ಅಡಕೆ ವ್ಯಾಪಾರಿ ಮೇಲೆ ಅಟ್ಯಾಕ್, ಕಂತೆ ಕಂತೆ ದುಡ್ಡಿನ ಜೊತೆ ಸಿಕ್ಕಿಬಿತ್ತು ದರೋಡೆ ಗ್ಯಾಂಗ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 17 FEBRURARY 2023

SHIMOGA : ಸಿಪ್ಪೆಗೋಟು ಅಡಕೆ ಖರೀದಿಗೆ (Adike Merchant) ಬಂದಿದ್ದ ವ್ಯಾಪಾರಿ ಮೇಲೆ ಹಲ್ಲೆ ನಡೆಸಿ 5 ಲಕ್ಷ ರೂ. ಹಣ ದರೋಡೆ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3.15 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಕೆ ಮಾಡಿದ್ದ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Tunga-Nagara-Police-Nab-five-in-adike-merchant-dacoity

ಯಾರೆಲ್ಲ ಅರೆಸ್ಟ್ ಆಗಿದ್ದಾರೆ?

ಗೋಪಾಳದ ಮಂಜನಾಯ್ಕ (35), ಶಿಕಾರಿಪುರದ ಆಸೀಫ್ ಉಲ್ಲಾ (32), ಕೊನಗವಳ್ಳಿಯ ಗಣೇಶ್ ನಾಯ್ಕ ಅಲಿಯಾಸ್ ಗಣು (28), ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ದಾವಲ್ ಬಡಗಿ (35), ಆರ್.ಎಂ.ಎಲ್ ನಗರದ ರಿಜ್ವಾನ್ ಅಹಮದ್ (48) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೃತ್ಯ ನಡೆದಿದ್ದು ಹೇಗೆ?

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಸುರೇಶ್ ಕುಮಾರ್ (30) ಅಡಕೆ ವ್ಯಾಪಾರ (Adike Merchant) ಮಾಡಿಕೊಂಡಿದ್ದಾರೆ. ‘ತಮ್ಮಲ್ಲಿ ಸಿಪ್ಪೆಗೋಟು ಅಡಕೆ ಇದೆ ಖರೀದಿಸುವಂತೆ’ ಸುರೇಶ್ ಕುಮಾರ್ ಅವರಿಗೆ ಅರೋಪಿಗಳು ತಿಳಿಸಿದ್ದರು. ಕಿಮ್ಮನೆ ಗಾಲ್ಫ್ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿ ಗೋಡೋನಿನಲ್ಲಿ ಅಡಕೆ ಇದೆ ಎಂದು ಹೇಳಿದ್ದರು. ಅಡಕೆ ವ್ಯಾಪಾರಿ ಸುರೇಶ್ ಕುಮಾರ್ ತನ್ನ ಸ್ನೇಹಿತ ಸಂತೋಷ್ ಜೊತೆಗೆ ಫೆ.6ರಂದು ಅಲ್ಲಿಗೆ ತೆರಳಿದ್ದಾಗ ಅಪರಿಚಿತರು ದಾಳಿ ಮಾಡಿದ್ದರು. ಅಡಕೆ ಖರೀದಿಗೆ ತಂದಿದ್ದ 5 ಲಕ್ಷ ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ – ಗಾಜನೂರು ರಸ್ತೆಯಲ್ಲಿ ದರೋಡೆಗೆ ಪ್ಲಾನ್, ಶಿವಮೊಗ್ಗದ ಲಾಡ್ಜ್ ನಲ್ಲಿ ಸ್ಕೆಚ್, ಐವರ ವಿರುದ್ಧ ಕೇಸ್

ಘಟನೆ ಸಂಬಂಧ ಅಡಕೆ ವ್ಯಾಪಾರಿ ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಗಳ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಂಡ ರಚಿಸಿದ್ದರು. ಡಿವೈಎಸ್ಪಿ ಬಾಲರಾಜ್ ಅವರ ಮಾರ್ಗದರ್ಶನದಲ್ಲಿ ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸ್ಐ ರಾಜುರೆಡ್ಡಿ ಬೆನ್ನೂರು, ಎಎಸ್ಐ ಮನೋಹರ್, ಸಿಬ್ಬಂದಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ ಅಡಿವಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಅವರ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ – ಬಾಕ್ಸ್ ತುಂಬಾ ದುಡ್ಡಿದೆ ಅಂತಾ ಕೊಟ್ಟರು, ಎಣಿಸಲು ತೆಗೆದಾಗ ಕಾದಿತ್ತು ಶಾಕ್, ಇಂತವರ ಬಗ್ಗೆ ಹುಷಾರ್

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment