ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 JANUARY 2023
SHIMOGA | ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ ಇಬ್ಬರ ವಿರುದ್ಧ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸೈಬರ್ ಟಿಪ್ ಲೈನ್ (tip line) ಮೂಲಕ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರಿನ ಸಿಐಡಿ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿದೆ.
ಭದ್ರಾವತಿ ತಾಲೂಕು ಮತ್ತು ಶಿಕಾರಿಪುರ ತಾಲೂಕಿನ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ಕಿಗೆ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇವರು ಅಪ್ ಲೋಡ್ ಮಾಡಿದ್ದರು. ಇದರ ಕುರಿತು ಸೈಬರ್ ಟಿಪ್ ಲೈನ್ (tip line) ಮಾಹಿತಿ ನೀಡಿತ್ತು. ಈ ಹಿನ್ನೆಲೆ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಏನಿದು ಸೈಬರ್ ಟಿಪ್ ಲೈನ್?
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಸೈಬರ್ ಟಿಪ್ ಲೈನ್ ಸ್ಥಾಪನೆ ಮಾಡಲಾಗಿದೆ. ದೇಶದ ಯಾವುದೆ ಭಾಗದಲ್ಲಿ ಮಕ್ಕಳ ಅಶ್ಲೀಲ, ಲೈಂಗಿಕ ಚಿತ್ರಗಳನ್ನು ಇಂಟರ್ ನೆಟ್ ನಲ್ಲಿ ಸರ್ಚ್ ಮಾಡುವುದು, ನೋಡುವುದು, ಅಪ್ ಲೋಡ್, ಷೇರ್ ಮಾಡಿದರೆ ಸೈಬರ್ ಟಿಪ್ ಲೈನ್ ಗಮನಕ್ಕೆ ಬರಲಿದೆ. ದೆಹಲಿಯಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್ ಪ್ಲಾಯ್ಟೆಡ್ ಚಿಲ್ಡ್ರನ್ (NCMEC) ಸಂಸ್ಥೆಗೆ ಗೊತ್ತಾಗಲಿದೆ. ಇಲ್ಲಿ ದಾಖಲಾಗುವ ಐಪಿ ಅಡ್ರೆಸ್ ಆಧರಿಸಿ ವ್ಯಕ್ತಿಯ ವಿಳಾಸ ಸಹಿತ ಸೈಬರ್ ಟಿಪ್ ಲೈನ್ ರಿಪೋರ್ಟ್ ಸಿಡಿಯನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ರವಾನಿಸಲಾಗುತ್ತದೆ.
ಇದೆ ಮೊದಲಲ್ಲ
ಸೈಬರ್ ಟಿಪ್ ಲೈನ್ ಮೂಲಕ ಶಿವಮೊಗ್ಗದಲ್ಲಿ ದೂರು ದಾಖಲಾಗುತ್ತಿರುವುದು ಇದೆ ಮೊದಲಲ್ಲ. ಈ ಹಿಂದೆ ಕೂಡ ಹಲವರ ವಿರುದ್ಧ ಸೈಬರ್ ಟಿಪ್ ಲೈನ್ ದೂರು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ. ಅಪರಾಧ ಸಾಬೀತಾದರೆ ಐಟಿ ಕಾಯಿದೆ 67 ಬಿ ಪ್ರಕಾರ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಹಲವು ಕಡೆ ಕೆಲಸ ಖಾಲಿ ಇದೆ, ಇಲ್ಲಿದೆ ಎಲ್ಲದರ ಡಿಟೇಲ್ಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422