ಶಿವಮೊಗ್ಗ: ನಗರದ ಕೆಎಸ್‌ಸಿಎ ಹಾಗೂ ಜೆಎನ್ಎನ್‌ಸಿಇ ಕ್ರೀಡಾಂಗಣದಲ್ಲಿ ಡಿ.8ರಿಂದ ವಿಜಯ್ ಮರ್ಚೆಂಟ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ (Cricket Tournament) ನಡೆಯಲಿದೆ. ಬಿಸಿಸಿಐ ಮೂರನೇ ಬಾರಿಗೆ ಇಲ್ಲಿ ಪ್ರಮುಖ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
16 ವರ್ಷದೊಳಗಿನ ಪ್ರತಿಭೆಗಳನ್ನು ಗುರುತಿಸಲು ಪಂದ್ಯಾವಳಿ ಅತ್ಯಂತ ಮಹತ್ವದ್ದೆನಿಸಿದೆ. ದೇಶದ ವಿವಿಧ ರಾಜ್ಯಗಳ 36 ತಂಡಗಳು ಹಲವು ಕಡೆಗಳಲ್ಲಿ ಆಯೋಜಿಸಿರುವ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ತಲಾ ಆರು ತಂಡಗಳ ಆರು ಗುಂಪುಗಳನ್ನು ರಚಿಸಲಾಗಿದೆ.
ಎ ಗುಂಪಿನ ಎಲ್ಲ ಪಂದ್ಯಗಳು ಶಿವಮೊಗ್ಗದ ಮೂರು ಕ್ರೀಡಾಂಗಣದಲ್ಲಿ ನಡೆಯಲಿವೆ. ಎ ಗುಂಪಿನಲ್ಲಿ ಚಂಡೀಗಢ, ಗುಜರಾತ್, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ ಹಾಗೂ ವಿದರ್ಭ ತಂಡಗಳಿವೆ. ಕರ್ನಾಟಕ ತಂಡವು ಡಿ ಗುಂಪಿನಲ್ಲಿ ಛತ್ತೀಸ್‌ಗಢದಲ್ಲಿ ಆಡಲಿದೆ. ಈ ಗುಂಪಿನಲ್ಲಿ ಮಧ್ಯಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಗೋವಾ ಹಾಗೂ ಬರೋಡ ತಂಡಗಳಿವೆ.

ಇದನ್ನೂ ಓದಿ » ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ, ಡಿ.ಎಸ್.ಅರುಣ್‌ಗೆ ಭರ್ಜರಿ ಗೆಲುವು
ಪಂದ್ಯಾವಳಿ ಡಿ.31ಕ್ಕೆ ಮುಕ್ತಾಯವಾಗಲಿದೆ. ಪಂದ್ಯಗಳಿಗೆ ಕೆಂಪು ಬಣ್ಣದ ಚೆಂಡು ಬಳಸಲಾಗುತ್ತದೆ. ಆಟಗಾರರು ಬಿಳಿ ಬಣ್ಣದ ಉಡುಪಿನಲ್ಲಿ ಕಣಕ್ಕಿಳಿಯಲಿದ್ದಾರೆ. ಪಂದ್ಯ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿವೆ. 16 ವರ್ಷದೊಳಗಿನವರ ರಾಷ್ಟ್ರೀಯ ತಂಡದ ಆಯ್ಕೆಗಾರರು ಪಂದ್ಯ ಗಳನ್ನು ವೀಕ್ಷಿಸಲು ಶಿವಮೊಗ್ಗಕ್ಕೆ ಆಗಮಿಸುವರು ಎಂದು ಶಿವಮೊಗ್ಗ ವಲಯ ಸಂಚಾಲಕ ಎಚ್.ಎಸ್. ಸದಾನಂದ ತಿಳಿಸಿದ್ದಾರೆ.
ಯಾವ್ಯಾವ ಪಂದ್ಯ ಎಲ್ಲೆಲ್ಲಿ ನಡೆಯಲಿದೆ?
ಡಿ.8 ರಿಂದ 10 : ತಮಿಳುನಾಡು – ವಿದರ್ಭ – ಜೆಎನ್‌ಎನ್‌ಸಿಇ ಕಾಲೇಜು
ತ್ರಿಪುರ -ಉತ್ತರಪ್ರದೇಶ : ಕೆಎಸ್‌ಸಿಎ ಕ್ರೀಡಾಂಗಣ
ಡಿ.12 ರಿಂದ 14 : ಗುಜರಾತ್ – ತಮಿಳುನಾಡು : ಕೆಎಸ್‌ಸಿಎ -1
ಚಂಡೀಗಢ – ಉತ್ತರಪ್ರದೇಶ : ಕೆಎಸ್‌ಸಿಎ-2
ಡಿ.18 ರಿಂದ 20 : ಗುಜರಾತ್ – ತ್ರಿಪುರಾ : ಕೆಎಸ್‌ಸಿಎ-1
ಉತ್ತರಪ್ರದೇಶ –ವಿದರ್ಭ : ಕೆಎಸ್‌ಸಿಎ – 2
ಚಂಡೀಗಢ – ತಮಿಳುನಾಡು : ಜೆಎನ್‌ಎನ್‌ಸಿಇ ಕಾಲೇಜು
ಡಿ.23 ರಿಂದ 25 : ತಮಿಳುನಾಡು -ಉತ್ತರಪ್ರದೇಶ : ಕೆಎಸ್‌ಸಿಎ-1
ಗುಜರಾತ್ – ವಿದರ್ಭ : ಕೆಎಸ್‌ಸಿಎ-2
ಚಂಡೀಗಢ – ತ್ರಿಪುರಾ : ಜೆಎನ್‌ಎನ್ ಸಿಇ ಕಾಲೇಜು
ಡಿ.29 ರಿಂದ 31 : ತಮಿಳುನಾಡು – ತ್ರಿಪುರಾ : ಕೆಎಸ್‌ಸಿಎ-2
ಗುಜರಾತ್ – ಉತ್ತರಪ್ರದೇಶ : ಜೆಎನ್‌ಎನ್‌ಸಿಇ ಕಾಲೇಜು
LATEST NEWS
- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

- ಶಿವಮೊಗ್ಗ ಸಿಟಿಯ ಹಲವೆಡೆ ಜನವರಿ 29, 30ರಂದ ಅರ್ಧ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





