ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಇತಿಹಾಸದಲ್ಲೆ ಅತಿ ಹೆಚ್ಚು ಲಾಭ, ಎಷ್ಟಿದೆ? ಏನೆಲ್ಲ ಹೊಸತು ಆರಂಭವಾಗ್ತಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ : ಕೇಂದ್ರ ಸಹಕಾರ ಬ್ಯಾಂಕ್‌ (BANK) ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿ ದೊಡ್ಡ ಮಟ್ಟದ ಲಾಭ ಗಳಿಸಿದೆ. ಈ ವರ್ಷದ ವಹಿವಾಟಿನಲ್ಲಿ 46 ಕೋಟಿ ರೂ. ಲಾಭ ಗಳಿಸಿದೆ. ಒಟ್ಟು 3464 ಕೋಟಿ ರೂ. ವ್ಯವಹಾರ ನಡೆಸಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಆರ್‌.ಎಂ.ಮಂಜುನಾಥ ಗೌಡ ತಿಳಿಸಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ, ಬ್ಯಾಂಕ್‌ ವಹಿವಾಟು ಮತ್ತು ಅಭಿವೃದ್ಧಿ ಕುರಿತು ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಿದರು.

ಅಧ್ಯಕ್ಷರು ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

point-1ಡಿಸಿಸಿ ಬ್ಯಾಂಕ್‌ನಲ್ಲಿ 1690 ಕೋಟಿ ರೂ. ಠೇವಣಿ ಇದೆ. ಷೇರು ಬಂಡವಾಳ 150 ಕೋಟಿ ರೂ., 75 ಕೋಟಿ ರೂ. ನಿಧಿ, 2582 ಕೋಟಿ ರೂ. ದುಡಿಯುವ ಬಂಡಾವಳವಿದೆ. ನಬಾರ್ಡ್‌ ಪುನರ್ಧನ ಸೌಲಭ್ಯ ಕಡಿತಗೊಳಿಸಿದ್ದರು 1.08 ಲಕ್ಷ ರೈತರಿಗೆ 1206 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. ಶೇ.99.60 ರಷ್ಟು ಸಾಲ ವಸೂಲಾತಿ ಇದೆ. 532 ರೈತರಿಗೆ 80 ಕೋಟಿ ರೂ. ಮಧ್ಯಮಾವಧಿ ಸಾಲ ನೀಡಲಾಗಿದೆ ಎಂದು ಮಂಜುನಾಥ ಗೌಡ ತಿಳಿಸಿದರು.

DCC-Bank-President-RM-Manjunatha-Gowda-press-meet

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ 5 ಕಡೆ ಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಆರಂಭಕ್ಕೆ ಅನುಮತಿ, ಎಲ್ಲೆಲ್ಲಿ ?

point-2ಮೂರು ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ಈಗ ಇನ್ನೂ 5 ಶಾಖೆಗಳನ್ನು ಆರಂಭಿಸಲು ರಿಸರ್ವ್‌ ಬ್ಯಾಂಕ್‌ (BANK) ಒಪ್ಪಿಗೆ ನೀಡಿದೆ. ಶಿವಮೊಗ್ಗದ ಗಾಜನೂರು, ಭದ್ರಾವತಿಯ ಬಾರಂದೂರು, ತೀರ್ಥಹಳ್ಳಿಯ ಎಪಿಎಂಸಿ ಯಾರ್ಡ್‌, ಸಾಗರ ತ್ಯಾಗರ್ತಿ, ಹೊಸನಗರದ ನಗರದಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಾಗುತ್ತಿದೆ. ಇನ್ನೂ 14 ಶಾಖೆಗಳ ಆರಂಭಿಸುವ ಗುರಿ ಇದೆ ಎಂದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

point-3ಸದ್ಯ ಮೊಬೈಲ್‌ ಬ್ಯಾಂಕಿಂಗ್‌ (BANK) ವ್ಯವಸ್ಥೆ ಇದೆ. ಈಗ ಯು.ಪಿ.ಐ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಇನ್ನು ಒಂದೂವರೆ ತಿಂಗಳಲ್ಲಿ ಯು.ಪಿ.ಐ ಸೇವೆ ಆರಂಭವಾಗಲಿದೆ. ಯು.ಪಿ.ಐ ವ್ಯವಸ್ಥೆ ಜಾರಿಯಿಂದ ಗ್ರಾಮೀಣ ಭಾಗದ ಗ್ರಾಹಕರು ಫೋನ್‌ ಪೇ ಬಳಸುವ ಅನುಕೂಲ ಸಿಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಭ್ಯವಿರುವ ಎಲ್ಲ ಸೇವೆಯನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಒದಗಿಸಲಾಗುತ್ತಿದೆ ಎಂದು ಮಂಜುನಾಥ ಗೌಡ ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಿಂದ 50 ಲಕ್ಷ ರೂ. ಚೆಕ್‌ ಹಸ್ತಾಂತರ

ಹೈಲೈಟ್‌ ಪಾಯಿಂಟ್‌ಗಳು

  • ವಿವಿಧ ಶಾಖೆಗಳ ಮೂಲಕ 15,824 ಗ್ರಾಹಕರಿಗೆ 545.26 ಕೋಟಿ ರೂ. ಕೃಷಿಯೇತರ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.88.89ರಷ್ಟಿದೆ.

DCC Bank President RM Manjunatha gowda Press meet

  • ಕೃಷಿ ಮತ್ತು ಕೃಷಿಯೇತರ ಸಾಲಗಳ ಭದ್ರತೆಗಾಗಿ ವಿಮಾ ಯೋಜನೆ ಜಾರಿಗೊಳಿಸಲಾಗಿದೆ.
  • 2025ರ ಜೂನ್‌ವರೆಗೆ ವಿಶೇಷ ಠೇವಣಿ ವ್ಯವಸ್ಥೆ ಮುಂದುವರೆಸಲಾಗಿದೆ.
  • ಪ್ರಸಕ್ತ ಸಾಲಿನಲ್ಲಿ 1.30 ಲಕ್ಷ ರೈತರಿಗೆ 1300 ಕೋಟಿ ರೂ. ಸಾಲ ಹಂಚಿಕೆ. ಶೇ.3ರ ಬಡ್ಡಿ ದರದಲ್ಲಿ ಸಾವಿರ ರೈತರಿಗೆ 100 ಕೋಟಿ ರೂ. ಮಧ್ಯಮಾವಧಿ ಕೃಷಿ ಸಾಲ. 2500 ಸ್ವ ಸಹಾಯ ಸಂಘಗಳಿಗೆ 100 ಕೋಟಿ ರೂ. ಸಾಲ ಹಂಚಿಕೆಯ ಗುರಿ ಹೊಂದಲಾಗಿದೆ.
  • ಪೆಟ್ರೋಲ್‌ ಬಂಕ್‌, ಟ್ರಾನ್ಸ್‌ಪೋರ್ಟ್‌ ಕಂಪನಿ, ಹಾಸ್ಪಿಟಲ್‌ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಕೃಷಿಯೇತರ ಸಾಲ ಹೆಚ್ಚಿಸುವ ಯೋಜನೆ.
  • 2 ಸಾವಿರ ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಮತ್ತು 2026ರ ಮಾರ್ಚ್‌ ಅಂತ್ಯಕ್ಕೆ 60 ಕೋಟಿ ರೂ. ಲಾಭ ಗಳಿಸುವ ಗುರಿ.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್‌.ಕೆ.ಮರಿಯಪ್ಪ, ನಿರ್ದೇಶಕರು ಸೇರಿದಂತೆ ಹಲವರು ಇದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment