ಮತ್ತೆ ಕೈಕೊಟ್ಟ ಲೈಟುಗಳು, ವಾರ ಕಳೆದರು ಇತ್ತ ಮುಖ ಮಾಡದ ಅಧಿಕಾರಿಗಳು

 ಶಿವಮೊಗ್ಗ  LIVE 

ಶಿವಮೊಗ್ಗ: ಸವಳಂಗ ರಸ್ತೆಯ ಉಷಾ ನರ್ಸಿಂಗ್‌ ಹೋಂ ಸಮೀಪದ ಫ್ಲೈವರ್‌ನ ಅಂಡರ್‌ಪಾಸ್‌ನಲ್ಲಿ (Underpass) ಮತ್ತೆ ವಿದ್ಯುತ್‌ ದೀಪಗಳು ಹಾಳಾಗಿವೆ. ಈ ಬಾರಿ ಲೈಟ್‌ಗಳು ಬೆಳಗದೆ ಒಂದು ವಾರ ಕಳೆದರು ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ » ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕನಿಂದ ಮಾಲೀಕರ ಬೊಲೆರೋ ವಾಹನ ಕಳ್ಳತನ

Sigandur-Janthre-2026-scaled.

ಅಂಡರ್‌ ಪಾಸ್‌ನಲ್ಲಿ ಲೈಟ್‌ ಇಲ್ಲದೆ ಜನ ಓಡಾಡುವುದಕ್ಕೆ ಆತಂಕ ಪಡುತ್ತಿದ್ದಾರೆ. ಉಷಾ ನರ್ಸಿಂಗ್‌ ಹೋಂ ಕಡೆಯಿಂದ ಅಂಡರ್‌ಪಾಸ್‌ಗೆ ಹೋಗುವ ಎಡ ಬದಿಯಲ್ಲಿ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ಲೈಟ್‌ಗಳು ಹಾಳಾಗಿ ಒಂದು ವಾರಕ್ಕಿಂತಲು ಹೆಚ್ಚಿನ ಸಮಯವಾಗಿದೆ. ಅದರೆ ಈತನಕ ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ.

No lights in Savalanga Road underpass

ಎರಡು ವಾರದ ಹಿಂದೆ ಇಲ್ಲಿ ಲೈಟುಗಳು ಹಾಳಾಗಿರುವ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿತ್ತು. ಮರುದಿನವೇ ರಿಪೇರಿ ಮಾಡಲಾಗಿತ್ತು. ಆದರೆ ಕೆಲವೇ ದಿನದಲ್ಲಿ ಪುನಃ ಲೈಟುಗಳು ಹಾಳಾಗಿವೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment