ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆಯಲ್ಲಿ ಇವತ್ತು ನೂರಕ್ಕು ಹೆಚ್ಚು ಡಿಜೆ ಸಿಸ್ಟಮ್‌ಗಳು (DJ System) ಇದ್ದವು. ಇನ್ನೊಂದೆಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರೆ ಡಿಜೆಗೆ ವಿರೋಧ ವ್ಯಕ್ತಪಡಿಸಿ ಭಿತ್ತಿ ಪತ್ರ ಪ್ರದರ್ಶಿಸಿದರು. ಇನ್ನೊಂದೆಡೆ ಭಾರಿ ಶಬ್ದ ಮಾಡುತ್ತಿದ್ದ ಡಿಜೆ ವಾಹನವನ್ನು ಪೊಲೀಸರು ತಡೆದು ಸೌಂಡ್ ಆಫ್ ಮಾಡಿಸಿದ ಘಟನೆ ನಡೆಯಿತು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ನಗರದಲ್ಲಿ ಇವತ್ತು ಅದ್ಧೂರಿಯ ಈದ್ ಮಿಲಾದ್ ಮೆರವಣಿಗೆ ನಡೆಯಿತು. ದೊಡ್ಡ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಈದ್ ಮೆರವಣಿಗೆಯಲ್ಲಿ ಡಿಜೆಗಳ ಅಬ್ಬರವೆ ಜೋರಿತ್ತು. ನೂರಕ್ಕಿಂತಲು ಹೆಚ್ಚು ವಾಹನಗಳಲ್ಲಿ ಸ್ಪೀಕರ್‌ಗಳು, ಡಿ.ಜೆ ಬಳಕೆ ಮಾಡಲಾಗಿತ್ತು.
ಡಿಜೆ ಆಫ್ ಮಾಡಿಸಿದ ಪೊಲೀಸ್
ಮೆರವಣಿಗೆಯಲ್ಲಿ ಮಹಾರಾಷ್ಟ್ರದಿಂದ ತರಿಸಲಾಗಿದ್ದ ಡಿ.ಜೆ ವಾಹನ ತಡೆದ ಪೊಲೀಸರು ಮ್ಯೂಸಿಕ್ ಆಫ್ ಮಾಡಿಸಿದ ಘಟನೆಯು ನಡೆಯಿತು. ನಿಗದಿಗಿಂತಲು ಹೆಚ್ಚು ಡೆಸಿಬಿಲ್‌ನ ಶಬ್ದ ಇದ್ದಿದ್ದರಿಂದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಆ ಡಿ.ಜೆ.ವಾಹನವನ್ನು ಡಿವೈಎಸ್‌ಪಿ ಕೃಷ್ಣಮೂರ್ತಿ ತಡೆದು ನಿಲ್ಲಿಸಿದರು. ಸ್ಥಳದಲ್ಲೇ ಇದ್ದ ಮುಸ್ಲಿಂ ಮುಖಂಡರ ಜೊತೆ ಚರ್ಚಿಸಿ ಮ್ಯೂಸಿಕ್ ಆಫ್ ಮಾಡಿಸಿದರು. ಆ ವಾಹನದ ಮ್ಯೂಸಿಕ್ ಸಿಸ್ಟಮ್‌ಗಳು ಬಂದ್ ಆಗಿಯೇ ಮೆರವಣಿಗೆಯಲ್ಲಿ ಸಾಗಿತು.

ಡಿಜೆ ವಿರುದ್ಧ ಭಿತ್ತಿ ಪತ್ರ ಪ್ರದರ್ಶನ
ಇನ್ನು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಮುದಾಯದ ಯುವಕರಿಂದಲೇ ಡಿ.ಜೆ ಮತ್ತು ಡಾನ್ಸ್‌ಗೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಫ್ಲೇಕರ್ ಪ್ರದರ್ಶಿಸಿಕೊಂಡು ಮೆರವಣಿಗೆಯಲ್ಲಿ ಭಾಗಹಿಸಿದ್ದರು.





ಇದನ್ನೂ ಓದಿ » ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮಿಲಾದ್ ಮೆರವಣಿಗೆ, ಇಲ್ಲಿದೆ ಫೋಟೊ ಸಹಿತ ರಿಪೋರ್ಟ್

DJ System
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






