ನಟ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಸೈಕಲ್ ಜಾಥಾ, ಎಲ್ಲಿವರೆಗೆ ಜಾಥಾ ನಡೆಯುತ್ತೆ? ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 3 ಮಾರ್ಚ್ 2022

ನಟ ಪುನೀತ್ ರಾಜಕುಮಾರ್ ಅವರ ಸಮಾಧಿ ದರ್ಶನಕ್ಕೆ ಇಬ್ಬರು ಅಭಿಮಾನಿಗಳು ಶಿವಮೊಗ್ಗದಿಂದ ಸೈಕಲ್ ಜಾಥಾ ಆರಂಭಿಸಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಜಾಥಾ ನಡೆಯಲಿದೆ.

Shimoga Nanjappa Hospital

ಮೆಸ್ಕಾಂ ಎಂಜಿನಿಯರ್ ನಂಜುಂಡಿ ಮತ್ತು ಸ್ವರೂಪ್ ಎಂಬುವವರು ಸೈಕಲ್ ಜಾಥಾ ನಡೆಸುತ್ತಿದ್ದಾರೆ. ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಜಾಥಾ ಆರಂಭಿಸಲಾಯಿತು.

ಅಪ್ಪು ಫೋಟೊ ಹೊತ್ತು ಯಾತ್ರೆ

ನಂಜುಂಡಿ ಮತ್ತು ಸ್ವರೂಪ್ ಅವರು ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು. ಅಪ್ಪು ಅವರ ಸಮಾಧಿ ದರ್ಶನ ಮಾಡಬೇಕು ಎಂದುಕೊಂಡಿದ್ದರು. ಅದರಂತೆ ಇವತ್ತು ಇಬ್ಬರೂ ಸೈಕಲ್ ಹತ್ತಿದ್ದಾರೆ.

ಸೈಕಲ್ ಮುಂಭಾಗ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇರಿಸಿಕೊಂಡಿದ್ದಾರೆ. ಇವತ್ತು ಸೈಕಲ್ ಜಾಥಾ ಆರಂಭವಾಗಿದೆ. ನಾಳೆ ಹೊತ್ತಿಗೆ ಇಬ್ಬರು ಬೆಂಗಳೂರು ತಲುಪಲಿದ್ದಾರೆ. ಬಳಿಕ ಅಪ್ಪು ಸಮಾಧಿ ದರ್ಶನ ಪಡೆಯಲಿದ್ದಾರೆ.

ಸೈಕಲ್ ಜಾಥಾ ಆರಂಭಿಸಿದ ನಂಜುಂಡಿ ಮತ್ತು ಸ್ವರೂಪ್ ಅವರಿಗೆ ಸ್ನೇಹಿತರು, ಹಿತೈಷಿಗಳು ಇವತ್ತು ಶುಭ ಹಾರೈಸಿದರು.  

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment