ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 APRIL 2021
ರಾಜ್ಯ ಸರ್ಕಾರದ ಮಾರ್ಗ ಸೂಚಿ ಹಿನ್ನೆಲೆ ಶಿವಮೊಗ್ಗದಲ್ಲಿ ಇವತ್ತು ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ನಗರದ ಪ್ರಮುಖ ವಹಿವಾಟು ಕೇಂದ್ರಗಳಾದ ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಹೆಚ್.ರೋಡ್‍ನಲ್ಲಿ ಬಹುತೇಕ ಮಳಿಗೆಗಳ ಬಾಗಿಲು ಹಾಕಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜವಳಿ, ಪಾದರಕ್ಷೆ, ಆಭರಣ, ಎಲಕ್ಟ್ರಾನಿಕ್ ವಸ್ತುಗಳು ಮಾರಾಟಗಾರರು ತಮ್ಮ ಮಳಿಗೆಗಳ ಬಾಗಿಲು ಹಾಕಿದ್ದಾರೆ. ಆದ್ದರಿಂದ ಈ ರಸ್ತೆಯಲ್ಲಿ ಜನ ಸಂಚಾರ ತಗ್ಗಿದೆ. ಮಧ್ಯಾಹ್ನದ ವೇಳೆಗೆ ರಸ್ತೆ ಬಿಕೋ ಅನ್ನುತ್ತಿದ್ದವು.
ಗಾಂಧಿ ಬಜಾರ್ ವ್ಯಾಪಾರಿಗಳ ತಳಮಳ
ಸರ್ಕಾರದ ನಿರ್ಧಾರ ಗಾಂಧಿ ಬಜಾರ್ ವ್ಯಾಪಾರಿಗಳಲ್ಲಿ ತಳಮಳ ಸೃಷ್ಟಿಸಿದೆ. ಕಳೆದ ವರ್ಷ ಲಾಕ್‍ಡೌನ್‍ನಿಂದಾಗಿ ಸುಧಾರಿಸಿಕೊಳ್ಳಲು ವ್ಯಾಪಾರಿಗಳು ಹರಸಾಹಸು ಪಡುತ್ತಿದ್ದಾರೆ. ಈ ನಡುವೆ ಮತ್ತೊಮ್ಮೆ ಬಾಗಿಲು ಹಾಕಿಸಿರುವುದು ತಮ್ಮ ವಹಿವಾಟು ಮತ್ತಷ್ಟು ಕುಸಿತ ಕಾಣುವ ಭೀತಿಯಲ್ಲಿದ್ದಾರೆ. ಹಾಗಾಗಿ ಇವತ್ತು ಬೆಳಗ್ಗೆ ಮಾಲೀಕರು, ಕೆಲಸಗಾರರು ಅಂಗಡಿಗಳ ಬಳಿಗೆ ಬಂದಿದ್ದರು. ಆದರೆ ಪೊಲೀಸರು ಗಸ್ತು ತಿರುಗಿ, ಬಾಗಿಲು ತೆಗೆಯದಂತೆ ಸೂಚಿಸಿದರು.
ನೆಹರೂ ರೋಡ್ ಕ್ಲೋಸ್
ನೆಹರೂ ರಸ್ತೆಯ ಸ್ಥಿತಿ ಭಿನ್ನವೇನಲ್ಲ. ಇಲ್ಲಿಯೂ ವ್ಯಾಪಾರಿಗಳು ಮಳಿಗೆಗಳನ್ನು ಬಂದ್ ಮಾಡಿದ್ದಾರೆ. ಇದರಿಂದ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನೆಹರೂ ರಸ್ತೆ ಇವತ್ತು ಖಾಲಿ ಖಾಲಿಯಾಗಿತ್ತು. ಇತ್ತ ದುರ್ಗಿಗುಡಿಯಲ್ಲೂ ಜನ ಸಂದಣಿ ಕಡಿಮೆಯಾಗಿದೆ.
ವಾಹನ ಸಂಚಾರವು ಇಳಿಮುಖ
ವ್ಯಾಪಾರ, ವಾಹಿವಾಟಿಗೆ ನಿರ್ಬಂಧ ವಿಧಿಸಿರುವುದರಿಂದ ವಾಹನ ದಟ್ಟಣೆಯು ತಗ್ಗಿದೆ. ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದ ಗಾಂಧಿ ಬಜಾರ್‍ನಲ್ಲಿ ಇವತ್ತು ರಸ್ತೆ ಬಹುತೇಕ ಖಾಲಿಯಾಗಿತ್ತು. ತರಕಾರಿ ಮತ್ತು ಅಗತ್ಯ ವಸ್ತುಗಳ ಪೂರೈಕೆ ಹಾಗೂ ಖರೀದಿಗೆ ಬಂದವರ ವಾಹನಗಳ ಸಂಚಾರವಿತ್ತು. ಉಳಿದಂತೆ ನಗರದಾದ್ಯಂತ ವಾಹನ ಸಂಚಾರವು ಕಡಿತವಾಗಿತ್ತು.
ಇದನ್ನೂ ಓದಿ – ವ್ಯಾಪಾರಿಗಳಿಗೆ ನಿರ್ಬಂಧ, ಚನಾವಣಾ ಪ್ರಚಾರಕ್ಕೆ ಗುಂಪು ಗುಂಪು ಜನ, ಭದ್ರಾವತಿ ನಾಗರಿಕರಲ್ಲಿ ಕರೋನ ಭಯ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]