SHIVAMOGGA LIVE NEWS | 16 JANUARY 2023
SHIMOGA : ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಮಹಿಳೆಯರನ್ನೆ ಟಾರ್ಗೆಟ್ (target women) ಮಾಡಿಕೊಂಡು ಅವರ ಚಿನ್ನದ ಸರಗಳನ್ನು ಲಪಟಾಯಿಸುತ್ತಿದ್ದಾರೆ.
ಎಲ್ಲೆಲ್ಲಿ ಏನೇನಾಗಿದೆ?
ಘಟನೆ 1 : ಗಾಂಧಿ ನಗರ
ಘಟನೆ 2 : ವಿದ್ಯಾನಗರ
ಘಟನೆ 3 : ಎನ್.ಟಿ.ರಸ್ತೆ
ಘಟನೆ 4 : ಸವಾರ್ ಲೈನ್ ರಸ್ತೆ
ನಕಲಿ ಪೊಲೀಸ್ ಹಾವಳಿ
ಶಿವಮೊಗ್ಗ ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ ನಾಲ್ಕು ಕಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ (target women) ಮಾಡಿದ್ದಾರೆ. 3 ಪ್ರಕರಣದಲ್ಲಿ ಮಹಿಳೆಯರ ಸರ, ಬಳೆಗಳನ್ನು ಲಪಟಾಯಿಸಲಾಗಿದೆ. ಕೋಟೆ ಠಾಣೆಯಲ್ಲಿ ಒಂದು, ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಒಂದೇ ರೀತಿಯ ಕಾರ್ಯಾಚರಣೆ
ನಕಲಿ ಪೊಲೀಸರು ನಾಲ್ಕು ಕಡೆಯು ಒಂದೇ ರೀತಿ ದುಷ್ಕೃತ್ಯ ಎಸಗಿದ್ದಾರೆ. ಹಾಗಾಗಿ ಇಂತಹವರ ಕುರಿತು ಜನರು ಜಾಗೃತರಾಗಬೇಕಿದೆ. ಮಹಿಳೆಯರು ತಮ್ಮ ಚಿನ್ನಾಭರಣದ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.
- ನಾಲ್ಕು ಪ್ರಕರಣದಲ್ಲಿಯು ತಾವು ಪೊಲೀಸ್ ಎಂದು ಪರಿಚಯಿಸಿಕೊಂಡು, ಮಹಿಳೆಯರಲ್ಲಿ ಭರವಸೆ ಮೂಡುವಂತೆ ಮಾಡಿದ್ದಾರೆ. ಆ ಬಳಿಕ ಕೃತ್ಯ ಎಸಗಿದ್ದಾರೆ. ಚಿನ್ನಾಭರಣ ಬಿಚ್ಚಿಸಿಕೊಂಡ ಮರು ಕ್ಷಣ ಅಲ್ಲಿಂದ ಕಾಲು ಕಿತ್ತಿದ್ದಾರೆ.
- ಮೂರು ಪ್ರಕರಣದಲ್ಲಿಯು ಜನ ಸಂಚಾರ ಕಡಿಮೆ ಇರುವ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ್ದಾರೆ. ಹಬ್ಬಗಳಂದೆ ಒಂಟಿ ಮಹಿಳೆಯರನ್ನೆ ಇವರು ಟಾರ್ಗೆಟ್ ಮಾಡಿಕೊಂಡಿದ್ದಾರೆ.
- ಮಹಿಳೆಯರಲ್ಲಿ ಭಯ ಹುಟ್ಟಿಸಿ ಕೃತ್ಯ ಎಸಗಿದ್ದಾರೆ. ‘ಕೊಲೆಯಾಗಿದೆ’, ‘ಕೊಲೆ ಮಾಡುತ್ತಾರೆ’ ಎಂದು ಜೀವ ಭಯ ಮೂಡಿಸಿ, ಚಿನ್ನಾಭರಣಗಳನ್ನು ಬಿಚ್ಚಿಸಿದ್ದಾರೆ.
- ಚಿನ್ನಾಭರಣವನ್ನು ಬಿಚ್ಚಿಸಿದ ನಕಲಿ ಪೊಲೀಸರು ತಾವೇ ಪೊಟ್ಟಣ ಕಟ್ಟಿದ್ದಾರೆ. ನಕಲಿ ಚಿನ್ನಾಭರಣವನ್ನು ಬ್ಯಾಗಿನಲ್ಲಿ ಇಟ್ಟು ಕಳುಹಿಸಿದ್ದಾರೆ.
ತಕ್ಷಣ ಪೊಲೀಸರಿಗೆ ಫೋನ್ ಮಾಡಿ
ಯಾರಂದರೆ ಅವರು ತಮ್ಮನ್ನು ತಾವು ಪೊಲೀಸರು ಎಂದು ಪರಿಚಯಿಸಿಕೊಂಡಾಗ ಜನರು ಎಚ್ಚರ ವಹಿಸಬೇಕಿದೆ. ತಕ್ಷಣಕ್ಕೆ ಪೊಲೀಸ್ ಕಂಟ್ರೋಲ್ ರೂಂಗೆ ಅಥವಾ 112 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬೇಕಿದೆ. ಆಗ ಕಳ್ಳರ ಪತ್ತೆ ಕಾರ್ಯ ಸುಲಭವಾಗಲಿದೆ.
ಇದನ್ನೂ ಓದಿ – ಶಿವಮೊಗ್ಗದ ಮಹಿಳೆಯರೆ ಎಚ್ಚರ, ಹೀಗೂ ಕಳ್ಳತನವಾಗಬಹುದು ಲಕ್ಷಾಂತರ ಮೌಲ್ಯದ ನಿಮ್ಮ ಚಿನ್ನಾಭರಣ
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು