ಶಿವಮೊಗ್ಗದಲ್ಲಿ ಅದ್ಧೂರಿ ಈದ್‌ ಮಿಲಾದ್‌ ಮೆರವಣಿಗೆ, ಇಲ್ಲಿದೆ ಫೋಟೊ ಸಹಿತ ರಿಪೋರ್ಟ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ನಗರದಲ್ಲಿ ಈದ್‌ ಮಿಲಾದ್‌ (Eid Milad) ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮೆರವಣಿಗೆ ಹೇಗಿತ್ತು? ಏನೆಲ್ಲ ಇತ್ತು? ಇಲ್ಲಿದೆ ಪಾಯಿಂಟ್ಸ್‌

ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಮೆರವಣಿಗೆ ಆರಂಭವಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮೆರವಣಿಗೆ ಮುಕ್ತಾಯವಾಯಿತು.

ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್‌ ವೇಷದಲ್ಲಿ ಮಕ್ಕಳು ಭಾಗವಹಿಸಿದ್ದು ಗಮನ ಸೆಳೆಯಿತು. ಟಿಪ್ಪು ಸುಲ್ತಾನ್‌ ಚಿತ್ರವಿರುವ ಬೃಹತ್‌ ‍ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.

ವಿವಿಧೆಡೆಯ ಸುಮಾರು 100ಕ್ಕೂ ಹೆಚ್ಚು ಡಿ.ಜೆ.ಗಳು ಮೆರವಣಿಗೆಯಲ್ಲಿ ಇದ್ದವು. ಪ್ರತಿ ಡಿಜೆ ಹಿಂಬದಿಯು ಯುವಕರ ಗುಂಪು ಕುಣಿದು ಕುಪ್ಪಳಿಸುತ್ತಿದ್ದರು.

ಇಲ್ಲಿದೆ ಮೆರವಣಿಗೆಯ ಫೋಟೊಗಳು

Eid Milad Procession in Shimoga
ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡರು.
Eid Milad Procession in Shimoga
ಶಿವಮೊಗ್ಗದಲ್ಲಿ ಟಪ್ಪು ಸುಲ್ತಾನ್‌ ವೇಷಧಾರಿ ಮಕ್ಕಳು.
Eid Milad Procession in Shimoga
ಆಟೋ ಮೇಲೆ ಸಿಂಹಾಸನದಲ್ಲಿ ಕುಳಿತ ಟಿಪ್ಪು ಸುಲ್ತಾನ್‌ ವೇಷಧಾರಿ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ.
Eid Milad Procession in Shimoga
ಮೆರವಣಿಗೆಯಲ್ಲಿ ಮೆಕ್ಕಾ ಮದೀನ ಮತ್ತು ಮಸೀದಿಯ ಮಾದರಿ.
Eid Milad Procession in Shimoga
ಮೆರವಣಿಗೆಯಲ್ಲಿ ಧ್ವಜ ತಿರುಗಿಸಿ ಸಂಭ್ರಮಿಸಿದ ಯುವಕರು.
Eid Milad Procession in Shimoga
ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ.
Eid Milad Procession in Shimoga
ರಸ್ತೆ ಬದಿ ನಿಂತುಕೊಂಡು ಈದ್‌ ಮಿಲಾದ್‌ ಮೆರವಣಿಗೆ ವೀಕ್ಷಿಸಿದ ಜನ.
Eid Milad Procession in Shimoga
ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ರಾರಾಜಿಸಿದ ಟಿಪ್ಪು ಸುಲ್ತಾನ್‌ ಫೋಟೊಗಳು.
Eid Milad Procession in Shimoga
ಕಂಬವೇರಿ ಹಸಿರು ಧ್ವಜ ತಿರುಗಿಸಿದ ಯುವಕರು. ಮೆರವಣಿಗೆಯಲ್ಲಿ ಯುವತಿಯ ಡಾನ್ಸ್.
Eid Milad Procession in Shimoga
ಮೆರವಣಿಗೆಯಲ್ಲಿ ಕುದುರೆ ಏರಿ ಬಂದ ಮೊಹಮದ್‌ ಆಸೀಫ್‌ ಮತ್ತು ಮುಜೀಬ್‌.
Eid Milad Procession in Shimoga
ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿತ್ತು.

ಇದನ್ನೂ ಓದಿ » ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ದಿನ? ಎಲ್ಲೆಲ್ಲಿ ಇರುತ್ತೆ ಸ್ಟಾಪ್?

JNNCE-Admission-Advt-scaled

Eid Milad procession in Shimoga city

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment