ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 08 JANUARY 2021
ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಶಿವಮೊಗ್ಗದಲ್ಲಿ 2ನೇ ವರ್ಷದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಕ್ಲಬ್ ಅಧ್ಯಕ್ಷ ಪ್ರೀತಿಮ್, ಜನವರಿ 10ರಂದು ಬೆಳಗ್ಗೆ 9.30ರಿಂದ ಕುವೆಂಪು ರಂಗಮಂದಿರದ ಹಿಂಭಾಗದ ಎನ್‍ಇಎಸ್ ಮೈದಾನದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ನಗದು ಬಹುಮಾನ, ವಿಶೇಷ ಟ್ರೋಫಿ
ಶ್ವಾನಗಳ 1 ರಿಂದ 8ನೇ ವರ್ಗದವರೆಗೆ ಪ್ರಥಮ ಬಹುಮಾನ 20 ಸಾವಿರ ರೂ., ದ್ವಿತೀಯ 15 ಸಾವಿರ ರೂ., ಹಾಗೂ ತೃತೀಯ 10 ಸಾವಿರ ರೂ.,
ಬೆಕ್ಕುಗಳ ವರ್ಗಕ್ಕೆ ಪ್ರಥಮ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ. ಹಾಗೂ ತೃತೀಯ 1 ಸಾವಿರ ರೂ., ಬಹುಮಾನ ನೀಡಲಾಗುವುದು.
ಬೆಸ್ಟ್ ಪಪ್ಪಿ ಅವಾರ್ಡ್ 3 ಸಾವಿರ ರೂ., ರಿಸರ್ವಡ್ ಬೆಸ್ಟ್ ಪಪ್ಪಿಗೆ ರೂ.2 ಸಾವಿರ, ಬೆಸ್ಟ್ ಇಂಡಿಯನ್ ಬ್ರೀಡ್‍ಗೆ ರೂ.2 ಸಾವಿರ ಹಾಗೂ ಬೆಸ್ಟ್ ಹ್ಯಾಂಡಲ್ಲರ್, ಬೆಸ್ಟ್ ಜ್ಯೂನಿಯರ್ ಹ್ಯಾಂಡಲರ್‍ಗೆ ತಲಾ 1 ಸಾವಿರ ರೂ., ಇದಲ್ಲದೇ ಬೆಸ್ಟ್ ಸೆಲ್ಫಿ ಅವಾರ್ಡ್ ನೀಡಲಾಗುವುದು.
ಶ್ವಾನ ಪ್ರವೇಶ ದರ 300 ರೂ., ಬೆಕ್ಕುಗಳ ಪ್ರವೇಶಕ್ಕೆ 200 ರೂ., ವಿಧಿಸಲಾಗಿದೆ. ಈಗಾಗಲೇ 150 ಶ್ವಾನ ಹಾಗೂ 50ಕ್ಕೂ ಹೆಚ್ಚು ಬೆಕ್ಕುಗಳ ನೊಂದಣಿಯಾಗಿದೆ. ಆ ದಿನ ಬೆಳಗ್ಗೆ 10 ಗಂಟೆವರೆಗೆ ನೋಂದಣಿಗೆ ಅವಕಾಶವಿದೆ. ಸ್ಥಳದಲ್ಲಿ ನೋಂದಾಯಿಸಿಕೊಳ್ಳುವವರಿಗೆ 500 ರೂ. ಶುಲ್ಕವಿರಲಿದೆ. ಇನ್ನು, ಮುದೋಳ್ ನಾಯಿಗಳಿಗೆ ಪ್ರವೇಶ ಉಚಿತ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 7676441122, 9964289695, 7892685676 ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಉಲ್ಲಾಸ್, ಜಿ.ಎಸ್.ಪ್ರಸಾದ್, ಮನೋಹರ್, ಸಂಜು, ಸಮೀಕ್ಷಾ ಉಪಸ್ಥಿತರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422