ದುರ್ಗಿಗುಡಿಯಲ್ಲಿ ವಿಜೃಂಭಣೆಯ ರಥೋತ್ಸವ, ರಣ ಬಿಸಿಲಲ್ಲೂ ಸೇರಿದ್ದರು ದೊಡ್ಡ ಸಂಖ್ಯೆಯ ಜನ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ :  ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ (Temple) ವಿಶೇಷ ಪೂಜೆ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ದೇವರಿಗೆ ಕೈ ಮುಗಿದು ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದರು.

ದುರ್ಗಿಗುಡಿಯ ದುರ್ಗಮ್ಮ ಮತ್ತು ಮರಿಯಮ್ಮ ದೇವಿ ದೇವಸ್ಥಾನದಿಂದ (Temple) ದುರ್ಗಿಗುಡಿ ಮುಖ್ಯರಸ್ತೆವರೆಗೆ ರಥೋತ್ಸವ ನಡೆಯಿತು.

ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ

ರಥೋತ್ಸವಕ್ಕು ಮುನ್ನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ದುರ್ಗಿಗುಡಿಯ ವಿವಿಧೆಡೆ‌ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಭಕ್ತರು ದೇವಿಗೆ ಪೂಜೆ ಸಲ್ಲಿಸಿ, ಹಣ್ಣು ಕಾಯಿ ಅರ್ಪಿಸಿದರು. ನಂತರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ರಥವನ್ನು ಭಕ್ತರು ಎಳೆದು ಪುನೀತರಾದರು.

Durgigudi-Temple-Durgamma-Mariyamma-ratotsava
ಶಿವಮೊಗ್ಗದ ದುರ್ಗಿಗುಡಿಯಲ್ಲಿ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವ ನಡೆಯಿತು.

ಭಕ್ತರು ಮಂಡಕ್ಕಿ, ಬಾಳೆ ಹಣ್ಣುನ್ನು ಪಲ್ಲಕ್ಕಿ ಮತ್ತು ರಥದ ಮೇಲೆ ತೂರಿ ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಜಾತ್ರೆಯ ಮರುದಿನ ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಭಾರಿ ಬಿಸಿಲಿಗೆ ಭಕ್ತರು ಹೈರಾಣು

ರಥೋತ್ಸವಕ್ಕೆ ಸೇರಿದ್ದ ದೊಡ್ಡ ಸಂಖ್ಯೆಯ ಭಕ್ತರು ರಣ ಬಿಸಿಲಿಗೆ ಹೈರಾಣಾದರು. ಕಟ್ಟಡಗಳ ಕೆಳಗೆ, ಪೆಂಡಾಲ್‌ಗಳ ಅಡಿಯಲ್ಲಿ ನಿಂತು ದಣಿವಾರಿಸಿಕೊಳ್ಳುತ್ತಿದ್ದರು. ಕೊಂಚ ಹೊತ್ತು ಬಿಸಿಲಿಗೆ ಮೈ ಒಡ್ಡಿದವರು ಕೂಡಲೆ ನೆರಳಿಗೆ ದೌಡಾಯಿಸುತ್ತಿದ್ದರು.

ಇಲ್ಲಿದೆ ರಥೋತ್ಸವದ ಫೋಟೊಗಳು

ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಜಾತ್ರೆ
ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಪಲ್ಲಕ್ಕಿ ಉತ್ಸವ.
ರಥೋತ್ಸವಕ್ಕು ಮುನ್ನ ಪಲ್ಲಕ್ಕಿಗೆ ಪೂಜೆ ನೆರವೇರಿಸಲಾಯಿತು.
ರಥೋತ್ಸವಕ್ಕು ಮುನ್ನ ಪಲ್ಲಕ್ಕಿಗೆ ಪೂಜೆ ನೆರವೇರಿಸಲಾಯಿತು.
ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಥದತ್ತ ಮಂಡಕ್ಕಿ, ಬಾಳೆಹಣ್ಣು ತೂರಿದ ಭಕ್ತರು.
ರಥದತ್ತ ಮಂಡಕ್ಕಿ, ಬಾಳೆಹಣ್ಣು ತೂರಿದ ಭಕ್ತರು.
ರಥೋತ್ಸವದ ಸಂದರ್ಭ ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿದರು. ಮೊಬೈಲ್‌ನಲ್ಲಿ ರಥೋತ್ಸವ ಸೆರೆ ಹಿಡಿದರು.
ರಥೋತ್ಸವದ ಸಂದರ್ಭ ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿದರು. ಮೊಬೈಲ್‌ನಲ್ಲಿ ರಥೋತ್ಸವ ಸೆರೆ ಹಿಡಿದರು.
ರಥೋತ್ಸವ ಸಂದರ್ಭ ವಿವಿಧ ಆಟಿಕೆಗಳ ಮಾರಾಟ ಬಿರುಸಾಗಿತ್ತು.
ರಥೋತ್ಸವ ಸಂದರ್ಭ ವಿವಿಧ ಆಟಿಕೆಗಳ ಮಾರಾಟ ಬಿರುಸಾಗಿತ್ತು.
ದುರ್ಗಿಗುಡಿ ರಥೋತ್ಸವದಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ದುರ್ಗಿಗುಡಿ ರಥೋತ್ಸವದಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವದ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.
ರಥೋತ್ಸವದ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.

NFC-Chicken-Kabab

ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment