ಶಿವಮೊಗ್ಗ : ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಹವ್ಯಾಸಿ ರಂಗತಂಡಗಳ ಕಲಾವಿದರ ಒಕ್ಕೂಟದಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.27ರಂದು ಚಲಿಸುವ ಬಸ್‌ನಲ್ಲಿ ನಾಟಕ (drama) ಪ್ರದರ್ಶನ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕ ಪ್ರಸನ್ನ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.27ರಂದು ಬೆಳಗ್ಗೆ 7ಕ್ಕೆ ಸಹ್ಯಾದ್ರಿ ಕಲಾ ತಂಡದ ಕಲಾವಿದರು ನಗರದ ಅಲ್ಲಮಪ್ರಭು ಮೈದಾನದಲ್ಲಿ, 8ಕ್ಕೆ ನೆಹರು ಕ್ರೀಡಾಂಗಣ, 9ಕ್ಕೆ ಬಸವೇಶ್ವರ ವೃತ್ತ, ಮಧ್ಯಾಹ್ನ 1ಕ್ಕೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ರಂಗಗೀತೆ ಗಾಯನ ನಡೆಸಿಕೊಡಲಿದ್ದಾರೆ ಎಂದರು.
![]() |
ಶಿವಮೊಗ್ಗ – ಸವಳಂಗ ನಡುವಿನ ಬಸ್ ಪ್ರಯಾಣದಲ್ಲಿ ಶಿವಕುಮಾರ ಮಾವಲಿ ಅವರ ಕತೆ ಆಧರಿಸಿದ ‘ಕೆಎ 16 ಎಫ್ 452 ಮುಗಿಯದ ಪಯಣ’ ರಂಗರೂಪ ಪ್ರದರ್ಶಿಸಲಾಗುವುದು. ಬೆಳಗ್ಗೆ 11ಕ್ಕೆ ನಗರದ ಖಾಸಗಿ ಬಸ್ ನಿಲ್ದಾಣದಿಂದ ಹೊರಡುವ ಬಸ್‌ನಲ್ಲಿ ಮೊದಲ ಪ್ರದರ್ಶನ ನಡೆಯಲಿದೆ ಎಂದರು.
ಚಲಿಸುತ್ತಿರುವ ಬಸ್‌ನಲ್ಲಿ ನಾಟಕ (drama) ಪ್ರದರ್ಶನ ಮಾಡಲಾಗುತ್ತಿದೆ. ಇದು ಅತ್ಯಂತ ವಿಭಿನ್ನವಾದ ಪ್ರದರ್ಶನ. ಖಾಸಗಿ ಬಸ್ ಮಾಲೀಕರ ಸಂಘದ ಜೊತೆ ಚರ್ಚೆ ನಡೆಸಲಾಗಿದೆ. ಬೆಳಗ್ಗೆ 11 ಗಂಟೆಗೆ ಒಂದು ಬಸ್‌ನಲ್ಲಿ ಇಬ್ಬರು ಕಲಾವಿದರು, ಇಬ್ಬರು ತಂತ್ರಜ್ಞರು ನಾಟಕ ಪ್ರದರ್ಶಿಸಲಿದ್ದಾರೆ.
– ಹೊನ್ನಾಳಿ ಚಂದ್ರಶೇಖರ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ನಗರದ ವಕೀಲರ ಭವನ ಆವರಣದಲ್ಲಿ ಶಿವಮೊಗ್ಗ ರಂಗಾಯಣದ ನಾಟಕ ವಿ ದ ಪೀಪಲ್ ಆಫ್ ಇಂಡಿಯಾ ದೃಶ್ಯ, ಮಹಾನಗರ ಪಾಲಿಕೆ ಆವರಣದಲ್ಲಿ ಕುವೆಂಪು ಅವರ ಜಲಗಾರ ನಾಟಕದ ದೃಶ್ಯ ಹಾಗೂ ಜಯನಗರ ಠಾಣೆ ಎದುರು ಡಿಜಿಟಲ್ ಅರೆಸ್ಟ್ ಕುರಿತ ಆರ್ಟ್ ಇನ್‌ಸ್ಟಾಲೇಷನ್ ಪ್ರದರ್ಶನ ಇರಲಿದೆ ಎಂದು ರಂಗಾಯಣ ನಿರ್ದೇಶಕ ಪ್ರಸನ್ನ ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆ, ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ವರ್ಷಧಾರೆ, ಎಲ್ಲೆಲ್ಲಿ ಹೇಗಿದೆ ಈಗ?
ಮಾ.27ರಂದು ಬೆಳಗ್ಗೆ 11ಕ್ಕೆ ಅಲ್ ಮಹಮೂದ್ ಕಾಲೇಜಿನಲ್ಲಿ ಡಾ. ವೆಂಕಟೇಶ್ವರ ಅವರಿಂದ ಶಿಕ್ಷಣದಲ್ಲಿ ರಂಗ ಕಲೆ ಸವಾಲು ಹಾಗೂ ಸಾಧ್ಯತೆ ಕುರಿತು ಉಪನ್ಯಾಸ, ಮಧ್ಯಾಹ್ನ 2 ಗಂಟೆಗೆ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜಯ್ ನೀನಾಸಂ ಹಾಗೂ ನಾಗರಾಜ ನೀಲ್‌ರಿಂದ ರಂಗ ಪ್ರಾತ್ಯಕ್ಷಿಕೆ ನಡೆಯಲಿದೆ.
ನಿರಂತರ 14 ಗಂಟೆ ಕಾರ್ಯಕ್ರಮ ನಡೆಯುತ್ತಿರುವುದು ರಾಜ್ಯದಲ್ಲೇ ವಿಭಿನ್ನ ಪ್ರಯತ್ನ. ಹಲವು ರಂಗ ಕಲಾವಿದರು, ತಂತ್ರಜ್ಞರು ಈ ಪ್ರಯೋಗದಲ್ಲಿ ಭಾಗವಹಿಸಲಿದ್ದಾರೆ.
– ಆರ್.ಎಸ್.ಹಾಲಸ್ವಾಮಿ, ಕಲಾವಿದರು ಸಂಸ್ಥೆಯ ಉಪಾಧ್ಯಕ್ಷ
ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ಮಂಜುನಾಥ್ ಮತ್ತು ಸಂಗಡಿಗರಿಂದ ಪೌರಾಣಿಕ ರಂಗಗೀತೆ ಗಾಯನ ನಡೆಯಲಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ವಿಶ್ವರಂಗಭೂಮಿ ದಿನಾಚರಣೆ ಸಂದೇಶ ವಾಚನ ಮಾಡಲಿದ್ದಾರೆ. ಮಲೆನಾಡು ಕಲಾತಂಡದ ಕಲಾವಿದರು ಮುದುಕನ ಮದುವೆ ನಾಟಕ ಪ್ರದರ್ಶಿಸಲಿದ್ದಾರೆ. ನಾಟಕ ಹಾಗೂ ರಂಗಭೂಮಿ ಸಂಬಂಧಿಸಿದ ಕೃತಿಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ ಎಂದು ತಿಳಿಸಿದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಕಲೀಂ ಉಲ್ಲಾ, ಡಿ. ಲಿಟ್ ಪುರಸ್ಕೃತ ಡಾ. ಗಣೇಶ್ ಕೆಂಚನಾಲ, ಪೌರಾಣಿಕ ನಾಟಕ ಕಲಾವಿದ ರಾಜು ಮಾಸ್ಟರ್ ಹಾಗೂ ಕರಿಯಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂತೇಶ್ ಕದರಮಂಡಲಗಿ, ಸುರೇಶ್, ಗಣೇಶ್ ಕೆಂಚನಾಲ ಇದ್ದರು.

ಇದನ್ನೂ ಓದಿ » ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಹಾಸನದಲ್ಲಿ ಉದ್ಯೋಗ, ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200