ಇನ್ಮುಂದೆ ಪ್ರತಿ ಜೋರು ಮಳೆಗು ಮುಳುಗುತ್ತೆ ವಿದ್ಯಾನಗರ, ಶಾಂತಮ್ಮ ಲೇಔಟ್, ಕಾರಣವೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | RAIN | 28 ಮೇ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ ನಗರದಲ್ಲಿ ಸಣ್ಣದೊಂದು ಮಳೆಯಾದರೂ (RAIN) ಸಾಕು ಮೊದಲು ಮುಳುಗುವ ಬಡಾವಣೆಗಳ ಪೈಕಿ ಶಾಂತಮ್ಮ ಲೇಔಟ್ ಕೂಡ ಒಂದಾಗಿದೆ. ಪ್ರತಿಷ್ಠಿತ ಬಡಾವಣೆಯಾಗಿದ್ದ ಶಾಂತಮ್ಮ ಲೇಔಟ್’ನಲ್ಲಿ ಇನ್ಮುಂದೆ ಪ್ರತಿ ಮಳೆಗಾಲದಲ್ಲೂ ಆತಂಕದಲ್ಲೇ ಸಮಯ ದೂಡಬೇಕಾಗುತ್ತದೆ.

ಪ್ರಭಾವಿ ಅನಿಸಿಕೊಂಡಿರುವ ರಾಜಕಾರಣಿಗಳು, ಉದ್ಯಮಿಗಳು ಇಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆದರೂ ಮುಳುಗಡೆ ಭೀತಿಯಿಂದ ಇಲ್ಲಿಯ ನಿವಾಸಿಗಳನ್ನು ಪಾರಲು ಮಾಡಲು ಸಾಧ್ಯವಾಗುತ್ತಿಲ್ಲ. ಶಾಂತಮ್ಮ ಲೇಔಟ್ ಮುಳುಗಲು ಪ್ರಮುಖ ಕಾರಣವೇನು? ಈ ಸಮಸ್ಯೆಗೆ ಪರಿಹಾರವೇನು ಅನ್ನುವ ಕುರಿತು ಶಿವಮೊಗ್ಗ ಲೈವ್.ಕಾಂ ಪ್ರತ್ಯಕ್ಷ ವರದಿ ಇಲ್ಲಿದೆ.

2019ರಿಂದ ಜಲ ಕಂಟಕ ಶುರು

ಹೊಳೆಹೊನ್ನೂರು ರಸ್ತೆಯಲ್ಲಿರುವ ಶಾಂತಮ್ಮ ಬಡಾವಣೆ ತುಂಗಾ ನದಿಗೆ ಹೊಂದಿಕೊಂಡಂತೆ ಇದೆ. 2019ರವರೆಗೂ ಈ ಬಡಾವಣೆಗೆ ನೀರು ನುಗ್ಗಿದ ಉದಹಾರಣೆ ಇಲ್ಲ. 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಭೀಕರ ಮಳೆ ಮತ್ತು ತುಂಗಾ ನದಿ ಪ್ರವಾಹದಿಂದ ನೂರಾರು ಮನೆಗಳು ಜಲಾವೃತ್ತಗೊಂಡಿದ್ದವು. ತುಂಗೆಯಲ್ಲಿ 80 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟರೆ ಈ ಬಡಾವಣೆಗೆ ನೆರೆ ಆವರಿಸುತ್ತದೆ. ತುಂಗೆ ಉಕ್ಕಿ ಹರಿದಾಗಷ್ಟೇ ಬಡಾವಣೆಗೆ ನೀರು ನುಗ್ಗುತ್ತದೆ ಎಂಬ ಮಾತನ್ನು ಮೊನ್ನೆ ಸುರಿದ ಮಳೆ ಸುಳ್ಳು ಮಾಡಿದೆ.

ಕಾಲುವೆ ತಂದ ಆಪತ್ತು

ಶಿವಮೊಗ್ಗದ ವಿದ್ಯಾನಗರ ಮೂಲಕ ಹಾದುಹೋಗುವ ತುಂಗಾ ಕಾಲುವೆಯು ಪುರಲೆ ಕೆರೆಗೆ ತಲುಪುತ್ತದೆ. ಅಲ್ಲಿಂದ ಅದು ಭರ್ತಿಯಾಗಿ ತುಂಗಾ ನದಿ ಸೇರುತ್ತದೆ. ಈ ಕಾಲುವೆಯು ಮೊದಲು 30 ಅಡಿಗೂ ಅಧಿಕ ಅಗಲವಿತ್ತು. ಎಷ್ಟೇ ನೀರು ಹರಿದುಬಂದರೂ ಸರಾಗವಾಗಿ ಹರಿದು ಹೋಗುತಿತ್ತು.

Shimoga Nanjappa Hospital

2018-19ರಲ್ಲಿ ಈ ಕಾಲುವೆಗೆ ಸಿಮೆಂಟ್ ತಡೆಗೋಡೆ ಮಾಡಲಾಗಿದೆ. ಅಗಲವನ್ನು 10 ಅಡಿಗೆ ಇಳಿಸಲಾಗಿದ್ದು ನೀರು ರಭಸವಾಗಿ ಹರಿದುಹೋಗದಂತೆ ಮಾಡಲಾಗಿದೆ. ಈ ಕಾಲುವೆಯಲ್ಲಿ ಎಲ್ಲ ಕಾಲದಲ್ಲೂ ಒಂದೆರೆಡು ಅಡಿ ನೀರು ಇರಲೇಬೇಕು. ಅದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಸ್ಥಳೀಯರಿಗೆ ಸಬೂಬು ಹೇಳಿದ್ದಾರೆ.

ವಿದ್ಯಾನಗರದಿಂದ ಪುರಲೆ ಕೆರೆ ತಲುಪುವ ಈ ಕಾಲುವೆ ನಾಲ್ಕು ಕಿ.ಮೀ ಉದ್ದ ಇದ್ದು ಈ ಕಾಲುವೆಗೆ ಹರಿಗೆ ಕೆರೆಯ ಮೂರು ಕಾಲುವೆಗಳು ಬಂದು ಸೇರುತ್ತವೆ.

ಭದ್ರಾ ನೀರು ಸೇರ್ಪಡೆ

ಭದ್ರಾ ಕಾಲುವೆಯ ನೀರು ಹರಿಗೆ ಕೆರೆ ತುಂಬಿ, ಕೋಡಿ ಬಿದ್ದು, ಪುರಲೆ ಬಳಿ ತುಂಗಾ ನದಿಗೆ ಸೇರುತ್ತದೆ. ಹರಿಗೆ ಕೆರೆಗೆ ಒಟ್ಟು ಮೂರು ಕಾಲುವೆಗಳಿದ್ದು ಒಂದು ಪುರಲೆ ಕೆರೆಗೆ, ಇನ್ನೊಂದು ಖಾಸಗಿ ಲೇಔಟ್ ಮೂಲಕ ತುಂಗಾ ಕಾಲುವೆಗೆ, ಇನ್ನೊಂದು ತೋಟ, ಗದ್ದೆಗಳ ಮೂಲಕ ತುಂಗಾ ಕಾಲುವೆ ಸೇರುತ್ತದೆ.

ಭದ್ರಾದಿಂದ ಬರುವ ಎಲ್ಲ ನೀರು ತುಂಗಾ ಕಾಲುವೆ ಮೂಲಕವೇ ಪುರಲೆ ಕೆರೆ ಸೇರಿ ಅಲ್ಲಿಂದ ನದಿಗೆ ಹೋಗುತ್ತದೆ. ಮೂರು ಕಾಲುವೆಗಳ ಪೈಕಿ ಎರಡು ಕಾಲುವೆಗಳು ಒತ್ತುವರಿಯಾಗಿ ಕಿರಿದಾಗಿದೆ. ಮೂರನೇ ಕಾಲುವೆ ಮೂಲಕ ಭಾರೀ ಪ್ರಮಾಣದಲ್ಲಿ ತುಂಗಾ ಕಾಲುವೆಗೆ ಸೇರುವ ನೀರು ಮುಂದೆ ಹರಿಯಲು ಆಗದೆ ಕಾಲುವೆ ಮುಂದೆ ಉಕ್ಕಿ ಶಾಂತಮ್ಮ ಲೇಔಟ್ ಮೂಲಕ ಹೋಗುವ ಎರೆ ಕಾಲುವೆಗೆ ಸೇರುತ್ತದೆ. ಈ ಎರೆ ಕಾಲುವೆ ಸಹ ಕಿರಿದಾಗಿದ್ದು ನೀರು ಉಕ್ಕಿ ಬಡಾವಣೆಗೆ ಆವರಿಸಿಕೊಳ್ಳುತ್ತಿದೆ.

ಕಾಲುವೆ ಅಗಲ ಮಾಡಿ

ಕಾಂಕ್ರೀಟ್ ವಾಲ್ ನಿರ್ಮಿಸುವ ಮೊದಲು ಕಾಲುವೆ 25 ರಿಂದ 30 ಅಡಿ ಅಗಲವಿತ್ತು. ಎಂತಹ ದೊಡ್ಡ ಮಳೆಯಾದರೂ ಸೇತುವೆ ಹಂತದವರೆಗೂ ನೀರು ಬರುತಿತ್ತು. ಈಗ ಕಾಲುವೆ ಅಗಲ 10 ಅಡಿಗೆ ಇಳಿಸಲಾಗಿದೆ. ಇದರಿಂದ ನೀರು ಮುಂದೆ ಹರಿಯಲಾಗದೆ ಉಕ್ಕಿ ಶಾಂತಮ್ಮ ಲೇಔಟ್ ಮೂಲಕ ಹೋಗುವ ಕಾಲುವೆಗೆ ಹೋಗುತ್ತಿದೆ.

ಕಾಂಕ್ರೀಟ್ ವಾಲ್’ಗಳನ್ನು ಕಿತ್ತು ನೀರು ಸರಾಗವಾಗಿ ಹರಿಯುವಂತೆ  ಮಾಡದಿದ್ದರೆ ವಿದ್ಯಾನಗರ, ಶಾಂತಮ್ಮ ಲೇಔಟ್’ನ ನೂರಾರು ಮನೆಗಳು ಮುಳುಗುತ್ತವೆ. ಈ ಬಗ್ಗೆ ಶಾಸಕರಿಗೆ ಅನೇಕ ಬಾರಿ ಸ್ಥಳಕ್ಕೆ ಕರೆದು ತಿಳಿಹೇಳಿದ್ದೇವೆ. ಮಳೆಗಾಲಕ್ಕೂ ಮುನ್ನ ಕ್ರಮ ಕೈಗೊಳ್ಳದಿದ್ದರೆ ಈ ವರ್ಷ ಇನ್ನೆಷ್ಟು ಬಾರಿ ನೀರು ನುಗ್ಗುತ್ತದೆಯೊ ಗೊತ್ತಿಲ್ಲ ಎನ್ನುತ್ತಾರೆ ವಾರ್ಡ್ ಕಾರ್ಪೊರೇಟರ್ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ.

Shimoga Nanjappa Hospital

Shimoga Nanjappa Hospital

ಈಗಲೆ ಎಚ್ಚೆತ್ತುಕೊಳ್ಳದೆ ಹೋದರೆ ವಿದ್ಯಾನಗರ ಮತ್ತು ಶಾಂತಮ್ಮ ಲೇಔಟ್ ಜನ ಪ್ರತಿ ಮಳೆಗಾಲದಲ್ಲೂ ಮುಳುಗಡೆ ಭೀತಿ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ – ಅರೆ ಬೆತ್ತಲಾಗಿ ತಾಲೂಕು ಪಂಚಾಯಿತಿ ಕಚೇರಿ ಕಸ ಗುಡಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment