ಶಿವಮೊಗ್ಗ: ವಾಹನಗಳ ಅತಿ ವೇಗಕ್ಕೆ ಬ್ರೇಕ್ ಹಾಕಿ, ಅಪಘಾತ ತಪ್ಪಿಸಲು ಸಿಟಿಯ ವಿವಿಧ ರಸ್ತೆಗಳಲ್ಲಿ ಹಂಪ್‌ಗಳನ್ನು ಹಾಕಲಾಗುತ್ತಿದೆ. ಆದರೆ ಈ ಹಂಪುಗಳೇ ಅಪಘಾತಕ್ಕೆ ಕಾರಣವಾಗಿ ಸಾರ್ವಜನಿಕ ಟೀಕೆಗು ಗುರಿಯಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ರಾತ್ರೋರಾತ್ರಿ ಹಂಪ್, ಹಲವರಿಗೆ ಗಾಯ
ಶಿವಮೊಗ್ಗ ನಗರದ ರೋಟರಿ ಬ್ಲಡ್ ಬ್ಯಾಂಕ್ ಎದುರಿನ ರಸ್ತೆಯ ಒಂದು ಬದಿಯಲ್ಲಿ ಕೆಲವೇ ಮೀಟರ್ ಅಂತರದಲ್ಲಿ ಎರಡು ಬೃಹತ್ ಹಂಪ್‌ಗಳನ್ನು ಹಾಕಲಾಗಿದೆ. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರ ಮನೆ ಮುಂಭಾಗ ಮತ್ತು ನವಶ್ರೀ ಸಭಾಂಗಣದ ಎದುರು ಎರಡು ಪ್ರತ್ಯೇಕ ಹಂಪ್‌ಗಳನ್ನ ಇತ್ತೀಚೆಗೆ ನಿರ್ಮಿಸಲಾಯಿತು.

ಇಷ್ಟು ವರ್ಷ ಇಲ್ಲದ ಹಂಪ್‌ಗಳು ರಾತ್ರೋರಾತ್ರಿ ಪ್ರತ್ಯಕ್ಷವಾಗಿದ್ದವು. ಈ ಬಗ್ಗೆ ವಾಹನ ಸವಾರರಿಗೆ ಮಾಹಿತಿ ಇಲ್ಲದ್ದರಿಂದ ಹಲವರು ಬಿದ್ದು ಗಾಯಗೊಂಡರು, ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದರು. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾದ ಬಳಿಕ ಹಂಪ್‌ಗಳಿಗೆ ಬಣ್ಣ ಬಳಿಯಲಾಯಿತು. ಜನರ ಟೀಕೆಯ ವಿಡಿಯೋ ಇಲ್ಲಿದೆ.
View this post on Instagram
ರಬರ್ ಹಂಪ್‌ಗಳು ಕಿತ್ತು ಹೋಗಿವೆ
ಇದೇ ರಸ್ತೆಯಲ್ಲಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಅಮೀರ್ ಅಹಮದ್ ಕಾಲೋನಿಯಲ್ಲಿ ರಸ್ತೆಯ ಎರಡು ಬದಿ ರಬರ್ ಹಂಪ್ ಹಾಕಲಾಗಿದೆ. ಭಾರಿ ವಾಹನಗಳ ಸಂಚಾರದ ಕಾರಣಕ್ಕೆ ಈ ಹಂಪ್‌ಗಳು ಹಾನಿಯಾಗಿದ್ದವು. ಇತ್ತೀಚೆಗಷ್ಟೆ ಹೊಸದಾಗಿ ರಬರ್ ಹಂಪ್‌ಗಳನ್ನು ಹಾಕಲಾಯಿತು. ಆದರೆ ಕೆಲವೇ ದಿನಗಳಲ್ಲಿ ಹಂಪ್‌ಗಳು ಹಾಳಾಗಿವೆ.

ರೈಲ್ವೆ ನಿಲ್ದಾಣದ ಮುಂಭಾಗದಲ್ಲಿಯು ಹಾಕಲಾಗಿದ್ದ ರಬರ್ ಹಂಪ್‌ಗಳು ಹಾಳಾಗಿ ತಿಂಗಳುಗಳೆ ಸರಿದು ಹೋಗಿವೆ. ಆದರೆ ಈತನಕ ಅವುಗಳನ್ನು ಬದಲಿಸುವ ಪ್ರಯತ್ನವಾಗಿಲ್ಲ. ಇವೆರಡು ಕಡೆ ರಬರ್ ಹಂಪ್‌ಗಳ ಬದಲು ಶಾಶ್ವತ ಹಂಪ್ ಹಾಕಿ ಎಂದು ಸ್ಥಳೀಯರು ಪದೇ ಪದೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ.

ಹಂಪ್ ಬಗ್ಗೆ ಮುನ್ನೆಚ್ಚರಿಕೆ ಬೇಕು
ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು, ಅಪಘಾತ ತಪ್ಪಿಸಲು ನಗರದ ಹಲವು ಕಡೆ ಹಂಪ್ ಹಾಕಲಾಗಿದೆ. ಇಷ್ಟು ವರ್ಷ ಹಂಪ್‌ಗಳಿಲ್ಲದ ರಸ್ತೆಯಲ್ಲಿ ಈಗ ಏಕಾಏಕಿ ಹಂಪ್ ಪ್ರತ್ಯಕ್ಷವಾದರೆ ವಾಹನ ಸವಾರರಿಗೆ ಗೊತ್ತಾಗುವುದಿಲ್ಲ. ಇದೆ ಕಾರಣಕ್ಕೆ ಅಪಘಾತಗಳು ಸಂಭವಿಸುತ್ತಿವೆ.
ಶಿವಮೊಗ್ಗದ ತುಂಗಾ ನದಿ ಹಳೆ ಸೇತುವೆ ಮುಂಭಾಗ ಕಡಿಮೆ ಎತ್ತರದ ಹಂಪ್ ಹಾಕಲಾಗಿದೆ. ಹತ್ತಿರ ಬರುವವರೆಗು ಇಲ್ಲೊಂದು ಹಂಪ್ ಇದೆ ಅನ್ನುವುದು ವಾಹನ ಸವಾರರಿಗೆ ಗೊತ್ತಾಗುವುದೇ ಇಲ್ಲ.

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಟೊಯೊಟಾ ಮತ್ತು ಕಿಯಾ ಶೋ ರೂಂಗಳ ಮುಂಭಾಗದಲ್ಲಿ ರಸ್ತೆಯ ಎರಡು ಬದಿ ಹಂಪ್‌ಗಳಿವೆ. ಈ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ರಾತ್ರಿ ಹೊತ್ತಲ್ಲಿ ಈ ಹಂಪ್ ಇರುವುದೇ ಗೊತ್ತಾಗುವುದಿಲ್ಲ.

ವಿವಿಧ ಬಡಾವಣೆಗಳ ಒಳ ರಸ್ತೆಗಳಲ್ಲಿ ಹಂಪ್‌ಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ಸಾರ್ವಜನಿಕರು ತಮ್ಮ ಮನೆಗಳ ಬಳಿ ಸಿಮೆಂಟ್ ಹಂಪ್‌ಗಳನ್ನು ತಾವೇ ಹಾಕಿಸಿಕೊಂಡಿದ್ದಾರೆ. ಈ ಹಂಪ್‌ಗಳು ಅವೈಜ್ಞಾನಿಕವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಶಿವಮೊಗ್ಗದಲ್ಲಿ ವೇಗ ತಗ್ಗಿಸಬೇಕಿದ್ದ ಹಂಪ್‌ಗಳೆ ಅಪಾಯ ಉಂಟು ಮಾಡುತ್ತಿವೆ. ಆದ್ದರಿಂದ ಹಂಪ್‌ಗಳನ್ನು ನಿರ್ಮಿಸಿದಾಗ ಕೆಲವು ದಿನ ಬ್ಯಾರಿಕೇಡ್‌ಗಳನ್ನು ಇರಿಸಿ ವಾಹನ ಸವಾರರಿಗೆ ಜಾಗೃತಿ ಮೂಡಿಸಬೇಕು. ಹಂಪ್‌ಗಳ ಮೇಲೆ ಎದ್ದು ಕಾಣುವಂತೆ ಬಣ್ಣ ಬಳಿಯಬೇಕು. ಹಂಪ್‌ಗಳ ಉದ್ದಕ್ಕು ಕಡ್ಡಾಯವಾಗಿ ರಿಫ್ಲೆಕ್ಟರ್ ಅಳವಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಇದನ್ನೂ ಓದಿ » ಸ್ವಂತ ಹಣದಲ್ಲಿ ಹೆದ್ದಾರಿಯ ಅಪಾಯಕಾರಿ ಗುಂಡಿ ಮುಚ್ಚಿದ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






