ಶಿವಮೊಗ್ಗ ಲೈವ್.ಕಾಂ | SHIMOGA NEWS | 15 APRIL 2021
ಕೋವಿಡ್ ಹಿನ್ನೆಲೆ ರಂಜಾನ್ ಆಚರಣೆ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.
ಏನೆಲ್ಲ ನಿಯಮಗಳು?
ಕಂಟೈನ್ಮೆಂಟ್ ವಲಯದಲ್ಲಿ ಬರುವ ಮಸೀದಿ ಹಾಗೂ ಇತರ ಪ್ರಾರ್ಥನಾ ಮಂದಿರಗಳನ್ನು ಸಾರ್ವಜನಿಕರಿಗೆ ತೆರೆಯಬಾರದು.
60 ವರ್ಷ ಮೇಲ್ಪಟ್ಟವರು, ತೀವ್ರ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿರಬೇಕು.
ಗುಂಪು ಸೇರಬಾರದು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತಕ ಕಾಯ್ದುಕೊಳ್ಳಲು ಮಸೀದಿಯಲ್ಲಿ ಬಣ್ಣದಿಂದ ಗುರುತು ಮಾಡಬೇಕು.
ಅಗತ್ಯವಿದ್ದರೆ ಪಾಳಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಆಜಾನ್ ಆರಂಭದ 5 ನಿಮಿಷ ಮೊದಲು ಮಸೀದಿಯನ್ನು ತೆರೆಯಬೇಕು ಮತ್ತು ಕಡ್ಡಾಯ ನಮಾಝ್ ಮುಗಿದ ತಕ್ಷಣ ಮಸೀದಿಯನ್ನು ಮುಚ್ಚಬೇಕು.
ಪ್ರಾರ್ಥನೆಗೆ ಅಗತ್ಯವಿರುವ ಮ್ಯಾಟ್, ಟೊಪ್ಪಿ ಇತ್ಯಾದಿಗಳನ್ನು ಮನೆಯಿಂದಲೇ ತರಬೇಕು.
ಇಫ್ತಾರ್ ಕೂಟವನ್ನು ಮಸೀದಿಯಲ್ಲಿ ಆಯೋಜಿಸದೆ ಮನೆಯಲ್ಲಿಯೇ ಉಪವಾಸ ತೊರೆದು ಕೇವಲ ಪ್ರಾರ್ಥನೆಗಾಗಿ ಮಾತ್ರ ಮಸೀದಿಗೆ ಬರಬೇಕು.
ಪ್ರತಿ ಪ್ರಾರ್ಥನೆ ಬಳಿಕ ಮಸೀದಿಯನ್ನು ಸ್ವಚ್ಛಗೊಳಿಸಿ ಡಿಸ್ ಇನ್ಫೆಕ್ಷನ್ ಮಾಡಬೇಕು.
ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಮಸೀದಿಯಲ್ಲಿ ಫಲಕಗಳನ್ನು ಅಳವಡಿಸಬೇಕು. ಪ್ರತಿ ಮಸೀದಿಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯನ್ನು ಖಾತ್ರಿಪಡಿಸಲು ಪಾಲನಾ ಸಮಿತಿಗಳನ್ನು ರಚಿಸಬೇಕು ಮತ್ತು ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಹೇಳಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200