ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2021
ಶಿವಮೊಗ್ಗ ದಸರಾದಲ್ಲಿ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಶುಶ್ರೊಷಕಿ ದೀಪಿಕಾ ಮತ್ತು ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಧನಲಕ್ಷ್ಮಿ ಪ್ರಥಮ ಬಹುಮಾನ ಪಡೆದಿದ್ದಾರೆ.
ವಿನೋಬನಗರದ ಫ್ರೀ ಡ೦ಪಾರ್ಕ್’ನಲ್ಲಿ ದಸರಾ ಆಹಾರ ಸಮಿತಿ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವೈದರು, ನರ್ಸ್’ಗಳಿಗೆ ಮತ್ತು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಹಿಳೆಯರಿಗೆ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ರೋಚಕವಾಗಿತ್ತು.
ಮೂರು ಸುತ್ತಿನ ಸ್ಪರ್ಧೆಯಲ್ಲಿ ಶುಶ್ರೊಷಕರಾದ ದೀಪಿಕಾ ಮತ್ತು ಮರಿಯಪ್ಪ ಅವರು ತಲಾ ಏಳು ಇಡ್ಲಿ ತಿಂದರು. ಬಳಿಕ ಇಬ್ಬರಿಗೂ ಎರಡು ಇಡ್ಲಿಗಳನ್ನು ತಿನ್ನುವ ಸ್ಪರ್ಧೆ ಆಯೋಜಿಸಿ ಪ್ರಥಮ ಸ್ಥಾನ ಘೋಷಿಸಲಾಯಿತು.
ದೀಪಿಕಾ ಅವರು ಪ್ರಥಮ ಸ್ಥಾನ ಪಡೆದರೆ, ಮರಿಯಪ್ಪ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಶುಶ್ರೂಷಕಿ ಬಿನ್ಸ್ ಅವರು ತೃತೀಯ ಸ್ಥಾನ ಪಡೆದರು. ಮೊದಲ ಸುತ್ತಿನಲ್ಲಿ ನಸ್೯ಗಳಾದ ಪಲ್ಲವಿ ಪಾಟೀಲ್ ಐದು ಕಾಲು, ಎನ್.ವಿದ್ಯಾ ಐದು, 2ನೇ ಸುತ್ತಿನಲ್ಲಿ ದೀಪಿಕಾ ಏಳು, ಸಿಂಚನಾ ಆರು ಮತ್ತು ಬಿನ್ಸ್ ಐದೂವರೆ ಇಡ್ಲಿ ತಿಂದಿದ್ದರು. 3ನೇ ಸುತ್ತಿನಲ್ಲಿ ವೈದ್ಯರಾದ ಡಾ. ಆರಾಧ್ಯ ನಾಲ್ಕು, ಡಾ. ಅವಿನಾಶ್ ಮತ್ತು ಡಾ. ವಿನೋದ್ ತಲಾ ಮೂರೂವರೆ ಇಡ್ಲಿ ತಿಂದರು.
ನಂಜಪ್ಪ ಆಸ್ಪತ್ರೆ, ಎನ್‌ಎಚ್ ಆಸ್ಪತ್ರೆ, ಜಿ.ಜೆ.ಸೂರ್ಯ ನರ್ಸಿಂಗ್ ಆಸ್ಪತ್ರೆ, ಮೆಗ್ಗಾನ್ ಆಸ್ಪತ್ರೆಯ ಶುಶೂಷಕರು ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಬಾಳೆಹಣ್ಣು ತಿನ್ನುವ ಸ್ಪರ್ಧೆ
ಸಾರ್ವಜನಿಕರಿಗಾಗಿ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಧನಲಕ್ಷ್ಮಿ ಮತ್ತು ಗೀತಾ ಅವರು ತಲಾ 5 ಬಾಳೆ ಹಣ್ಣು ತಿಂದರು. ಅಂತಿಮ ಹಣಾಹಣಿಯಲ್ಲಿ ಧನಲಕ್ಷ್ಮಿ ಹೆಚ್ಚು ಬಾಳೆಹಣ್ಣು ತಿಂದು ವಿಜಯಮಾಲೆ ಧರಿಸಿದರು. ಗೀತಾ ದ್ವಿತೀಯ ಮತ್ತು ನಾಲ್ಕು ಬಾಳೆಹಣ್ಣು ತಿಂದ ನೇತ್ರಾವತಿ ತೃತೀಯ ಸ್ಥಾನ ಪಡೆದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422