪಕ ಪ್ರಧಾನ ಅಧ್ಯಕ್ಷ. ಶಿವಮೊಗ್ಗ ದಸರಾದಲ್ಲಿ ಸಿನಿಮಾಗೆ ಅವಕಾಶ ನೀಡಿರುವುದು ಶ್ಲಾಘನೀಯ.
- ಶರಣ್, ನಟ
![]()

ಶಿವಮೊಗ್ಗ ಸುಂದರ ಜಿಲ್ಲೆ. ತಿಂಗಳಲ್ಲಿ ಒಮ್ಮೆಯಾದರೂ ಬಂದು ಹೋಗುತ್ತೇನೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಅಳಿಸಲಾಗದ ನೆನಪು. ಅತಿ ಹೆಚ್ವು ಸಂಖ್ಯೆಯ ಸಿಎಂ ಗಳನ್ನು ನೀಡಿದೆ. ಜಿಲ್ಲೆ ಸಾಹಿತ್ಯ, ರಂಗಭೂಮಿ, ಎಲ್ಲ ಕ್ಷೇತ್ರಗಳಲ್ಲೂ ಮುಂದಿದೆ. ಈ ದಸರಾ ಮುಂದೆಯೂ ವಿಜೃಂಭಣೆಯಿಂದ ನಡೆಯಲಿ.
- ಕಾರುಣ್ಯ ರಾಮ್, ನಟಿ
![]()
ಕಾರ್ಯಕ್ರಮದಲ್ಲಿ ಡಾ. ರಾಜ್‌ಕುಮಾರ್ ಅವರು ಹಾಡಿದ್ದ ಗೀತೆಯನ್ನು ನಟ ಶರಣ್ ಹಾಡಿದರು. ನಟಿ ಕಾರುಣ್ಯ ರಾಮ್ ಡಾನ್ಸ್ ಪ್ರೇಕ್ಷಕರ ಚಪ್ಪಾಳೆ ಪಡೆಯಿತು.


ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಜೆಪಿಯಿಂದ ಒಂದು ಗಂಟೆಗು ಹೆಚ್ಚು ಹೊತ್ತು ರಸ್ತೆ ತಡೆ
