SHIVAMOGGA LIVE NEWS | 25 JANUARY 2024
SHIMOGA : ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ವಾಹನಗಳ ಸರಾಗ ಸಂಚಾರಕ್ಕೆ ಬಿ.ಹೆಚ್.ರಸ್ತೆಗೆ ಸಂಪರ್ಕ ಕಲ್ಪಿಸುವೆಡೆ ಡಿವೈಡರ್ ನಿರ್ಮಿಸಲಾಗುತ್ತಿದೆ.
ಹೊಳೆಹೊನ್ನೂರು ರಸ್ತೆಗೆ ನೇರವಾಗಿ ಸಂಪರ್ಕ ಕಲ್ಪಿಸಲು ವೃತ್ತಾಕಾರದ ಮೇಲ್ಸೇತುವೆ ನಿರ್ಮಿಸಲಾಗಿದೆ. ಕಾಮಗಾರಿ ಕೊನೆ ಹಂತಕ್ಕೆ ತಲುಪಿದೆ. ಸೇತುವೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಡಿವೈಡರ್‌ಗಳನ್ನು ನಿರ್ಮಿಸಲಾಗುತ್ತಿದೆ. ಸೇತುವೆಯಿಂದ ಕೆಳಗಿಳಿದು ಬರುವ ವಾಹನಗಳು ಬಿ.ಹೆಚ್.ರಸ್ತೆಯ ಎಡ ಭಾಗಕ್ಕೆ ಸಂಚರಿಸಲು ಪ್ರತ್ಯೇಕ ಡಿವೈಡರ್ ನಿರ್ಮಿಸಲಾಗಿದೆ.
ಇನ್ನು, ಎನ್‌ಸಿಸಿ ಕಚೇರಿ ಮುಂಭಾಗ ಬಿ.ಹೆಚ್.ರಸ್ತೆಯಲ್ಲಿ ಡಿವೈಡರ್ ನಿರ್ಮಿಸಲಾಗುತ್ತಿದೆ. ಚಾಲಕರಲ್ಲಿ ಗೊಂದಲ ನಿವಾರಣೆಗೆ ಮತ್ತು ಅಪಘಾತ ತಡೆಗೆ ಈ ಕ್ರಮ ವಹಿಸಲಾಗಿದೆ. ಮೇಲ್ಸೇತುವೆಯಿಂದ ಕೆಳಗೆ ಬರುವ ವಾಹನಗಳು ಡಿವೈಡರ್ ಹಾದು ತುಂಗಾ ಸೇತುವೆ ಕಡೆಗೆ ತೆರಳಬೇಕಾಗುತ್ತದೆ.
ಸವಳಂಗ ರಸ್ತೆ ಮೇಲ್ಸೇತುವೆ ಪರಿಶೀಲನೆ
ಸವಳಂಗ ರಸ್ತೆಯಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆಯ ಕೊನೆಯ ಹಂತದ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲಿಸಿದರು. ಇದೇ ವೇಳೆ ಸ್ಥಳೀಯರ ಮನವಿಗೆ ಸ್ಪಂದಿಸಿ, ಸೇತುವೆಯ ಕೆಳಭಾಗದಲ್ಲಿ ದ್ವಿಚಕ್ರ ಹಾಗೂ ಇನ್ನಿತರ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುವಂತೆ ಯೋಜನೆಯಲ್ಲಿ ಬದಲಾವಣೆ ಮಾಡಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ – ಎಲೆಚುಕ್ಕೆ ರೋಗ, ಕೆಎಫ್‌ಡಿ ಭೀತಿ, ಜಿಲ್ಲೆಯ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ, ಗ್ಯಾರಂಟಿಗಳನ್ನು ತಲುಪಿಸುವಂತೆ ಸೂಚನೆ
ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಆರತಿ ಪ್ರಕಾಶ್, ರೈಲ್ವೆ ಅಧಿಕಾರಿಗಳಾದ ರಾಜಕುಮಾರ್, ಪ್ರಮುಖರಾದ ದಿನೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200