ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 16 JANUARY 2024
ಶಿವಮೊಗ್ಗ : ಗುತ್ತಿಗೆದಾರರೊಬ್ಬರಿಂದ ಲಂಚ (commission) ಪಡೆಯುತ್ತಿದ್ದ ಸಂದರ್ಭ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಂದು ಸಂಜೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಚೇರಿ ವ್ಯವಸ್ಥಾಪಕ ಎಸ್.ಆರ್.ಸಿದ್ದೇಶ್ 10 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದಾಗ ರೆಡ್ ಹಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸಿದ್ದೇಶ್ನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
[su_note note_color=”#f1f1f1″ text_color=”#000000″ radius=”0″]
4 ಪರ್ಸೆಂಟ್ ಕಮಿಷನ್ಗೆ ಡಿಮಾಂಡ್
ಸುನಿಲ್ ಕುಮಾರ್ ಮಹಾನಗರ ಪಾಲಿಕೆ ಆವರಣದ ಇಂಜಿನಿಯರ್ ಕಟ್ಟದ ಮೇಲ್ಭಾಗದಲ್ಲಿ ಶೆಡ್ ನಿರ್ಮಾಣಕ್ಕೆ ಗುತ್ತಿಗೆ ಪಡೆದಿದ್ದರು. 2024ರ ಡಿಸೆಂಬರ್ನಲ್ಲಿ ಶೆಡ್ ಪೂರ್ಣಗೊಂಡಿದ್ದು ಹಣ ಮಂಜೂರು ಮಾಡುವಂತೆ ಬಿಲ್ ಸಲ್ಲಿಸಿದ್ದರು. ಕಾಮಗಾರಿಯ ಒಟ್ಟು ಮೊತ್ತದಲ್ಲಿ 4 ಪರ್ಸೆಂಟ್ ಕಮಿಷನ್ ಹಣ ನೀಡಿದರೆ ಬಿಲ್ ಮಂಜೂರು ಮಾಡುವುದಾಗಿ ಸಾಮಾನ್ಯ ನಿಧಿ ಲೆಕ್ಕ ವಿಭಾಗದ ಕಚೇರಿ ವ್ಯವಸ್ಥಾಪಕ ಸಿದ್ದೇಶ್ ಬೇಡಿ ಇಟ್ಟಿದ್ದ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.[/su_note]

ಲಂಚ ಪಡೆಯುತ್ತಿದ್ದಾಗ ದಾಳಿ
11,500 ರೂ. ಹಣಕ್ಕೆ ಸಿದ್ದೇಶ್ ಬೇಡಿಕೆ ಇಟ್ಟಿದ್ದರು. ಇವತ್ತು 10 ಸಾವಿರ ರೂ. ಹಣ ಪಡೆಯುವ ಸಂದರ್ಭ ದಾಳಿ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌದರಿ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು. ಲೋಕಾಯುಕ್ತ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್, ವೀರಬಸಪ್ಪ ಎಲ್.ಕುಸಲಾಪುರ ದಾಳಿ ನೇತೃತ್ವ ವಹಿಸಿದ್ದರು. ಸಿಬ್ಬಂದಿ ಯೋಗೇಶ್.ಜಿ.ಸಿ., ಟೀಕಪ್ಪ.ಎನ್.ಬಿ., ಮಂಜುನಾಥ್.ಎಂ., ಸುರೇಂದ್ರ ಹೆಚ್.ಜಿ., ಬಿ.ಟಿ ಚನ್ನೇಶ, ಪ್ರಶಾಂತ್ ಕುಮಾರ್, ದೇವರಾಜ್.ವಿ., ಅರುಣ್ ಕುಮಾರ್, ಆದರ್ಶ, ಪ್ರಕಾಶ್, ಅಂಜಲಿ, ಪ್ರದೀಪ್, ಗೋಪಿ ವಿ, ಜಯಂತ್, ಗಂಗಾಧರ.ಬಿ.ಕೆ., ತರುಣ ಕುಮಾರ್.ಎ.ಎನ್ ದಾಳಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ » ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಡಾಕ್ಟರ್, ನರ್ಸ್, ಕಾರಣವೇನು?
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















