ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 OCTOBER 2023
SHIMOGA : ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ವೀರಶೈವ ಲಿಂಗಾಯತ ಸಮುದಾಯದವರು ಧ್ವನಿಗೂಡಿಸಬೇಕು ಎಂದು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ- BREAKING NEWS – ಬೆಳ್ಳಂಬೆಳಗ್ಗೆ ಅರ್ಚಕ ಕುಟುಂಬದ ಮೂವರು ಸಜೀವ ದಹನ, ಆಗಿದ್ದೇನು?
ಶಾಮನೂರು ಶಿವಶಂಕರಪ್ಪ ಅವರು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಸಮುದಾಯದ ಕೆಲವರು ಅದನ್ನು ಟೀಕಿಸಿದ್ದಾರೆ. ನಮ್ಮ ಸಮುದಾಯದಲ್ಲು ಬಡವಾರಿದ್ದಾರೆ. ಸರ್ಕಾರಿ ಸವಲತ್ತಿನಿಂದ ವಂಚಿತರಾಗಿರುವವರು ಇದ್ದಾರೆ. ಈ ಬಗ್ಗೆ ಎಲ್ಲರು ಗಂಭೀರವಾಗಿ ಯೋಚಿಸಬೇಕಿದೆ. ರಾಜ್ಯದಲ್ಲಿ ಸದ್ಯ ಧ್ವನಿ ಎದ್ದಿದೆ. ಅದಕ್ಕೆ ಎಲ್ಲರು ಧ್ವನಿಗೂಡಿಸಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನದಿಗಳೆಲ್ಲ ಸಾಗರ ಸೇರುವಂತೆ ಒಳ ಪಂಗಡಗಳು ಬಲಿಷ್ಠವಾಗಿ ವೀರಶೈವ ಲಿಂಗಾಯತ ಸಮುದಾಯ ಬಲಪಡಿಸಬೇಕು. ಜಾತಿವಾರು ಜನಗಣತಿ ಆಗಬೇಕಿದೆ. ಜಾತಿ ಮತ್ತು ಸಮಾಜ ಅತ್ಯಗತ್ಯ. ಹಿಂದೂ ಸಮಾಜ ಒಗ್ಗೂಡಬೇಕಿದೆ. ಇಲ್ಲದೆ ಇದ್ದರೆ ಪಿತೂರಿ ಮಾಡುವವರಿಗೆ ಅವಕಾಶವಾಗಲಿದೆ ಎಂದು ತಿಳಿಸಿದರು.
ಲೆಫ್ಟಿನೆಂಟ್ ಜನರಲ್‌ಗೆ ಪ್ರಶಸ್ತಿ
ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ (lieutenant general) ಬಿ.ಎಸ್.ರಾಜು ಅವರಿಗೆ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ಮಾತನಾಡಿದ ಲೆಫ್ಟೆನೆಂಟ್ ಜನರಲ್ ಬಿ.ಎಸ್.ರಾಜು ಅವರು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅದೃಷ್ಟ ತಮಗೆ ದೊರೆತಿದೆ. ಈ ತಿಂಗಳ ಕೊನೆಯಲ್ಲಿ ನಿವೃತ್ತನಾಗುತ್ತಿದ್ದೇನೆ. ಆ ಬಳಿಕ ಅಜ್ಜಂಪುರದ ತಮ್ಮ ಊರಿನಲ್ಲಿ ನೆಲೆಸುವುದಾಗಿ ತಿಳಿಸಿದರು.
ನಮ್ಮವರನ್ನು ಮರೆಯತ್ತಿದ್ದೇವೆ
ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಶಿವಾಜಿ ಮಹಾರಾಜರ ಸೈನ್ಯವನ್ನು ಸೋಲಿಸಿ ಅಖಂಡ ಭಾರತದ ಪರಿಕಲ್ಪನೆಯನ್ನು ಅವರಿಗೆ ಹೇಳಿಕೊಟ್ಟಿದ್ದು ರಾಣಿ ಬೆಳವಡಿ ಮಲ್ಲಮ್ಮ. ಶಿವಾಜಿಯ ಮಗ ರಾಜಾರಾಮ ಕೆಳದಿ ಚನ್ನಮ್ಮಳ ಆಶ್ರಯದಲ್ಲಿದ್ದಾಗ ಔರಂಗಜೇಬ್ ದಾಳಿ ಮಾಡಿದ್ದ. ಆಗ ಔರಂಗಜೇಬ್‌ನನ್ನು ಸೋಲಿಸಿದ್ದ ಕೆಳದಿ ಚನ್ನಮ್ಮ ನಮ್ಮ ಸಮುದಾಯದವರು. ಅವರು ಕನ್ನಡಿಗರು ಎನ್ನುವುದನ್ನು ನಾವು ತಿಳಿಯಬೇಕು. ಶಿವಾಜಿ ಮಹಾರಾಜರನ್ನು ಮೆರೆಸುವ ಬಗ್ಗೆ ಆಕ್ಷೇಪಣೆ ಇಲ್ಲ. ಅವರನ್ನು ಮೆರೆಸುವ ಭರದಲ್ಲಿ ನಮ್ಮ ನೆಲದ ರಾಜಮನೆತನಗಳನ್ನು ಮರೆಯುತ್ತಿದ್ದೇವೆ ಎಂದರೆ ನಾವು ಎಷ್ಟು ನಿರಭಿಮಾನಿಗಳು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ- ಶಿವಮೊಗ್ಗ ನಗರದಲ್ಲಿ ಎರಡು ದಿನ ಕುಡಿಯುವ ನೀರು ಬರಲ್ಲ
ಇದೆ ಸಂದರ್ಭ ಶಾಸಕರಾದ ಬಿ.ವೈ.ವಿಜಯೇಂದ್ರ ಮತ್ತು ಎಸ್.ಎನ್.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಆಯನೂರು ಮಂಜುನಾಥ್, ಶಾಸಕ ಚನ್ನಬಸಪ್ಪ ಪ್ರಮುಖರಾದ ರುದ್ರಮುನಿ ಸಜ್ಜನ್, ಬೆನಕಪ್ಪ, ಮೋಹನ್, ಹೆಚ್.ಎಂ.ಚಂದ್ರಶೇಖರಪ್ಪ, ಎಸ್.ಎಸ್.ಜ್ಯೋತಿಪ್ರಕಾಶ್, ಈ.ವಿಶ್ವಾಸ, ಅನಿತಾ ರವಿಶಂಕರ್, ಎನ್.ಜೆ.ರಾಜಶೇಖರ್ ಸೇರಿದಂತೆ ಹಲವರು ಹಾಜರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422