ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 29 MAY 2023
SHIMOGA : ವ್ಯಾಪಾರದಲ್ಲಿ ಒಳ್ಳೆಯ ಲಾಭವಾಗಿದೆ. ಆದ್ದರಿಂದ ಬಂಗಾರ ಮತ್ತು ಹಣವನ್ನು ಗಿಫ್ಟ್ (Gift) ರೂಪದಲ್ಲಿ ನಿಮ್ಮ ವಿಳಾಸಕ್ಕೆ ಕಳುಹಿಸುತ್ತೇನೆ ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಹಣ ವಂಚಿಸಲಾಗಿದೆ.
ವಾಟ್ಸಪ್‌ನಲ್ಲಿ ಅನಾಮಧೇಯ ಮೆಸೇಜ್
ಶಿವಮೊಗ್ಗದ ಮಹಿಳೆಯೊಬ್ಬರಿಗೆ (ಹೆಸರು ಗೌಪ್ಯ) ಏ.8ರಂದ ಅನಾಮಧೇಯ ನಂಬರ್ ಒಂದರಿಂದ ವಾಟ್ಸಪ್ ಮೆಸೇಜ್ ಬಂದಿತ್ತು. ಬಳಿಕ ಮಹಿಳೆಯು ಮೆಸೇಜ್ ಮಾಡಿದ ವ್ಯಕ್ತಿಯನ್ನು ವಾಟ್ಸಪ್ ಮೂಲಕವೆ ಪರಿಚಯ ಮಾಡಿಕೊಂಡಿದ್ದಾರೆ. ಮೆಸೇಜ್ ಮಾಡಿದಾತ, ʼನನಗೆ ವ್ಯಾಪಾರದಲ್ಲಿ ದೊಡ್ಡ ಮಟ್ಟಿಗೆ ಲಾಭವಾಗಿದೆ. ನಿಮಗೆ ಹಣ ಮತ್ತು ಬಂಗಾರವನ್ನು ಗಿಫ್ಟ್ ಕಳುಹಿಸುತ್ತೇನೆ. ನಿಮ್ಮ ವಿಳಾಸಕ್ಕೆ ಗಿಫ್ಟ್ ತಲುಪಲಿದೆʼ ಎಂದು ತಿಳಿಸಿದ್ದ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ ನೆಟ್ಟಿಗರು, ಏನೇನು ಪ್ರಶ್ನೆ ಕೇಳಿದ್ದಾರೆ?
ಕೊರಿಯರ್ ಏಜೆಂಟ್‌ನಿಂದ ಫೋನ್ ಕರೆ
ಏ.15ರಂದು ಮಹಿಳೆ ನಂಬರ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಕೊರಿಯರ್ ಏಜೆಂಟ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮಗೆ ಪಾರ್ಸಲ್ ಬಂದಿದೆ. ಇದನ್ನು ತಲುಪಿಸಬೇಕಿದ್ದರೆ ವಿವಿಧ ಚಾರ್ಜ್‌ಗಳಾಗಲಿವೆ ಎಂದು ತಿಳಿಸಿದ್ದಾನೆ. ಆತನ ಮಾತು ನಂಬಿದ ಮಹಿಳೆ ಕೇಳಿದಷ್ಟು ಹಣ ನೀಡಿದ್ದಾರೆ. ಫೋನ್ ಪೇ ಮತ್ತು ಎಟಿಎಂ ಮೂಲಕ ಒಟ್ಟು 3.59 ಲಕ್ಷ ರೂ. ಹಣವನ್ನು ತಲುಪಿಸಿದ್ದಾರೆ. ಪಾರ್ಸಲ್ ಬಾರದಿದ್ದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಅನಾಮಧೇಯ ಮೆಸೇಜ್‌ಗೆ ಉತ್ತರಿಸಬೇಡಿ
ವಾಟ್ಸಪ್‌ನಲ್ಲಿ ಅನಾಮಧೇಯ ಮೆಸೇಜ್‌ಗಳಿಗೆ ಪ್ರತಿಕ್ರಿಯೆ ನೀಡುವ ಮುನ್ನ ಎಚ್ಚರ ವಹಿಸಬೇಕಿದೆ. ಗಿಫ್ಟ್ (Gift) ಕಳುಹಿಸುವುದು, ಉದ್ಯೋಗ ಕೊಡಿಸುವುದು ಸೇರಿ ನಾನಾ ಬಗೆಯಲ್ಲಿ ವಂಚನೆ ಮಾಡಲಾಗುತ್ತಿದೆ. ಗುರುತು ಪರಿಚಯವಿಲ್ಲದವರು ಉಡುಗೊರೆ ನೀಡಲು ಕಾರಣವೇನು? ಆಮಿಷಗಳಿಗೆ ಬಲಿಯಾದರೆ ವಂಚನೆಗೊಳಗಾಗಬೇಕಾಗುತ್ತದೆ. ಈ ಬಗ್ಗೆ ಜನರು ಜಾಗೃತ ವಹಿಸಬೇಕಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422