ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 3 JULY 2023
SHIMOGA : ಒಂಭತ್ತು ವರ್ಷ ಕಳೆದರು ಕೊಟ್ಟ ಭರವಸೆಗಳನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ (Sathyagraha) ನಡೆಸಿದರು. ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರು ಅವರಿಗೆ ಬೆಂಬಲವಾಗಿ ಧರಣಿ ನಡೆಸಿದರು.

ಶಿವಮೊಗ್ಗದ ಗಾಂಧಿ ಪಾರ್ಕ್‌ನಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಇಡೀ ದಿನ ಉಪವಾಸ ಸತ್ಯಾಗ್ರಹ ಮಾಡಿದರು.
ಏನೆಲ್ಲ ಹೇಳಿದರು ಮಾಜಿ ಮಿನಿಸ್ಟರ್?
[su_quote]ಬಿಜೆಪಿಯವರು ತಾವು ಕೊಟ್ಟ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಮನೆಗಳನ್ನು ಹಂಚಿಕೆ ಮಾಡಲಿಲ್ಲಿ. ಉದ್ಯೋಗ ಕೊಡಲಿಲ್ಲ. ಡಾಲರ್ ದರ ಕಡಿಮೆ ಮಾಡುವುದಾಗಿ ಘೋಷಿಸಿದ್ದರು. ಅದನ್ನೂ ಮಾಡಿಲ್ಲ.[/su_quote]

[su_quote]ಅಧಿಕಾರ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ಹಪಾಹಪಿತನಕ್ಕೆ ಒಳಗಾಗಿದ್ದಾರೆ. ಹಿಂದು ಧರ್ಮದ ಪ್ರತಿಪಾದಕ ಗಾಂಧೀಜಿಯವರನ್ನೇ ದೂರ ತಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಧೈರ್ಯವು ಇಲ್ಲ. ಹಿಂದು ಧರ್ಮದಲ್ಲಿ ಇರುವ ನ್ಯೂನತೆ ಸರಿಪಡಿಸುವ ಬಗ್ಗೆ ಮಾತಾಡುವುದೇ ಇಲ್ಲ.[/su_quote]

ಧರಣಿ ನಡೆಸಿದ ಕಾಂಗ್ರೆಸಿಗರು
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಉಪವಾಸ ಸತ್ಯಾಗ್ರಹ (Sathyagraha) ನಡೆಸಿದರು. ಕೆಲವರು ಅವರೊಂದಿಗೆ ಉಪವಾಸ ನಡೆಸಿದರು. ಇನ್ನು ಹಲವು ಮುಖಂಡರು, ಕಾರ್ಯಕರ್ತರು ಗಾಂಧಿ ಪಾರ್ಕ್‌ನಲ್ಲಿ ಸಂಜೆವರೆಗೆ ಧರಣಿ ನಡೆಸಿದರು. ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ – ಶಾಸಕಿ ಶಾರದಾ ಪೂರ್ಯಾನಾಯ್ಕ್‌ಗೆ ವಿಧಾನಸಭೆಯಲ್ಲಿ ಮಹತ್ವದ ಜವಾಬ್ದಾರಿ ವಹಿಸಿದ ಜೆಡಿಎಸ್
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಮುಖರಾದ ಆರ್.ಎಂ. ಮಂಜುನಾಥ್ ಗೌಡ, ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಎಸ್.ಪಿ. ದಿನೇಶ್, ವಿಜಯಕುಮಾರ್, ಹೆಚ್.ಸಿ. ಯೋಗೇಶ್, ಚಂದ್ರಭೂಪಾಲ್, ವಿಜಯ್, ಕಲೀಂ ಪಾಷಾ, ಇಸ್ಮಾಯಿಲ್ ಖಾನ್, ವಿನೋದ್‍ಕುಮಾರ್, ಕಲಗೋಡು ರತ್ನಾಕರ್, ಹೆಚ್.ಪಿ.ಗಿರೀಶ್, ಕೆ. ದೇವೇಂದ್ರಪ್ಪ, ವಿನಯ್ ತಾಂಡ್ಲೆ, ಬಾಲಾಜಿ ಶೆಟ್ಟಿ, ವಿಶ್ವನಾಥಕಾಶಿ, ಮಧುಸೂದನ್, ಚೇತನ್, ಸುವರ್ಣ ನಾಗರಾಜ್, ನಾಗರಾಜ್, ಮಂಜುನಾಥ್ ಪುರಲೆ, ಆರೀಫ್, ಯಮುನಾ ರಂಗೇಗೌಡ, ಕವಿತಾ ರಾಘವೇಂದ್ರ, ವೇದಾ ವಿಜಯಕುಮಾರ್ ಮತ್ತಿತರರಿದ್ದರು.
ಇದನ್ನೂ ಓದಿ – ಶಿವಮೊಗ್ಗ ಶಾಸಕರ ಕಚೇರಿಯಲ್ಲೇ ಸಭೆ ಮಧ್ಯೆ ವ್ಯಕ್ತಿ ಮೇಲೆ ಹಲ್ಲೆ
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















