ಶಿವಮೊಗ್ಗದಲ್ಲಿ ಮಾಜಿ ಸಚಿವ ಬೇಗಾನೆ ರಾಮಯ್ಯ ಪುಣ್ಯಸ್ಮರಣೆ, ಯಾರೆಲ್ಲ ಏನೆಲ್ಲ ಹೇಳಿದರು?

ಶಿವಮೊಗ್ಗ: ನಗರದ ಕಾಸ್ಮೋ ಕ್ಲಬ್‌ನಲ್ಲಿ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುಣ್ಯಸ್ಮರಣೆ ನಡೆಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ (Minister) ಕೆ.ಹೆಚ್‌.ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?

SLV-BOOK-SHOP-SHIMOGA

ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಮಾಡಿದ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಮಲೆನಾಡು ಭಾಗದಲ್ಲಿ 250 ಜನ ಇದ್ದರೆ ಮಾತ್ರ ಬೋರ್‌ವೆಲ್ ತೆಗೆಸಬೇಕು ಎಂಬ ಕಾನೂನಿಗೆ ತಿದ್ದುಪಡಿ ತಂದು ಹತ್ತು ಜನರಿದ್ದರೂ ಬೋರ್‌ವೆಲ್ ಕೊರಿಸುವ ಮೂಲಕ ಬೇಗಾನೆ ರಾಮಯ್ಯ ನೀರು ನೀಡಿದರು. ಇಂತಹ ಉತ್ತಮ ಕೆಲಸ ಮಾಡಿದವರನ್ನು ಪಕ್ಷಾತೀತವಾಗಿ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.ಕೆ.ಹೆಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ

ಬೇಗಾನೆ ರಾಮಯ್ಯ ಅವರನ್ನು ಕಳೆದ ಕೊಂಡದ್ದು ನೋವು ತಂದಿದೆ. ಅವರ ಸಿದ್ದಾಂತಗಳನ್ನು ನಾವು ಅಳವಡಿಸಿಕೊಂಡರೆ ಅವರು ನಮ್ಮ ಜತೆಯಲ್ಲೆ ಇರುತ್ತಾರೆ. ಎಲ್ಲ ಪಕ್ಷದವರು ಅವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಅವರ ವ್ಯಕ್ತಿತ್ವವನ್ನು ನಾವೂ ಅಳವಡಿಸಿಕೊಳ್ಳಬೇಕುಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

Kalleshwara-Enterprises.webp

Begane-Ramaiah-smarane-in-Shimoga-cosmo-club.

ಬೇಗಾನೆ ರಾಮಯ್ಯ ಅವರ ಕ್ಷೇತ್ರದಲ್ಲಿ ಶಾಸಕನಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ. ರಾಜಕಾರಣಿಗಳು ಎಂದರೆ ಬೇರೆ ದೃಷ್ಟಿಯಲ್ಲಿ ನೋಡುವ ಕಾಲದಲ್ಲಿ ಇದ್ದೇವೆ. ಅಧಿಕಾರ ಇದ್ದಾಗಲು, ಇಲ್ಲದಿದ್ದಾಲೂ ರಾಮಯ್ಯ ಒಂದೆ ರೀತಿ ಇದ್ದರು. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಅವರ ಅಗಲಿಕೆ ಶೃಂಗೇರಿ ಕ್ಷೇತ್ರಕ್ಕೆ ಮಾತ್ರವಲ್ಲ. ದೇಶಕ್ಕೆ ನಷ್ಟ.ರಾಜೇಗೌಡ, ಶೃಂಗೇರಿ ಶಾಸಕ

JNNCE-ADMISSION-2025-26

ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಜಿ.ಹೆಚ್.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಗಾಯತ್ರಿ ಶಾಂತನಗೌಡ, ಆರ್. ಪ್ರಸನ್ನಕುಮಾರ್, ಬೇಗಾನೆ ರಾಮಯ್ಯ ಅವರ ಪತ್ನಿ ಸೀತಾ ರಾಮಯ್ಯ, ಮಕ್ಕಳಾದ ಗೋಪಾಲಕೃಷ್ಣ, ಡಾ.ಆರತಿ ಕೃಷ್ಣ, ಅಂಜನ್ ರಾಮಯ್ಯ ಮತ್ತಿತರರಿದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಏನಿದು ಕಾರ್ಯಕ್ರಮ? ಯಾರೆಲ್ಲ ಭಾಗವಹಿಸಿದ್ದರು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment