SHIVAMOGGA LIVE | 20 JUNE 2023
SHIMOGA : ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್‌ನಲ್ಲಿ (Facebook Market Place) ಕಾರು ಮಾರಾಟಕ್ಕಿದೆ ಎಂಬುದನ್ನು ಗಮನಿಸಿ ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು 1 ಲಕ್ಷ ರು. ಹಣ ಕಳೆದುಕೊಂಡಿದ್ದಾರೆ. ಸೇನೆಯ ಅಧಿಕಾರಿಯ ಸೋಗಿನಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರನ್ನು ವಂಚಿಸಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಹೇಗಾಯ್ತು ವಂಚನೆ?
ಫೇಸ್‌ಬುಕ್‌ನ ಮಾರ್ಕೆಟ್ ಪ್ಲೇಸ್ ಪೇಜ್‌ನಲ್ಲಿ (Facebook Market Place) ಆಲ್ಟೋ ಕಾರು ಮಾರಾಟಕ್ಕಿದೆ ಎಂದು ಪೋಸ್ಟ್ ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದ ಶಿವಮೊಗ್ಗದ ವ್ಯಕ್ತಿ ಪೋಸ್ಟ್‌ನಲ್ಲಿದ್ದ ಮಾಲೀಕರ ನಂಬರ್‌ಗೆ ಕರೆ ಮಾಡಿದ್ದಾರೆ. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ತಾನು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ನಂಬಿಸಿದ್ದಾನೆ. ಕಾರಿನ ಫೋಟೊ, ಆರ್.ಸಿ. ದಾಖಲೆಗಳನ್ನು ಶಿವಮೊಗ್ಗದ ವ್ಯಕ್ತಿಗೆ ವಾಟ್ಸಪ್ ಮಾಡಿದ್ದಾನೆ. ಅಲ್ಲದೆ, ಕಾರು ಖರೀದಿಗೆ ತಾವು ಇಲ್ಲಿವರೆಗೆ ಬರುವುದು ಬೇಡ, ಟ್ರಾನ್ಸ್‌ಪೋರ್ಟ್ ಚಾರ್ಜ್ ನೀಡಿದರೆ ಸಾಕು ಎಂದು ತಿಳಿಸಿದ್ದಾನೆ.

ಇದನ್ನು ನಂಬಿದ ಶಿವಮೊಗ್ಗದ ವ್ಯಕ್ತಿ ಸೇನಾಧಿಕಾರಿ ಹೇಳಿದ ಬ್ಯಾಂಕ್ ಖಾತೆಗೆ ಕಾರಿನ ಮೊತ್ತ, ಟ್ರಾನ್ಸ್‌ಪೋರ್ಟ್ ಚಾರ್ಜ್ ಸೇರಿ ಒಟ್ಟು 1,01,998 ರೂ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿದ್ದಾರೆ. ಹಣ ಪಡೆದ ಬಳಿಕ ಸೇನಾಧಿಕಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೆಳಗ್ಗೆ ಬಸ್ ಇಳಿಯುವ ಹೊತ್ತಿಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗೆ ಕಾದಿತ್ತು ಶಾಕ್
ವಂಚನೆಗೊಳಗಾಗಿರುವುದು ಅರಿವಾಗುತ್ತಿದಂತೆ ಶಿವಮೊಗ್ಗದ ವ್ಯಕ್ತಿ 1930 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಲ್ಲದೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ – IMPACT | ಶಿವಮೊಗ್ಗ ಲೈವ್ ವರದಿ ಇಂಪ್ಯಾಕ್ಟ್, ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ ತಪ್ಪಿತು ಮತ್ತಷ್ಟು ಅಪಘಾತ
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





