ಸಚಿವರಾದ ಮೇಲೆ ಶಿವಮೊಗ್ಗಕ್ಕೆ ಮೊದಲ ಭೇಟಿ, ಮಧು ಬಂಗಾರಪ್ಪಗೆ ಅದ್ಧೂರಿ ಸ್ವಾಗತ, ಹೇಗಿತ್ತು ಸಂಭ್ರಮಾಚರಣೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 3 JUNE 2023

SHIMOGA : ಸಚಿವರಾದ (Minister) ಮೇಲೆ ಇದೆ ಮೊದಲ ಬಾರಿ ಮಧು ಬಂಗಾರಪ್ಪ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್‌ ಕಾರ್ಯಕರ್ತರು ಸಚಿವ ಮಧು ಬಂಗಾರಪ್ಪ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಬೃಹತ್‌ ಹಾರಗಳನ್ನು ಹಾಕಿ, ಬೈಕ್‌ ಜಾಥಾ ನಡೆಸಿದರು.

Minister-madhu-bangarappa-at-Shimoga-Vidyanagara

ಎಲ್ಲೆಲ್ಲಿ ಹೇಗಿತ್ತು ಸ್ವಾಗತ?

ಮಲವಗೊಪ್ಪದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಶಿಕ್ಷಣ ಸಚಿವ (Minister) ಮಧು ಬಂಗಾರಪ್ಪ ಅವರನ್ನು ಸ್ವಾಗತಿಸಿದರು. ಇಲ್ಲಿನ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ ಮಧು ಬಂಗಾರಪ್ಪ ಪ್ರಾರ್ಥನೆ ಸಲ್ಲಿಸಿದರು.


WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ


ನಗರದ ಎಂ.ಆರ್‌.ಎಸ್‌ ವೃತ್ತದಲ್ಲಿ ಕಾಂಗೆಸ್‌ ಪಕ್ಷದ ವತಿಯಿಂದ ಸಚಿವ ಮಧು ಬಂಗಾರಪ್ಪ ಅವರನ್ನು ಸ್ವಾಗತಿಸಲಾಯಿತು. ಮಧು ಬಂಗಾರಪ್ಪ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಘೋಷಣೆ ಕೂಗಿದರು. ಅನಾನಸ್‌ ಹಣ್ಣಿನ ಹಾರ ಹಾಕಿ, ಹರ್ಷ ವ್ಯಕ್ತಪಡಿಸಿದರು. ಇನ್ನು, ಎಂಆರ್‌ಎಸ್‌ ವೃತ್ತದಿಂದ ಲಗಾನ್‌ ಕಲ್ಯಾಣ ಮಂಟಪದವರೆಗೆ ಕಾರ್ಯಕರ್ತರು ಬೈಕ್‌ ಜಾಥಾ ನಡೆಸಿದರು.

minister madhu bangarappa Procession in Shimoga

ಅಲ್ಲಲ್ಲಿ ಬೃಹತ್‌ ಹಾರ, ದೇವರ ಪೂಜೆ

ಲಗಾನ್‌ ಕಲ್ಯಾಣ ಮಂದಿರದವರೆಗೆ ಹಾದಿ ಉದ್ದಕ್ಕು ಸಚಿವ ಮಧು ಬಂಗಾರಪ್ಪ ಅವರಿಗೆ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಅಲ್ಲಲ್ಲಿ ಬೃಹತ್‌ ಹಾರಗಳನ್ನು ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿದ್ಯಾನಗರ, ಹೊಳೆ ಬಸ್‌ ನಿಲ್ದಾಣ, ಸೈನ್ಸ್‌ ಮೈದಾನದಲ್ಲಿ ಬೃಹತ್‌ ಹಾರ ಹಾಕಲಾಯಿತು. ವಿದ್ಯಾನಗರದ ದೊಡ್ಡಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ – 40 ಪರ್ಸೆಂಟ್‌ ವಿರುದ್ಧ ಶಿವಮೊಗ್ಗದಲ್ಲಿ ಮಹಿಳೆಯರ ಹೋರಾಟ, ಡಿಸಿ ಕಚೇರಿ ಗೇಟ್‌ಗೆ ಅಡ್ಡಲಾಗಿ ಕುಳಿತು ಆಕ್ರೋಶ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್‌.ಎಸ್.ಸುಂದರೇಶ್‌, ಪ್ರಮುಖರಾದ ವಿಜಯ ಕುಮಾರ್‌, ರಂಗನಾಥ್‌, ದೇವೇಂದ್ರಪ್ಪ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಗಿರೀಶ್‌ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು, ಕಾರ್ಯಕರ್ತರು ಇದ್ದರು.

Shivamogga Live today news Promotion

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment