FATAFAT NEWS, 25 AUGUST 2024
ರೈಲ್ವೆ ಅಂಡರ್ ಪಾಸ್‌ನಲ್ಲಿ ಹರಿಯದ ನೀರು
ಶಿವಮೊಗ್ಗ ಲೈವ್.ಕಾಂ : ಸವಳಂಗ ರಸ್ತೆಯ ರೈಲ್ವೆ ಅಂಡರ್ ಪಾಸ್‌ನಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ. ಈಚೆಗಷ್ಟೆ ಈ ಅಂಡರ್ ಪಾಸ್ ಉದ್ಘಾಟನೆಯಾಗಿದೆ. ಆದರೆ ಮಳೆ ನೀರು ಸರಾಗವಾಗಿ ಹರಿಯದೆ ಅಂಡರ್ ಪಾಸ್‌ನಲ್ಲಿಯೇ ನಿಲ್ಲುತ್ತಿದೆ. ಯಾವುದಾದರೂ ವಾಹನ ವೇಗವಾಗಿ ಹೋದರೆ ಅಕ್ಕಪಕ್ಕದ ವಾಹಗಳ ಪ್ರಯಾಣಿಕರ ಮೇಲೆ ನೀರು ಸಿಡಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಇದರ ಫೊಟೊ ಇಲ್ಲಿದೆ.
![]() |
ಇದನ್ನೂ ಓದಿ ⇒ ಪಡಿತರ ಚೀಟಿ, ಈ 4 ಮಾನದಂಡದ ಬಗ್ಗೆ ಗೊತ್ತಿದೆಯಾ? ತಕ್ಷಣ ಪರಿಶೀಲಿಸದೆ ಇದ್ದರೆ ದಂಡ ನಿಶ್ಚಿತ
ತಿಲಕನಗರ ಮುಖ್ಯರಸ್ತೆಯಲ್ಲಿ ಕಾದಿದೆ ಗಂಡಾಂತರ
ಶಿವಮೊಗ್ಗ ಲೈವ್.ಕಾಂ : ತಿಲಕ ನಗರ ಮುಖ್ಯ ರಸ್ತೆಯಲ್ಲಿ ಚರಂಡಿಯೊಂದರ ಮುಚ್ಚಳ ಸಂಪೂರ್ಣ ಹಾನಿಯಾಗಿದೆ. ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಈ ಯುಜಿಡಿ ಚೇಂಬರ್ ಮುಚ್ಚಳ ಹಾನಿಯಾಗಿದ್ದರು ಬದಲಾಯಿಸುವತ್ತ ಅಧಿಕಾರಿಗಳು ಚಿತ್ತ ಹರಿಸಿಲ್ಲ. ದುರ್ಗಾಂಬ ಹೊಟೇಲ್ ಮುಂಭಾಗ ಇರುವ ಚೇಂಬರ್ ಮುಚ್ಚಳ ಹಾಳಾಗಿದೆ. ಸ್ವಲ್ಪ ಯಾಮಾರಿದರೆ ದ್ವಿಚಕ್ರ ವಾಹನಗಳ ಟೈರ್‌ಗಳು ಸಿಕ್ಕಿಬೀಳಲಿವೆ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇದರ ಫೋಟೊ ಇಲ್ಲಿದೆ.
ಇದನ್ನೂ ಓದಿ ⇒ ಉಡುತಡಿಯಲ್ಲಿ ಕಲ್ಯಾಣಿಗೆ ಜಾರಿ ಬಿದ್ದು ಯುವಕ ಸಾವು
ಮೂರ್ನಾಲ್ಕು ದಿನದಿಂದ ಬೆಳಗದ ಬೀದಿ ದೀಪ
ಶಿವಮೊಗ್ಗ ಲೈವ್.ಕಾಂ : ನಗರದ ಅಚ್ಚುತರಾವ್ ಬಡಾವಣೆಯ ಮೊದಲ ಅಡ್ಡರಸ್ತೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಬೀದಿ ದೀಪಗಳು ಬೆಳಗುತ್ತಿಲ್ಲ. ಸ್ಮಾರ್ಟ್ ಸಿಟಿ ವತಿಯಿಂದ ಲೈಟ್‌ಗಳನ್ನು ಹಾಕಲಾಗಿದೆ. ಈ ರಸ್ತೆಯಲ್ಲಿ ಹೆಚ್ಚು ವಾಹನ ದಟ್ಟಣೆ ಇದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಬ್ಯಾಂಕ್ ಇರುವುದರಿಂದ ಜನ ಸಂಚಾರವು ಇರಲಿದೆ. ರಾತ್ರಿ ವೇಳೆ ಬೀದಿ ದೀಪಗಳು ಹಾಕದಿರುವುದರಿಂದ ಜನ ಓಡಾಡಲು ಭಯ ಪಡುವಂತಾಗಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಕಳ್ಳರು ಮೊಬೈಲ್ ಕಸಿದುಕೊಂಡು ಹೋಗಿದ್ದರು. ರಸ್ತೆಯ ಫೋಟೊ ಇಲ್ಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200