ಶಿವಮೊಗ್ಗದಲ್ಲಿ ಒಂದೇ ಕಡೆ ಪಟಾಕಿ ಮಾರಾಟ, ಈ ಬಾರಿ ಹೇಗಿದೆ ವ್ಯವಸ್ಥೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 NOVEMBER 2023

SHIMOGA : ನಗರದಲ್ಲಿ ಪಟಾಕಿ (Crackers) ಮಾರಾಟ ಬಿರುಸಾಗಿದೆ. ಈ ಬಾರಿ ಒಂದೇ ಕಡೆ ಎಲ್ಲ ಮಳಿಗೆ ಸ್ಥಾಪಿಸಲಾಗಿದೆ.

ಒಂದೇ ಕಡೆ ಮಾರಾಟ

ಪ್ರತಿ ವರ್ಷ ನೆಹರು ಕ್ರೀಡಾಂಗಣ ಮತ್ತು ಸೈನ್ಸ್‌ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿತ್ತು. ಈ ಬಾರಿ ಒಂದೇ ಕಡೆ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 60 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಶನಿವಾರ ಸಂಜೆ ಹೊತ್ತಿಗೆ ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ಆರಂಭಿಸಲಾಯಿತು.

ಪಟಾಕಿ ಖರೀದಿಗೆ ಜನವೋ ಜನ

ಒಂದೇ ಕಡೆ ಎಲ್ಲ ಮಳಿಗೆ ಸ್ಥಾಪಿಸಿರುವುದರಿಂದ ಜನರಿಗೆ ಪಟಾಕಿ ಆಯ್ಕೆ ಸುಲಭವಾಗಿದೆ. ಹಾಗಾಗಿ ದೊಡ್ಡ ಸಂಖ್ಯೆಯ ಜನರು ಫ್ರೀಡಂ ಪಾರ್ಕ್‌ಗೆ ಆಗಮಿಸಿ ಪಟಾಕಿ ಖರೀದಿಸುತ್ತಿದ್ದಾರೆ. ಬೆಳಗ್ಗೆಯಿಂದ ಅಂಗಡಿಗಳಲ್ಲಿ ವ್ಯಾಪಾರ ಬಿರುಸಾಗಿ ಸಾಗುತ್ತಿದೆ. ಮಕ್ಕಳು ಪಟಾಕಿ ಆಯ್ಕೆಯಲ್ಲಿ ಮಗ್ನರಾಗಿದ್ದಾರೆ. ವೆರೈಟಿ ಪಟಾಕಿ ಖರೀದಿ ನಡೆಯುತ್ತಿದೆ.

ವಿಶಾಲ ಪಾರ್ಕಿಂಗ್‌, ಹೂ, ಹಣ್ಣು ಖರೀದಿ

ಫ್ರೀಡಂ ಪಾರ್ಕ್‌ನಲ್ಲಿ ವಿಶಾಲ ಪಾರ್ಕಿಂಗ್‌ ಸ್ಥಳವಿದೆ. ಹಾಗಾಗಿ ಪಟಾಕಿ ಖರೀದಿಗೆ ಬರುವವರಿಗೆ ಪಾರ್ಕಿಂಗ್‌ ಕಿರಿಕಿರಿ ಇಲ್ಲದಂತಾಗಿದೆ. ಇನ್ನು, ಫ್ರೀಡಂ ಪಾರ್ಕ್‌ನಲ್ಲಿ ಐಸ್‌ ಕ್ರೀಂ ಸೇರಿದಂತೆ ತಳ್ಳು ಗಾಡಿಯಲ್ಲಿ ತಿಂಡಿ, ತಿನಿಸು ಮಾರಾಟವು ಬಿರುಸಾಗಿದೆ. ಇನ್ನೊಂದೆಡೆ ಫ್ರೀಡಂ ಪಾರ್ಕ್‌ ಹೊರಾಂಗಣದಲ್ಲಿ ಹೂವು, ಹಣ್ಣು ವ್ಯಾಪಾರವು ಜೋರಾಗಿದೆ.

crackers sale in Shimoga freedom park

ಸುರಕ್ಷಿತ ಕ್ರಮಗಳದ್ದೇ ಸವಾಲು

ಬೆಂಗಳೂರಿನ ಆನೆಕಲ್‌ನಲ್ಲಿ ಪಟಾಕಿ ದುರಂತದ ಬೆನ್ನಿಗೆ ಪಟಾಕಿ ಮಾರಾಟಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು ಪಟಾಕಿ ಅಂಗಡಿಗಳು ಒಂದರ ಪಕ್ಕದಲ್ಲಿ ಒಂದು ಇದ್ದವು. ಈ ಬಾರಿ ಪ್ರತಿ ಮಳಿಗೆ ಮಧ್ಯೆ ಜಾಗ ಖಾಲಿ ಬಿಡಲಾಗಿದೆ. ಇನ್ನು ಮಳಿಗೆಗಳಲ್ಲಿ ಅಗ್ನಿಶಾಮಕ ಸಾಧನಗಳನ್ನು ಇರಿಸಲಾಗಿದೆ.

crackers sale in Shimoga freedom park

ಮಳಿಗೆಗಳ ಮುಂದೆ ನೀರಿನ ಡ್ರಮ್‌ ಇರಿಸಲಾಗಿದೆ. ಆದರೆ ಕೆಲವು ಡ್ರಮ್‌ಗಳಲ್ಲಿ ಮಾತ್ರ ನೀರು ತುಂಬಿಸಲಾಗಿದೆ. ಬಹುತೇಕ ಫೈರ್‌ ಬಕೆಟ್‌ಗಳಲ್ಲಿ ಮಣ್ಣು ತುಂಬಿಸಿಲ್ಲ. ಇದರ ಹೊರತು ಪಟಾಕಿ ಮಳಿಗೆಗಳಲ್ಲಿ ಒಂದೇ ಕಡೆ ಸ್ಥಾಪಿಸಿರುವುದು ಗ್ರಾಹಕರಿಗೆ ಅನುಕೂಲವಾಗಿದೆ.

crackers sale in Shimoga freedom park

ಇದನ್ನೂ ಓದಿ – ಶಿವಮೊಗ್ಗದಲ್ಲಿ ಲಕ್ಷ ಲಕ್ಷ ಮೌಲ್ಯದ ಅತ್ಯಂತ ಅಪರೂಪದ ನಾಟ ವಶ, ರಾಜ್ಯದಲ್ಲೇ ಮೊದಲು ಇಂತಹ ಪ್ರಕರಣ

crackers sale in Shimoga freedom park

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 12, 2023

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment