ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಸೆಪ್ಟೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಡತಗಳ ವಿಲೇವಾರಿ, ಉಪವಿಭಾಗ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿಯಲ್ಲಿ ಉತ್ತಮ ಸಾಧನೆ ತೋರಿದ ಶಿವಮೊಗ್ಗ ಜಿಲ್ಲೆ ರಾಜ್ಯಮಟ್ಟದ ರಾಂಕಿಂಗ್’ನಲ್ಲಿ ಮೊದಲ ಸ್ಥಾನ ಪಡೆದಿದೆ.
ಕಳೆದ ತಿಂಗಳು ಮೂರನೇ ಸ್ಥಾನದಲ್ಲಿದ್ದ ಶಿವಮೊಗ್ಗ ಜಿಲ್ಲೆ ಈ ತಿಂಗಳು ಮೊದಲ ರಾಂಕ್ ಪಡೆದಿದೆ. ಸಕಾಲ ಯೋಜನೆಯಡಿ ಜಿಲ್ಲೆಯ ಪ್ರಗತಿ ಆಧರಿಸಿ ಪ್ರತಿ ತಿಂಗಳು ರಾಂಕಿಂಗ್ ಬಿಡುಗಡೆ ಮಾಡುವ ಮಾದರಿಯಲ್ಲೇ ಕಂದಾಯ, ಸರ್ವೇ ಇಲಾಖೆಗಳ ಕಡತ ವಿಲೇವಾರಿ, ಉಪವಿಭಾಗ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಈ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯಿಂದಲೂ ಪ್ರತಿ ತಿಂಗಳು ರಾಂಕಿಂಗ್ ನೀಡಲಾಗುತ್ತದೆ.
ಕರೋನ ಅವಧಿಯಲ್ಲಿ ರಾಂಕಿಂಗ್ ಕುಸಿತ
ಕಂದಾಯ ಇಲಾಖೆ ರಾಂಕಿಂಗ್‌ನಲ್ಲಿ ಶಿವಮೊಗ್ಗ ಜಿಲ್ಲೆ ಕರೊನಾ ಅವಧಿಯಲ್ಲಿ ಸಾಕಷ್ಟು ಕುಸಿತ ಕಂಡಿತ್ತು. 15, 17 ರಾಂಕಿಂಗ್‌ಗೆ ಇಳಿದಿದ್ದ ಜಿಲ್ಲೆ ಕ್ರಮೇಣ 5,3 ರಾಂಕ್ ಪಡೆದುಕೊಂಡಿತ್ತು. ಇದೀಗ ಮೊದಲ ರಾಂಕ್ ಪಡೆದಿದೆ.
ಭೂ ಪರಿವರ್ತನೆ ಅರ್ಜಿಗಳ ವಿಲೇವಾರಿ, ಪಹಣಿಯ ಕಲಂ 3 ಮತ್ತು 9ರಲ್ಲಿನ ನ್ಯೂನತೆಗಳನ್ನು ಕಾಲಮಿತಿಯಲ್ಲಿ ತಿದ್ದುಪಡಿ ಸೇರಿ ವಿವಿಧ ವಿಭಾಗಗಳಲ್ಲಿ ಕಡತಗಳ ವಿಲೇವಾರಿ ಪರಿಗಣಿಸಿ ರಾಂಕಿಂಗ್ ಪ್ರಕಟಿಸಲಾಗುತ್ತದೆ.
ಕಚೇರಿಯಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಎಲ್ಲ ಶಾಖಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಎಲ್ಲರ ಸಹಕಾರದಿಂದ ತ್ವರಿತವಾಗಿ ಕಡತಗಳ ವಿಲೇವಾರಿ ಸಾಧ್ಯವಾಗಿದೆ. ಕಚೇರಿಗೆ ಆಗಮಿಸುವ ಸಾರ್ವಜನಿಕರನ್ನು ಅಲೆದಾಡಿಸದೇ ಶೀಘ್ರ ಕೆಲಸ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಸಹಕಾರಿಯಾದ ಇ-ವ್ಯವಸ್ಥೆ
ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಇ-ಆಫೀಸ್ ವ್ಯವಸ್ಥೆ ಅನುಷ್ಠಾನಗೊಳಿ ಸಲಾಗಿದೆ. ಇದರಿಂದ ತ್ವರಿತವಾಗಿ ಕಂದಾಯ ಇಲಾಖೆ ಅರ್ಜಿಗಳ ವಿಲೇವಾರಿಯಾಗುತ್ತಿದೆ. ಕಚೇರಿಯಲ್ಲಿ ಸ್ವೀಕರಿಸಲಾಗುವ ಪ್ರತಿ ಅರ್ಜಿ ಯನ್ನು ಅದೇ ದಿನ ಡಿಜಿಟಲೀಕರಣಗೊಳಿಸಿ ಕಡತ ಸೃಷ್ಟಿಸಲಾಗುತ್ತಿದೆ. ಇದರಿಂದ ಸಂಪೂರ್ಣ ವ್ಯವಸ್ಥೆ ಪಾರದರ್ಶಕವಾಗುವ ಜತೆಗೆ ಕಡತಗಳ ವಿಲೇವಾರಿಗೂ ಅನುಕೂಲವಾಗುತ್ತಿದೆ. ಪ್ರಸ್ತುತ ಶಿವಮೊಗ್ಗ ಜಿಲ್ಲೆ ಮೊದಲ ರಾಂಕ್ ಪಡೆಯಲು ಇ-ಆಫೀಸ್ ವ್ಯವಸ್ಥೆಯ ಕೊಡುಗೆಯೂ ಸಾಕಷ್ಟಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200