ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 JANUARY 2024
SHIMOGA : ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯ ಯಾತ್ರೆಗೆ ತಡೆಯೊಡ್ಡಿದ ಅಸ್ಸಾಂ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಚೇರಿಯಿಂದ ಮಹಾವೀರ ವೃತ್ತದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಅಸ್ಸಾಂ ಸರ್ಕಾರ, ಸಿಎಂ ಹಿಮಂತ್ ಬಿಸ್ವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಜೋಡೊ ನ್ಯಾಯ್ ಯಾತ್ರೆ ಹತ್ತು ದಿನ ಪೂರೈಸಿದೆ. ಯಾತ್ರೆಗೆ ದೊಡ್ಡಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಗೂಂಡಾಗಳು ಯಾತ್ರೆಗೆ ಸಮಸ್ಯೆ ಮಾಡುತ್ತಿದ್ದಾರೆ. ಸಿಎಂ ಹಿಮಂತ ಬಿಸ್ವಾಸ್ ಯಾತ್ರೆಗೆ ತಡೆಯೊಡ್ಡುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ರಾಮನ ದೇಗುಲ ಪ್ರವೇಶಕ್ಕು ತಡೆಯೊಡ್ಡಲಾಗಿದೆ. ಈ ಹಿನ್ನೆಲೆ ಹಿಮಂತ ಬಿಸ್ವಾಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಹೆಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಆಯನೂರು ಮಂಜುನಾಥ್, ಚಂದ್ರಭೂಪಾಲ್, ಅಕ್ರಂ ಪಾಶ, ವೈ.ಹೆಚ್. ನಾಗರಾಜ್, ಯೋಗೀಶ್, ಎಸ್.ಪಿ.ದಿನೇಶ್, ರಮೇಶ್ ಹೆಗ್ಡೆ, ಎಂ.ಪಿ.ದಿನೇಶ್ ಪಾಟೀಲ್, ಗಿರೀಶ್ ರಾವ್ ಪಿ.ಎನ್, ಎಸ್.ಟಿ. ಚಂದ್ರಶೇಖರ್, ಶಿವಾನಂದ್, ಶಿವು, ಸೌಗಂಧಿಕಾ, ಸ್ಟೆಲ್ಲಾ ಮಾರ್ಟಿನ್, ಸುವರ್ಣ ನಾಗರಾಜ್, ನಾಜೀಮಾ, ಪ್ರೇಮಾ, ಕವಿತಾ ರಾಘವೇಂದ್ರ, ಕವಿತಾ ಎಂ.ಬಿ, ಅರ್ಚನಾ, ಮಧುಸೂದನ್, ಹೆಚ್.ಪಿ. ಗಿರೀಶ್, ಚೇತನ್, ರಾಜಶೇಖರ್, ಎಸ್.ಕೆ. ಮರಿಯಪ್ಪ, ಶ್ರೀನಿವಾಸ ಕರಿಯಣ್ಣ, ಅಫ್ರೀದಿ, ಆರೀಫ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಶಿವಮೊಗ್ಗದ ವ್ಯಾಪಾರಿಗೆ ಬಂತು 2 ಕೊರಿಯರ್, ಒಂದು ರಿಜಿಸ್ಟರ್ ಪೋಸ್ಟ್, ಓಪನ್ ಮಾಡಿದಾಗ ಕಾದಿತ್ತು ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422