ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 SEPTEMBER 2023
SHIMOGA : ಜಿಲ್ಲೆಯಾದ್ಯಂತ ಗಣೇಶೋತ್ಸವವನ್ನು (Ganesh Festival) ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೂರನೇ ದಿನವಾದ ಇವತ್ತು ಜಿಲ್ಲೆಯಲ್ಲಿ ಅತಿ ಹೆಚ್ಚು ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮೂರೂವರೆ ಸಾವಿರ ಗಣಪತಿ
ಜಿಲ್ಲೆಯದ್ಯಂತ 3,511 ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನ (ಸೆ.18) ರಂದು 341 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಸೆ.19ರಂದು 48 ವಿಸರ್ಜನೆ ಮಾಡಲಾಗಿದ್ದು, ಸೆ.20ರಂದು 989 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ. 4ನೇ ದಿನ 168 ಗಣೇಶ ಮೂರ್ತಿಗಳನ್ನು, 5ನೇ ದಿನ 711 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು
ಮೂರನೇ ದಿನ ಹೆಚ್ಚಿನ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತಿದೆ. ಆದ್ದರಿಂದ ಇವತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಳಿಕ ಮೆರವಣಿಗೆ ನಡೆಸಿ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಡೊಳ್ಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ವಿವಿಧೆಡೆ ಅನ್ನಸಂತರ್ಪಣೆ
ಗಣೇಶ ಹಬ್ಬದ (Ganesh Festival) ಹಿನ್ನೆಲೆ ವಿವಿಧೆಡೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಎಪಿಎಂಸಿ ತರಕಾರಿ ಮತ್ತು ಸೊಪ್ಪು ಸ್ನೇಹಿತರ ಗಣಪತಿ ಬಳಗ ವತಿಯಿಂದ 12ನೇ ವರ್ಷದ ಗಣಪತಿ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಪ್ರತಿದಿನ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ಸಮಿತಿ ಅಧ್ಯಕ್ಷ ಸೊಪ್ಪು ಚಂದ್ರು, ಉಪಾಧ್ಯಕ್ಷ ಸಂದೀಪ್, ಕಾರ್ಯದರ್ಶಿ ಎಂ.ಎಸ್.ರಾಮು, ಖಜಾಂಚಿ ಅಣ್ಣಪ್ಪ, ರಾಜು.ಸಿ.ಕೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ವಿಜೃಂಭಣೆಯ ಗಣೇಶ ಚತುರ್ಥಿ, ಪ್ರತಿಷ್ಠಾಪನೆ ಆಯ್ತು ‘ಹಿಂದೂ ಮಹಾಸಭʼ ಗಣಪತಿ, ಎಲ್ಲೆಲ್ಲಿ ಹೇಗಿತ್ತು ವೈಭವ?
ಇತ್ತ ಶಿವಮೊಗ್ಗದ ಕಾಮಾಕ್ಷಿ ಬೀದಿಯಲ್ಲಿ ಶ್ರೀ ಚಿಕ್ಕೇರಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 84ನೇ ವರ್ಷದ ಗಣೇಶೋತ್ಸವದ ಅಂಗವಾಗಿ 1008 ಗಣಪತಿ ಯಾಗ ಆಯೋಜಿಸಲಾಗಿದೆ. ಸೆ.26ರಂದು ಯಾಗ ನಡೆಯಲಿದ್ದು, ಅನ್ನಸಂತರ್ಪಣೆ ಮಾಡಲಾಗುತ್ತಿದೆ. ಸೆ.27ರಂದು ರಾಜಬೀದಿ ಉತ್ಸವವನ್ನು ಆಯೋಜಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422