ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 DECEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೆಡಿಕಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೃದಯದಲ್ಲಿ ಬೆಳೆದಿದ್ದ ಗೆಡ್ಡೆಯನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಡಾ.ಬಾಲಸುಬ್ರಮಣಿ ನೇತೃತ್ವದ ತಂಡ ಈ ಆಪರೇಷನ್ ನೆರವೇರಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ.ಬಾಲಸುಬ್ರಹ್ಮಣಿ, 35 ವರ್ಷದ ಚನ್ನಬಸಪ್ಪ ಅವರಿಗೆ ಹೃದಯದಲ್ಲಿ ಬೆಳೆದಿದ್ದ ಗೆಡ್ಡೆಯನ್ನು ತೆಗೆಯಲಾಗಿದೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ನಾಲ್ಕು ವಿಭಿನ್ನ, ಕ್ಲಿಷ್ಟ ಕೇಸ್
ಕೇಸ್ 1 : ಚನ್ನಬಸಪ್ಪ (35), ಎಂಟು ವರ್ಷದಿಂದ ಹೃದಯದಲ್ಲಿ ಗೆಡ್ಡೆ ಬೆಳೆದಿತ್ತು. ಹಾಗಾಗಿ ಚನ್ನಬಸಪ್ಪ ಅವರ ದೇಹದ ಎಡ ಭಾಗ ಶಕ್ತಿಹೀನವಾಗಿತ್ತು. ಅನೇಕ ಆಸ್ಪತ್ರೆಗೆ ಅಲೆದಾಡಿದರೂ ಪ್ರಯೋಜವಾಗಿರಲಿಲ್ಲ. ಈಗ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಚನ್ನಬಸಪ್ಪ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಕೇಸ್ 2 : ರವಿ (60), ಹುಟ್ಟಿನಿಂದ ಕಿವುಡ ಮತ್ತು ಮೂಕರಾಗಿದ್ದಾರೆ. 2020ರ ಜುಲೈನಲ್ಲಿ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದರು. ಆದರೆ ಎದೆನೋವು ಪುನರಾವರ್ತನೆಯಾಗಿತ್ತು. ಬಳಿಕ ಸಹ್ಯಾದ್ರಿ ನಾರಾಯಣ ಹೃದಯಾಲದಲ್ಲಿ ಪರೀಕ್ಷೆಗೊಳಪಡಿಸಿ, ಬೈಪಾಸ್ ಸರ್ಜರಿ ಮಾಡಲಾಯಿತು. ಕಿವುಡ ಮತ್ತು ಮೂಕರಿಗೆ ಬೈಪಾಸ್ ಸರ್ಜರಿ, ಆ ಬಳಿಕ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸುವುದು ಕಷ್ಟಕರ. ಆದರೆ ಸಂವಹನ ಟೆಕ್ನಿಕ್ ಬಳಸಿ ರವಿ ಅವರಿಗೆ ತಿಳಿವಳಿಕೆ ಮೂಡಿಸಲಾಗಿದೆ. ಇದು ಅಪರೂಪದ ಪ್ರಕರಣ.
ಕೇಸ್ 3 : ಸಕ್ಕರೆ ಕಾಯಿಲೆ, ಕೈ, ಕಾಲು ನಡುಕ, ಪಾರ್ಕಿನ್ಸನ್‍ನಿಂದ ಬಳಲುವವರಿಗೆ ಬೈಪಾಸ್ ಸರ್ಜರಿ ಕಷ್ಟ. ಕಾಂತಪ್ಪ (68), ಎಂಬುವವರ ಮೂರು ರಕ್ತನಾಳದಲ್ಲಿ ರಕ್ತ ಸಂಚಾರಕ್ಕೆ ಅಡೆತಡೆ ಆಗಿತ್ತು. ಆದರೂ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅತ್ಯಂತ ಚಾಲೆಂಜಿಂಗ್ ಅನಿಸುವ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಕಾಂತಪ್ಪ ಅವರ ಆರೋಗ್ಯ ಸುಧಾರಣೆಯಾಗಿದೆ.
ಕೇಸ್ 4 : ಮೂರು ವರ್ಷದ ಹಿಂದೆ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರೂ, ರಕ್ತ ನಾಳದಲ್ಲಿ ಅಡೆತಡೆ ಉಂಟಾಯಿತು. ಹೃದಯದ ಕಾರ್ಯಕ್ಷಮತೆ ಶೇ.15ರಷ್ಟು ಇತ್ತು. ಇಂತಹ ರೋಗಿಗಳಿಗೆ ಅದು ಅಂತಿಮ ಕ್ಷಣ ಎಂದು ಹೇಳಲಾಗುತ್ತದೆ. ಚಂದ್ರಶೇಖರ್ (65) ಎಂಬುವವರಿಗೆ ಇದೆ ರೀತಿ ಸಮಸ್ಯೆ ಇತ್ತು. ಶಸ್ತ್ರ ಚಿಕಿತ್ಸೆ ಬಳಿಕ ಒಂದೇ ವಾರದಲ್ಲಿ ಹೃದಯದ ಕಾರ್ಯಕ್ಷಮತೆ ಶೇ.25 ರಿಂದ 30ರಷ್ಟು ಸುಧಾರಣೆ ಕಂಡಿದೆ.
ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ಪತ್ರಿಕಾಗೋಷ್ಠಿಗೆ ಕರೆತರಲಾಗಿತ್ತು. ತಮ್ಮ ಆರೋಗ್ಯದಲ್ಲಿ ಚೇತರಿಗೆ ಕಾಣುತ್ತಿರುವುದನ್ನು ಅವರು ತಿಳಿಸಿದರು.